ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತವಾಗಿದೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ (55) ಮೇಲೆ ಚಾಕು ಇರಿತವಾಗಿದೆ. ಬೆಳಗಾವಿ
ಜಯ ನಗರದ ನಿವಾಸದ ಬಳಿಯಲ್ಲಿ ಘಟನೆ ನಡೆದಿದೆ.

ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ಗಾಯವಾಗಿದೆ. ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಪೃಥ್ವಿ ಸಿಂಗ್ ರನ್ನು ದಾಖಲಿಸಲಾಗಿದೆ. ಇನ್ನು ಕೆಎಲ್ಇ ಆಸ್ಪತ್ರೆಗೆ ಎಂಎಲ್‌ಸಿ ಚೆಲುವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಭೇಟಿ ನೀಡಿದ್ದಾರೆ.

ಪೃಥ್ವಿ ಸಿಂಗ್ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅತ್ಯಾಪ್ತರಾಗಿದ್ದಾರೆ. ಇ‌ನ್ನು ಎಂಎಲ್‌ಸಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಆಪ್ತರಿಂದ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದೆ. ಸದ್ದಾಂ, ಸುಜಯ್ ಜಾಧವ್, ಚನ್ನರಾಜ ಬಾಡಿಗಾರ್ಡ್ ರಿಂದ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ.

ವಿಡಿಯೋ ಮಾಡಿ ಕಾಂಗ್ರೆಸ್ ಎಂಎಲ್‌ಸಿ ಚನ್ನರಾಜ್ ಹಟ್ಟಿಹೊಳಿ ಹಲ್ಲೆ ಮಾಡಿಸಿದ್ದಾರೆ ಅಂತಾ ಗಂಭೀರ ಆರೋಪ ಮಾಡಲಾಗಿದೆ. ಚನ್ನರಾಜ್ ಆಪ್ತರು ಪೃಥ್ವಿ ಸಿಂಗ್ ಜೊತೆಗೆ ಮಾತನಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಜಯೇಂದ್ರ ಭೇಟಿ..!
ಬಿಜೆಪಿ ಕಾರ್ಯಕರ್ತ ಪೃಥ್ವಿಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ವಿಚಾರವಾಗಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪೃಥ್ವಿಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಬಿ.ವೈ ವಿಜಯೇಂದ್ರ ಹೇಳಿಕೆ ನೀಡಿದ್ದು, ಪೃಥ್ವಿಸಿಂಗ್ ನಮ್ಮ ರಾಜ್ಯ ಕಾರ್ಯಕಾರಣಿಯ ಸದಸ್ಯ, ಎಸ್ ಸಿ ಮೋರ್ಚಾ ಸದಸ್ಯರಾಗಿದ್ದಾರೆ. ಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ, ಅವರ ಗನ್ ಮ್ಯಾನ್ ಸದ್ಧಾಂ, ಪಿಎ ಸುಜಯ್ ಜಾಧವ್ ಸೇರಿ ಹಲ್ಲೆ ಮಾಡಿದ್ದಾರೆ.

ಜಯನಗರದ ಪೃಥ್ವಿಸಿಂಗ್ ನಿವಾಸಕ್ಕೆ ಈ ಎಲ್ಲರೂ ಇಂದು ಸಂಜೆ ನಾಲ್ಕೂವರೆಗೆ ಹೋಗಿದ್ದರು. ಬಳಿಕ ಮನೆಯಿಂದ ಪೃಥ್ವಿಸಿಂಗ್‌ರನ್ನು ಹೊರಗೆ ಕರೆಸುತ್ತಾರೆ. ಈ ವೇಳೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯುತ್ತದೆ. ಇದನ್ನು ವಿಡಿಯೋ ರೆಕಾರ್ಡ್ ಮಾಡಲು ಪೃಥ್ವಿಸಿಂಗ್ ಮುಂದಾಗುತ್ತಾರೆ.
ಆಗ ಪೃಥ್ವಿಸಿಂಗ್ ಮೊಬೈಲ್ ಕಸಿದುಕೊಂಡು ಹಲ್ಲೆ ಮಾಡಲಾಗುತ್ತದೆ. ಎಂಎಲ್‌ಸಿ ಚೆನ್ನರಾಜ್ ಪ್ರಭಾವಿ ಇದ್ದಾರೆ, ಇವರ ಸಹೋದರಿ ಲಕ್ಷ್ಮಿ ಹೆಬ್ಬಾಳ್ಕರ್ ಸಚಿವೆಯಾಗಿದ್ದಾರೆ. ಇಷ್ಟು ಪ್ರಭಾವ ಇದ್ದಾಗಲೇ ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆಸಲು ಸಾಧ್ಯ. ಆಡಳಿತ ಪಕ್ಷದ ಸದಸ್ಯ ಮೊಬೈಲ್ ಕಿತ್ತುಕೊಂಡು ಚೂರಿ ಇರಿದಿದ್ದು ಖಂಡನೀಯ ಅಂತಾ ಆಕ್ರೋಶ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರವೇ ಬೆಳಗಾವಿಯಲ್ಲಿದೆ, ಇಂಥ ವೇಳೆ ಹಲ್ಲೆ ನಡೆಸಲಾಗಿದೆ. ದಲಿತ ಮುಖಂಡನ ಮೇಲೆ ಕಾಂಗ್ರೆಸ್ ನಾಯಕರು ಹಲ್ಲೆ ಮಾಡಿ ದರ್ಪ ತೋರಿದ್ದಾರೆ. ತಕ್ಷಣವೇ ತಡ ಮಾಡದೇ ಕೇಸ್ ದಾಖಲಿಸಿ ಚನ್ನರಾಜ್ ಸೇರಿ ಎಲ್ಲರನ್ನೂ ಬಂಧಿಸಬೇಕು. ಪೊಲೀಸ್ ವ್ಯವಸ್ಥೆ ಮೇಲೆ ನಮಗೆ ವಿಶ್ವಾಸ ಇಲ್ಲ. ಪೃಥ್ವಿಸಿಂಗ್ ಭಯಭೀತರಾಗಿದ್ದು,
ನಮ್ಮ ಕುಟುಂಬ ಸದಸ್ಯರಿಗೆ ಭದ್ರತೆ ಕೊಡಿ ಎಂದು ಮನವಿ ಮಾಡ್ತಿದ್ದಾರೆ. ಈ ಎಲ್ಲರನ್ನು ಇಂದು ರಾತ್ರಿಯೇ ಬಂಧಿಬೇಕು ಎಂದು ಸಿಎಂಗೆ ಒತ್ತಾಯಿಸಿರೋ ವಿಜಯೇಂದ್ರ, ಈ ಘಟನೆ ಗಂಭೀರವಾಗಿ ತೆಗೆದುಕೊಳ್ಳಬೇಕು, ಎಲ್ಲ ದುಷ್ಟರನ್ನು ಬಂಧಿಸಬೇಕು. ಬಂಧಿಸದಿದ್ದರೆ ರಾಜ್ಯದ ನಮ್ಮ ಬಿಜೆಪಿ ಕಾರ್ಯಕರ್ತರು ಬೀದಿಗೆ ಇಳಿಬೇಕಾಗುತ್ತದೆ ಅಂತಾ ಎಚ್ಚರಿಸಿದ್ದಾರೆ.

error: Content is protected !!