ಮುಂಡಗೋಡ ತಾಲೂಕಿನ ಸಾಲಗಾಂವ್ ಬಾಣಂತಿದೇವಿ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಇವತ್ತಿಂದ ಮೂರು ದಿನ ಜಾತ್ರೆಯ ಸದ್ದು ಗದ್ದಲ ಇದ್ದೇ ಇರತ್ತೆ. ಅದ್ರ ಜೊತೆ ಜಾತ್ರೆಯ ಅಂಗಳದಲ್ಲಿ ಅನಧಿಕೃತವಾಗಿ ನಡೆಯುವ ಅಡ್ಡ ದಂಧೆಗಳೂ ಕೂಡ ಹುಟ್ಟಿಕೊಂಡು ಜಾತ್ರೆಗೆ ಬರುವ ಸಭ್ಯಸ್ಥರಿಗೆ ಮಾರಕವಾಗ್ತಿವೆ. ಬಹುಶಃ ಖಾಕಿ ಪಡೆಗೆ ಇದೇಲ್ಲ ಗೊತ್ತಿದೆಯೋ ಇಲ್ವೊ ನಮಗಂತೂ ಗೊತ್ತಿಲ್ಲ. ಆದ್ರೆ, ಜಾತ್ರೆಗೆ ಹೋದ ಅನೇಕ ಜನ ಸಭ್ಯಸ್ಥರು ಅಲ್ಲಿನ “ಅಂಧಾ” ಗೇಮ್ ನೋಡಿ ವಿಡಿಯೋ ಕಳಿಹಿಸಿ “ಪಬ್ಲಿಕ್ ಫಸ್ಟ್” ಗೆ ಮಾಹಿತಿ ನೀಡಿದ್ದಾರೆ. ಅಂದಹಾಗೆ, ಈ ಆಟದ ಹೆಸರು ನಮಗಂತೂ ಗೊತ್ತಿಲ್ಲ. ಆದ್ರೆ, ಇಲ್ಲಿ ಹಣ ಅನ್ನೋದು ಹೊಳೆಯಂತೆ ಹರಿಯುತ್ತಿದೆ.
ಪವಾಡಗಳ ಸನ್ನಿಧಾನ..!
ನಿಮಗೆ ನೆನಪಿರಲಿ, ಬಾಣಂತಿದೇವಿಯ ಸನ್ನಿಧಾನದಲ್ಲಿ ಬಹುತೇಕ ಮುಂಡಗೋಡ ತಾಲೂಕಿನ ಸುತ್ತ ಮುತ್ತಲಿನ ಭಕ್ತರು ಬಂದಿರ್ತಾರೆ. ಬಾಣಂತಿದೇವಿಗೆ ಹರಕೆ ಹೊತ್ತು ತೆಪ್ಪದ ತೇರಿನ ದರ್ಶನ ಪಡೀತಾರೆ. ಅಲ್ದೆ ಪುಟ್ಟ ಪುಟ್ಟ ಕಂದಮ್ಮಗಳನ್ನು ಕೆರೆಯಲ್ಲಿ ತೇಲಿ ಬಿಟ್ಟು ಹರಕೆ ತೀರಿಸ್ತಾರೆ. ಅಸಲು, ಬಾಣಂತಿದೇವಿಯ ಚಮತ್ಕಾರ, ಪವಾಡ ನಿಜಕ್ಕೂ ರೋಮಾಂಚಕ. ಹೀಗಿದ್ದಾಗ್ಯೂ ಈ ಜಾತ್ರೆಯಲ್ಲಿ ಕೆಲವು ಅಡ್ಡ ದಂಧೆಗಳು ಭಕ್ತರಿಗೆ ಇನ್ನಿಲ್ಲದ ಕಿರಿಕಿರಿ ತರುತ್ತಿವೆ.
ಕಲರ್ ಕಲರ್ ಆಟ..!
ಅಸಲು, ಜಾತ್ರೆಯಲ್ಲಿ ಕಲರ್ ಕಲರ್ ನಲ್ಲಿ ಬಾಲ್ ಮೂಲಕ ಎಸೆಯುವ ಆಟ ನಡೀತಿದೆ. ಈ ಆಟದಲ್ಲಿ ಬಣ್ಣಗಳ ಮೇಲೆ ದುಡ್ಡು ಕಟ್ಟಿ ಬಾಲು ಎಸೆಯಲಾಗುತ್ತದೆ. ಹಾಗೆ ಎಸೆಯಲಾದ ಬಾಲ್ ಯಾವ ಬಣ್ಣದ ಮೇಲೆ ಹೋಗಿ ನಿಲ್ಲತ್ತೆ ಅವಾಗ್ಲೇ ಆಟ ಚುಕ್ತಾ ಆದಂಗೆ. ನಿಜ ಅಂದ್ರೆ, ಗುಳು ಗುಳಿ ಆಟಕ್ಕಿಂತಲೂ ಹೆಚ್ಚು ಫೇಮಸ್ ಆಗಿದೆ ಈ ಆಟ. ನಿಜ ಅಂದ್ರೆ ಕ್ಷಣ ಕ್ಷಣಕ್ಕೂ ದುಡ್ಡು ಬಾಚುವ ಈ ಆಟದ ದಂಧೆ ಪುಟ್ಟ ಪುಟ್ಟ ಮಕ್ಕಳಿಗೆ ಹುಚ್ಚು ಹಿಡಿಸಿದೆ. 100ಕ್ಕೆ ನೂರು, 50 ಕ್ಕೆ 50 ಹೀಗೆ ಮುಂದೆ ಸಾಗುವ ಈ ಆಟದಲ್ಲಿ ಬಹುತೇಕರು ಜೇಬು ಖಾಲಿ ಮಾಡಿಕೊಳ್ತಿದಾರೆ.
ನಮ್ಮ “ಸಿಂಗಂ”..!
ನಿಜ ಹೇಳ್ಬೇಕಂದ್ರೆ, ಈ ರೊಕ್ಕದ ಆಟದ ಬಗ್ಗೆ ಮುಂಡಗೋಡ ಪೊಲೀಸರಿಗೆ ಈ ಕ್ಷಣಕ್ಕೂ ಅರಿವಿಗೆ ಬಂದಿಲ್ಲವೋ ಏನೋ. ಯಾಕಂದ್ರೆ ಮುಂಡಗೋಡಿನ ನಮ್ಮ ಹೆಮ್ಮೆಯ, ದಕ್ಷ ಸಿಂಗಂ ಅಂತಲೇ ಕರೆಯಿಸಿಕೊಂಡಿರೋ ಸಿಪಿಐ ಸಾಹೇಬ್ರಿಗೆ ಯಾಕೋ ನಜರಿಗೆ ಬಂದಿಲ್ಲ ಅನಿಸ್ತಿದೆ. ಒಂದು ವೇಳೆ ಅವ್ರ ನಜರಿಗೆ ಬಂದಿದ್ದಿದ್ರೆ ಇಂತಹ ದಂಧೆಗಳಿಗೆ ಸಾಹೇಬ್ರು ಯಾವತ್ತೂ ಅಸ್ಪದ ಕೊಡೋದೇ ಇಲ್ಲ ಅಂತಾ ಭಕ್ತರು ಮಾತಾಡಿಕೊಳ್ತಿದಾರೆ.
ಏನೇ ಆಗಲಿ, ಇನ್ನೂ ಮೀಸೆ ಚಿಗುರದ ಯುವಕರಿಗೆ ತಲೆ ಕೆಡಿಸಿ ಜೇಬು ಖಾಲಿ ಮಾಡ್ತಿರೋ ಕಲರ್ ಕಲರ್ ಬಾಲ್ ಆಟದ ಬಗ್ಗೆ ಭಕ್ತರು ಜಾಗ್ರತರಾಗಬೇಕಿದೆ. ಇಲ್ಲಿ, ಇಂತಹ ಅಡ್ಡ ಕಸುಬಿಗಳ ದಂಧೆಗಳಿಂದ ನಮ್ಮ ಯುವ ಪಡೆ ಹಾಳಾಗದಿರಲಿ ಅನ್ನೋದಷ್ಟೇ ನಮ್ಮ ಕಳಕಳಿ..! ಏನಂತಿರಿ..?