ಮುಂಡಗೋಡ ಹಾಗೂ ಮಂಚಿಕೇರಿ ಅರಣ್ಯ ಅಧಿಕಾರಿಗಳ ಬ್ರಿಲ್ಲಿಯಂಟ್ ಕಾರ್ಯಾಚರಣೆ ಸಕ್ಸೆಸ್ ಆಗಿದೆ. ಪರಿಣಾಮ ಖತರ್ನಾಕ ಅರಣ್ಯ ರಾಬರಿ ಗ್ಯಾಂಗ್ ಅಂದರ್ ಆಗಿದೆ. ಅಕ್ಟೋಬರ್ 7 ರ ಆಸುಪಾಸಿನಲ್ಲಿ ಮುಂಡಗೋಡ ತಾಲೂಕಿನ ಹಲವು ಕಡೆ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ಅರಣ್ಯ ಸ್ಮಗ್ಲಿಂಗ್ ಕ್ರಿಮಿಗಳನ್ನು ಬಹುತೇಕ ಅಂದರ್ ಮಾಡಲಾಗಿದೆ. ದೂರದ ಮದ್ಯ ಪ್ರದೇಶದಿಂದ ಬಂದು ಪಟ್ಟಣಗಳು, ಹಳ್ಳಿಗಳ ಹೊರಗೆ ಟೆಂಟ್ ಹಾಕಿ ಸಂಚು ರೂಪಿಸೋ ಭಯಾನಕ ಸ್ಮಗ್ಲಿಂಗ್ ಪಡೆಯನ್ನ ಮೊದಲ ಬಾರಿಗೆ ಹೆಡೆಮುರಿ ಕಟ್ಟಲಾಗಿದೆ. ಅಷ್ಟಕ್ಕೂ ಈ ಭಯಾನಕ ಗ್ಯಾಂಗ್ ಯಾವುದು ಗೊತ್ತಾ..? ಮದ್ಯಪ್ರದೇಶದ “ಕಟನಿ ಗ್ಯಾಂಗ್”
ಸವಾಲಾಗಿದ್ದ ಗ್ಯಾಂಗ್..!
ಅಸಲು, ಮುಂಡಗೋಡ ತಾಲೂಕಿನ ಅತ್ತಿವೇರಿ ಪಕ್ಷಿಧಾಮವೂ ಸೇರಿದಂತೆ ಹಲವು ಕಡೆ ಬೆಲೆಬಾಳುವ ಶ್ರೀಗಂಧ ಮರ ಕಳ್ಳತನವಾಗಿತ್ತು. ಅಕ್ಟೋಬರ್ 7 ನೇ ತಾರೀಖಿನ ಆಸುಪಾಸಿನಲ್ಲಿಯೇ ನಡೆದಿದ್ದ ಪ್ರಕರಣ ಭೇದಿಸಲು ಅರಣ್ಯ ಇಲಾಖೆಯ ಚಾಣಾಕ್ಷ ಟೀಂ ಕಾರ್ಯ ನಿರ್ವಹಿಸಿತ್ತು. ನಿಜ ಅಂದ್ರೆ ಸಣ್ಣದೊಂದು ಸುಳಿವೂ ನೀಡದೇ ಬೆಣ್ಣೆಯೊಳಗಿನ ಕೂದಲು ತೆಗೆದಂತೆ ಕಳ್ಳತನದ ಕೆಲಸ ನಿರ್ವಹಿಸುವ ಖತರ್ನಾಕ ಗ್ಯಾಂಗ್ ಬಲೆಗೆ ಬೀಳಿಸುವುದೇ ಇಲಾಖೆಗೆ ಸವಾಲಾಗಿತ್ತು. ಆದ್ರೆ, ಕೊನೆಗೂ ಗ್ಯಾಂಗ್ ಬಲೆಗೆ ಬಿದ್ದಿದೆ.
ಭಯಾನಕ ಪಡೆ..!
ನಿಮಗೆ ಗೊತ್ತಿರಲಿ, ಪ್ರತೀ ವರ್ಷವೂ ಹಳ್ಳಿ, ಪಟ್ಟಣಗಳ ಹೊರ ವಲಯದಲ್ಲಿ ರುದ್ರಾಕ್ಷಿ, ಕರಿಮಣಿ, ಆ ಮಣಿ, ಈ ಮಣಿ ಅಂತಾ ಮಾರಾಟಕ್ಕೆ ಅದೊಂದು ಜನಾಂಗ ಟೆಂಟ್ ಹಾಕೊಂಡು ವಾಸ ಮಾಡಿರತ್ತೆ. ಅದೇಂತದ್ದೋ ವಿಪರೀತ ವನೌಷಧಿ, ಅದು ಇದು ಅಂತಾ ವ್ಯಾಪಾರಕ್ಕೆ ಬಂದಿರತ್ತೆ. ಅದ್ರಲ್ಲಿ ಮಹಿಳೆಯರು ರುದ್ರಾಕ್ಷಿ ಸೇರಿದಂತೆ ಮಣಿಗಳ ವ್ಯಾಪಾರಕ್ಕೆ ಗಲ್ಲಿ ಗಲ್ಲಿಗಳಲ್ಲಿ ತಿರುಗುತ್ತಾರೆ. ಕೆಲವು ಗಂಡಸರು ಆಯುರ್ವೇದಿಕ್ ಔಷಧಿ ಮಾರಾಟದ ನೆಪದಲ್ಲಿ ಅಲೆಯುತ್ತಾರೆ. ಹೀಗಿರೋ ಇವ್ರೇಲ್ಲ ಹಗಲು ಒಂದಾದ್ರೆ ರಾತ್ರಿಯೇ ಇನ್ನೊಂದು ಕೆಲಸ ಮಾಡ್ತಾರೆ. ಹಗಲು ವ್ಯಾಪಾರದ ನೆಪದಲ್ಲಿ ರಾಬರಿ ಸ್ಪಾಟ್ ಗಳನ್ನು ಮನದಟ್ಟು ಮಾಡ್ಕೊತಾರೆ. ನಂತರ ಹೊಂಚು ಹಾಕಿ ರಾತ್ರಿ ಕಣ್ಣು ಬಿಡೋವಷ್ಟರಲ್ಲಿ ಶ್ರೀಗಂಧ ಮರಗಳನ್ನು ಕಳ್ಳತನ ಮಾಡ್ತಾರೆ ಅನ್ನೋದು ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆ ವೇಳೆ ಬಟಾಬಯಲಾಗಿದೆ.
ಯಾವುದಕ್ಕೂ ಹೇಸಲ್ಲ..!
ಅಂದಹಾಗೆ, ಪ್ರತಿವರ್ಷ ಒಂದು ಟಾರ್ಗೆಟ್ ಇಟ್ಟುಕೊಂಡು ವಲಸೆ ಬರುವ ಈ ಗ್ಯಾಂಗ್ ಮದ್ಯ ಪ್ರದೇಶ ರಾಜ್ಯದ ಕಟನಿ ಜಿಲ್ಲೆಯದ್ದು. ಬಹುತೇಕ ಅರಣ್ಯ ಉತ್ಪನ್ನಗಳನ್ನೇ ಟಾರ್ಗೆಟ್ ಮಾಡಿಕೊಂಡು ಫಿಲ್ಡಿಗೆ ಇಳಿಯುವ ಈ ಗ್ಯಾಂಗ್ ನ ರಾಬರಿ ಇತಿಹಾಸ ನಿಜಕ್ಕೂ ಭಯಾನಕವಾಗಿದೆ. ನಿಜ ಅಂದ್ರೆ ಇವ್ರು ಹೊಂಚು ಹಾಕಿ ರಾಬರಿ ಮಾಡುವ ವೇಳೆ ಯಾರ್ ಬಂದ್ರೂ ಹೆದರಲ್ಲ, ಯಾಕಂದ್ರೆ ಇವ್ರ ಬಳಿ ಅದ್ಯಾರೇ ಬಂದ್ರೂ ಎದುರಿಸೋಕೆ ಬಲಿಷ್ಟ ಮಾರಕಾಸ್ತ್ರಗಳೂ ಜೊತೆಯಿರತ್ತೆ. ಅಡ್ಡಿಯಾದವರನ್ನು ಜೀವ ತೆಗೆಯಲೂ ಕೂಡ ಇವ್ರು ಹೇಸಲ್ಲ ಅನ್ನೋದು ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ. ಸಾಕ್ಷಿ ಎಂಬಂತೆ ಈ ಖತರ್ನಾಕ ಖದೀಮರ ಜೊತೆ ಅಧಿಕಾರಿಗಳು ಹಲವು ಬಗೆಯ ಮಾರಕಾಸ್ತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ.
ಲಕ್ಷ ಲಕ್ಷ ಖುಳಗಳು ಕಣ್ರಿ..!
ಹಾಗೆ ನೋಡಿದ್ರೆ, ಈ ಖತರ್ನಾಕ ರಾಬರಿ ಗ್ಯಾಂಗ್ ನ ಬರೋಬ್ಬರಿ ಐವರು ಸದಸ್ಯರು ಮಂಚಿಕೇರಿ ಅರಣ್ಯ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಆ ಹೊತ್ತಲ್ಲಿ ಅರೆಸ್ಟ್ ಆದ ಕಲವೇ ದಿನಗಳಲ್ಲಿ ಜಾಮೀನು ಪಡೆದಿದ್ದಾರೆ. ಅಸಲು, ಜಾಮೀನು ಪಡೆಯಲು ಒಬ್ಬೊಬ್ಬರು ಒಂದು ಲಕ್ಷ ರೂ. ಶ್ಯೂರಿಟಿ ಇಟ್ಟಿದ್ದಾರೆ. ಹೀಗಾಗಿ, ಇವ್ರೇಲ್ಲ ನೋಡೋಕೆ ಟೆಂಟ್ ನಲ್ಲಿ ವಾಸವಿದ್ರೂ ಲಕ್ಷ ಲಕ್ಷ ಖುಳಗಳು ಅನ್ನೋದ್ರಲ್ಲಿ ಎರಡು ಮಾತಿಲ್ಲ.
ಅದೇನೇ ಇರಲಿ, ಒಟ್ನಲ್ಲಿ ಮುಂಡಗೋಡಿಗರ ನಿದ್ದೆಗೆಡಿಸಿದ್ದ ಶ್ರೀಗಂಧ ಮರ ಕಳ್ಳತನ ಕೇಸ್ ಭೇದಿಸಲಾಗಿದೆ. ಇದ್ರೊಂದಿಗೆ ಖತರ್ನಾಕ ಗ್ಯಾಂಗ್ ಒಂದು ಬಲೆಗೆ ಬಿದ್ದಂತಾಗಿದೆ. ಆದ್ರೆ, ಸದ್ಯ ಅಂದರ್ ಆಗಿರೋ ಆರೋಪಿಗಳು ಮುಂಡಗೋಡಿನಲ್ಲಿ ಕಳ್ಳತನ ಮಾಡಿದ್ದವರೆನಾ..? ಅದರ ಬಗ್ಗೆ ಒಂದಿಷ್ಟು ಪ್ರಶ್ನೆಗಳೂ ಹುಟ್ಟಿಕೊಂಡಿವೆ. ಯಾಕಂದ್ರೆ, ಬಂಧಿತರಿಂದ ಕಳುವಾದ ಮಾಲು, ಬಳಸಿದ ವಾಹನ ಇತ್ಯಾದಿಗಳ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಇನ್ನೂ ತುಟಿ ಬಿಚ್ಚಿಲ್ಲ. ಹೀಗಾಗಿ, ಆದಷ್ಟು ಬೇಗ ಸಂಬಂಧ ಪಟ್ಟ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಬೇಕಿದೆ.