ಯಲ್ಲಾಪುರ: ಮುಖ್ಯಮಂತ್ರಿ ಬದಲಾವಣೆ ಯಾವ ಕಾರಣಕ್ಕೂ ಇಲ್ಲ ಅಂತಾ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.
ಯಲ್ಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಬ್ಬಾರ್, ಸಿಎಂ ಬದಲಾವಣೆ ವಿಚಾರವಾಗಿ, ಸಚಿವ ಸಿ.ಪಿ.ಯೋಗೀಶ್ವರ ಹೇಳಿಕೆಗೆ ನನ್ನ ಸಹಮತ ಇಲ್ಲ ಅಂತಾ ಖಡಕ್ಕಾಗಿ ಅಭಿಪ್ರಾಯ ವ್ಯಕ್ತ ಪಡಿಸಿದ್ರು. ಸರಕಾರದಲ್ಲಿ ಇದ್ದುಕೊಂಡು ಈ ರೀತಿಯ ಹೇಳಿಕೆ ನೀಡುವುದು ಯೋಗೀಶ್ವರಗೆ ಶೋಭೆ ತರುವುದಿಲ್ಲ ಅಂತಾ ಹೆಬ್ಬಾರ್ ಕಿಡಿ ಕಾರಿದ್ರು.
ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ನಡೆದಿದ್ದಾಗಿ ಸಚಿವ ಅಶೋಕ್ ಹೇಳಿದ್ದು ನಿಜ, ಆದ್ರೆ ಮುಖ್ಯಮಂತ್ರಿ ಬದಲಾವಣೆ ಮಾಡುತ್ತೇವೆ ಅಂತಾ ಹೇಳಿಲ್ಲ. ಮುಂದಿನ ಚುನಾವಣೆ ಕೂಡಾ ಯಡಿಯೂರಪ್ಪ ನೇತೃತ್ವದಲ್ಲಿಯೇ ನಡೆಯಲಿದೆ ಅಂತಾ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು.