ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆಗೆ ಇಂದಿನಿಂದ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈಗಾಗಲೇ ಇಲ್ಲಿನ ಪ್ರಮುಖ ಮೂರು ವಾರ್ಡುಗಳಿಗೆ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನ ಫೈನಲ್ ಮಾಡಿಕೊಂಡಿದೆ, ಬರೋಬ್ಬರಿ 9 ಜನ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದ್ರಂತೆ, ಕಾಂಗ್ರೆಸ್ ಕೂಡ ಮೂರೂ ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಫಿಕ್ಸ್ ಮಾಡಿಕೊಂಡಿದೆ..

ವಾರ್ಡ್ ನಂಬರ್ – 1.                                      ವಾರ್ಡ್ ನಂಬರ್ ಒಂದರಲ್ಲಿ ಬಿಜೆಪಿ ಬೆಂಬಲಿತರಾಗಿ ಒಟ್ಟೂ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.. ಅದ್ರಲ್ಲಿ, ಚಂದ್ರು ಹಡಪದ ಈ ವಾರ್ಡಿನಲ್ಲಿ ವರ್ಷಗಳಿಂದಲೇ ಗ್ರೌಂಡ್ ವರ್ಕ್ ನಲ್ಲಿ ತೊಡಗಿದ್ದರು..ಹೀಗಾಗಿ, ಚಂದ್ರು ಈಗ ನಿರೀಕ್ಷೆಯಂತೆ ಅಭ್ಯರ್ಥಿಯಾಗಿದ್ದಾರೆ..

ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರು ಹಡಪದ

ಇನ್ನು ಈ ವಾರ್ಡಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿದ್ದನಗೌಡ ಪಾಟೀಲ್ ಕಣಕ್ಕಿಳಿಯೋದು ಗ್ಯಾರಂಟಿ ಅನ್ನೊ ಮಾತು ಕೇಳಿ ಬಂದಿದೆ.. ಈ ಮೊದಲು, ತಾಲೂಕಾ ಪಂಚಾಯತ್ ಸದಸ್ಯರಾಗಿ, ತಾಪಂ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರೋ ಸಿದ್ದನಗೌಡ ಪಾಟೀಲ್ ಮತ್ತೊಮ್ಮೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.. ಬುಧವಾರ ಸಿದ್ದನಗೌಡರು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ..

ವಾರ್ಡ್ ನಂಬರ್ – 2

ಇನ್ನು ವಾರ್ಡ್ ನಂಬರ್ 2 ರಲ್ಲಿ ಬಿಜೆಪಿಯಿಂದ ವಿನೋದ್ ಬಿಸನಳ್ಳಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.. ಇಲ್ಲಿಯೂ ಬಿಜೆಪಿಗೆ ಠಕ್ಕರ್ ಕೊಡಲು ತುಕಾರಾಮ್ ಹೊನ್ನಳ್ಳಿ ಕಾಂಗ್ರೆಸ್ ನಿಂದ ಕಣಕ್ಕಿಳಿಯೋ ಸಾಧ್ಯತೆ ಇದೆ.. ಅಸಲು ಮೂಲ ಬಿಜೆಪಿಗರೇ ಆಗಿದ್ದ ತುಕಾರಾಮ್ ಹೊನ್ನಳ್ಳಿ ಬಿಜೆಪಿಯಿಂದ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಿಂದ ಬೆಂಬಲ ಪಡೆದು ಸ್ಪರ್ಧಿಸೋ ಸಾಧ್ಯತೆ ಇದೆ..

ಕಾಂಗ್ರೆಸ್ ನ ತುಕಾರಾಮ್ ಹೊನ್ನಳ್ಳಿ

ಈ ವಾರ್ಡಿನ ಇನ್ನೊಂದು ಬಹುಮುಖ್ಯ ಸಂಗತಿಯೆಂದ್ರೆ ಇಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆದಿನಾಥ್ ಅಂಗಡಿ ಕಣಕ್ಕಿಳಿಯಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.. ಹೀಗಾಗಿ, ಈ ವಾರ್ಡಿನಲ್ಲಿ ತುಸು ಬಿರುಸಿನ ಹಕೀಕತ್ತುಗಳು ನಡಿಯೋ ಸಾಧ್ಯತೆಗಳಿವೆ..

ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿನೋದ್ ಬಿಸನಳ್ಳಿ

ವಾರ್ಡ್ ನಂಬರ್ -3.                                             ಇನ್ನು ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡ ಮೂರನೇ ವಾರ್ಡಿನಲ್ಲಿ ಚುನಾವಣೆಯ ಕಾವು ಏರುತ್ತಲೇ ಇದೆ.. ಇಲ್ಲಿ ಬಿಜೆಪಿಯಿಂದ ಮುಖ್ಯವಾಗಿ ಮಹಾವೀರ ಅಕ್ಕಿ ನಾಮಪತ್ರ ಸಲ್ಲಿಸಿದ್ದಾರೆ.. ಇನ್ನು ಕಾಂಗ್ರೆಸ್ ನಿಂದ ಈಶ್ವರಗೌಡ ಅರಳಿಹೊಂಡ ಕಣಕ್ಕಿಳಿಯೋದು ಬಹುತೇಕ ನಿಚ್ಚಳವಾಗಿದೆ.. ಇಲ್ಲಿಯೂ ಎರಡೂ ಪಕ್ಷಗಳ ತಲಾ ಮೂವರು ಅಭ್ಯರ್ಥಿಗಳು ಕಣದಲ್ಲಿರಲಿದ್ದಾರೆ..

ಬುಧವಾರ ಕಾಂಗ್ರೆಸ್ ಬೆಂಬಲಿತರ ನಾಮಪತ್ರ..?

ಬುಧವಾರ ಹುನಗುಂದ ಭಾಗದ ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಾಧ್ಯತೆಯಿದೆ. ಕಳೆದ 11 ರಿಂದಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಮಂಗಳವಾರದಿಂದ ನಾಮಪತ್ರ ಸಲ್ಲಿಸುವ ಅಬ್ಬರ ಜೋರಾಗಿದೆ..

error: Content is protected !!