Home ರಾಜಕೀಯ ಪಡಸಾಲೆ..

Category: ರಾಜಕೀಯ ಪಡಸಾಲೆ..

Post
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ದ ಅಂತಾ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರು ಸಿಎಂ ರಾಜೀನಾಮೆ ಮಾತಿಗೆ ಹೇಳಿದ್ದಾದ್ರೂ ಏನು..? ತಿಳಿಬೇಕಾ ಈ ಕೆಳಗಿನ ಯೂಟ್ಯೂಬ್ ಲಿಂಕ್ ಗೆ ಕ್ಲಿಕ್ ಮಾಡಿ.. ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ಆಗ್ತಿದೆ, ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಈ ರೀತಿ‌ ಹೇಳಿರಬಹುದು. ಕೋವಿಡ್ ಸಮಯದಲ್ಲಿ ಸಿಎಂ ಉತ್ತಮ...

Post
ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!

ಸಿಎಂ ಬದಲಾವಣೆ ಯಾವ ಕಾರಣಕ್ಕೂ ಇಲ್ಲ: ಸಿ.ಪಿ.ಯೋಗೀಶ್ವರ್ ಗೆ ಸಚಿವ ಹೆಬ್ಬಾರ್ ಟಾಂಗ್..!

ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ...

Post

ಹುನಗುಂದ ಗ್ರಾಪಂ ಚುನಾವಣೆ; “ಕೈ” ಬೆಂಬಲಿತರಿಂದ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.. ಸಿದ್ದನಗೌಡ ವರ್ಸಸ್ ಚಂದ್ರು ವಾರ್ಡ್ ನಂಬರ್ ಒಂದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ರು.. ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರು ಹಡಪದ ವಿರುದ್ಧ ಅಖಾಡದಲ್ಲಿರೋ ಸಿದ್ದನಗೌಡ ಪಾಟೀಲ್ ಕೈ ಪಡೆಗೆ ಆಕ್ಸಿಜನ್ ಆಗ್ತಾರಾ ಕಾದು ನೋಡಬೇಕಿದೆ.. ವಿನೋದ್ ವರ್ಸಸ್ ತುಕಾರಾಂ ಇನ್ನು ವಾರ್ಡ್ ನಂಬರ್ ಎರಡರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೈತ...

Post

ಹುನಗುಂದ ಗ್ರಾಪಂ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆಗೆ ಇಂದಿನಿಂದ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈಗಾಗಲೇ ಇಲ್ಲಿನ ಪ್ರಮುಖ ಮೂರು ವಾರ್ಡುಗಳಿಗೆ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನ ಫೈನಲ್ ಮಾಡಿಕೊಂಡಿದೆ, ಬರೋಬ್ಬರಿ 9 ಜನ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದ್ರಂತೆ, ಕಾಂಗ್ರೆಸ್ ಕೂಡ ಮೂರೂ ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಫಿಕ್ಸ್ ಮಾಡಿಕೊಂಡಿದೆ..ವಾರ್ಡ್ ನಂಬರ್ – 1.                             ...

Post

ಅವಿರೋಧ ಆಯ್ಕೆಗೆ ಹರಾಜು; ಅಂತವರ ಗಡಿಪಾರಿಗೆ ಚು.ಆಯೋಗ ತಯಾರಿ

ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇನ್ನಿಲ್ಲದ ಅಕ್ರಮಗಳು ನಡಿಯತ್ತೆ.. ಹಣ, ಹೆಂಡ, ಸೀರೆ ಅದು ಇದು ಅಂತಾ ಆಮೀಷಗಳನ್ನ ಒಡ್ಡಿ ಮತದಾರರನ್ನ ಸೆಳೆಯುವ ಅಡ್ಡದಾರಿಗಳನ್ನೂ ಅಭ್ಯರ್ಥಿಗಳು ಹಿಡಿಯುತ್ತಾರೆ.. ಸತ್ಯ ಅಂದ್ರೆ ಕೆಲವು ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾಗಲು ಹರಾಜು ನಡೆಸುವ ಹೀನ ಸಂಸ್ಕೃತಿಯೂ ನಡೆಯುತ್ತಿದೆ.. ಇಷ್ಟಿಷ್ಟು ಹಣ ಕೊಟ್ರೆ ಮುಗೀತು, ಆತ ಚುನಾವಣೆಗೆ ಸ್ಪರ್ಧಿಸದೇ ಅವಿರೋಧವಾಗಿ ಆಯ್ಕೆಯಾಗಿ ಬಿಡುತ್ತಾನೆ.. ಅಲ್ಲಿ ಯಾರ ಹತ್ರ ಹಣ ಇದೆಯೋ ಅವನೇ ಸದಸ್ಯನಾಗಿ ಬಿಡ್ತಾನೆ.. ಅಂತಹ ಹಣವನ್ನು ದೇವಸ್ಥಾನಗಳಿಗೋ ಅಥವಾ...

Post

ಕೋಡಿಹಳ್ಳಿ ವಿರುದ್ಧ ಸಚಿವ ಹೆಬ್ಬಾರ್ ಕಿಡಿ ಪ್ರತಿಭಟನೆ ಕೈಬಿಡಿ, ನೌಕರರಿಗೆ ಮನವಿ

ಮುಂಡಗೋಡ- ರಾಜ್ಯದ ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಇಂದು ಭರವಸೆ ನೀಡಿದ್ದಾರೆ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ. ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ ಅವರ ಯಾವುದೇ ಪ್ರಚೋದನೆಗೆ ಒಳಗಾಗದೆ ರಾಜ್ಯದ ಜನರ ಹಿತಕ್ಕಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವ ಮೂಲಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಚಿವರು ವಿನಂತಿಸಿದ್ದಾರೆ.. ಕೋಡಿಹಳ್ಳಿ ಚಂದ್ರಶೇಖರ ಅವರು ಅನಗತ್ಯವಾಗಿ ತಮಗೆ ಬೇಡವಾದ ಕ್ಷೇತ್ರದಲ್ಲಿ ಮೂಗು ತೂರಿಸಿ ರಾಜ್ಯದಲ್ಲಿ...

Post

ಗ್ರಾ.ಪಂ ಚುನಾವಣೆ; ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣು: ಡಿಸಿ ಡಾ.ಹರೀಶ್ ಕುಮಾರ್

ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿನ ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಮುಗಿದಿದೆ. ಇನ್ನು, ಎರಡನೇ ಹಂತದಲ್ಲಿ ಸಿದ್ದಾಪುರ, ಸಿರಸಿ, ಮುಂಡಗೊಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾಗಳಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ...

Post

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದು ಶ್ಲಾಘನೀಯ ಕಾರ್ಯ; ಮಾಜಿ ಸಚಿವ ಪಟ್ಟಣಶೆಟ್ಟಿ

ವಿಜಯಪುರ-ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಮಾಡಿದ ನಿರ್ಣಯ ನಾವು ಸ್ವಾಗತಿಸಲೇ ಬೇಕು ಎಂದು ಮಾಜಿ‌ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದ್ದಾರೆ..   ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಮರಾಠಾ ಸಮಾಜದ ಸಲುವಾಗಿ ಮಾಡಿದ ಪ್ರಾಧಿಕಾರವದು, ಅವರು ಕೂಡಾ ಹಿಂದುಗಳಲ್ಲಿ ಇರುವ ವಿಶೇಷ ಜನಾಂಗ. ಅವರಲ್ಲೂ ಸಹಿಹ ಸಾಕಷ್ಟು ಕಡು ಬಡವರು, ನಿರುದ್ಯೋಗಿಗಳಿದ್ದಾರೆ, ಅವರಿಗೆ ಸರ್ಕಾರದಿಂದ ಸೌಲತ್ತು ಸಿಗುತ್ತಿಲ್ಲ. ಇದು ಮರಾಠಿ ಭಾಷೆಗರಿಗೆ ನೀಡಿದ ಅನುದಾನಲವಲ್ಲ. ಕನ್ನಡಪರ‌ ಸಂಘಟನೆಗಳು ಇದನ್ನು ತಪ್ಪಾಗಿ ಭಾವಿಸಿವೆ. ಗಡಿ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ,...

Post

ನನಗೆ ಧರ್ಮ ಒಡೆದವನು ಅಂತಾ ಪಟ್ಟ ಕಟ್ಟಿದ್ರು; ಮಾಜಿ ಸಚಿವ ಎಂ.ಬಿ.ಪಾಟೀಲ್ ಕಿಡಿ

ವಿಜಯಪುರ- ಮರಾಠ ಅಭಿವೃದ್ಧಿ ನಿಗಮ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ವಿಚಾರವಾಗಿ ನಿಗಮ ಸ್ಥಾಪನೆಗಳಿಗೆ ಮಾಜಿ ಸಚಿವ ಎಂ ಬಿ ಪಾಟೀಲ್ ವಿರೋಧ ವ್ಯಕ್ತಪಡಿಸಿದ್ದಾರೆ‌.   ನಿಗಮ ಸ್ಥಾಪನೆಯಿಂದ ಯಾವುದೇ ಸಮಾಜ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರೆ ಆಯಾ ಸಮಾಜಗಳು ಮುಂದೆ ಬರುತ್ತವೆ ಎಂದು ಸಲಹೆ ನೀಡಿದ್ದಾರೆ‌. ಸಣ್ಣ ಸಣ್ಣ ಸಮಾಜಕ್ಕೆ ನಿಗಮ ಸ್ಥಾಪನೆಯಿಂದ ಸಹಾಯ ವಾಗಬಹುದು, ಆದ್ರೆ ದೊಡ್ಡ ಸಮುದಾಯಗಳಿಗೆ ನಿಗಮದಿಂದ ಯಾವುದೇ...

Post

ಮುಂಡಗೋಡ- ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಟಿ.ಆಸ್ತಕಟ್ಟಿ ವಿಧಿವಶ- ಗಣ್ಯರ ಸಂತಾಪ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ಹನ್ಮಂತಪ್ಪ ಆಸ್ತಕಟ್ಟಿ ಇಂದು ವಿಧಿವಶರಾಗಿದ್ದಾರೆ. ಮಾಜಿ ಸಚಿವ ಆರ್.ವಿ.ದೇಶಪಾಂಡೆ ಯವರ ಕಟ್ಟಾ ಬೆಂಬಲಿಗರಾಗಿದ್ದ ಹನ್ಮಂತಪ್ಪ ಆಸ್ತಕಟ್ಟಿ, ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದರು. ಹನ್ಮಂತಪ್ಪ ಆಸ್ತಕಟ್ಟಿಯವರ ನಿಧನಕ್ಕೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ

error: Content is protected !!