ಹೊರಗಡೆ ಇಸ್ಪೀಟ್ ಆಡೋರನ್ನ ಹಿಡಿಯೋ ಪೋಲೀಸರು ಖುದ್ದು ತಾವೇ, ಅದೂ ಪೊಲೀಸ್ ಠಾಣೆಯಲ್ಲೇ ಜೂಜಾಟ ಆಡಿರೋ ವಿಡಿಯೋ ಇದೀಗ ಕಲಬುರಗಿಯಲ್ಲಿ ಸಕತ್ ವೈರಲ್ ಆಗಿದೆ. ಚಿತ್ತಾಪುರ ತಾಲೂಕಿನ ವಾಡಿ ಪೋಲೀಸ್ ಠಾಣೆಯಲ್ಲಿ ಈ ಪ್ರಸಂಗ ನಡೆದಿದ್ದು ಬೆಳಕಿಗೆ ಬಂದಿದೆ.
ವಿಷ್ಯ ಬಟಾ ಬಯಲಾಗ್ತಿದ್ದಂತೆ ಎಚ್ಚೆತ್ತ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಜೂಜಾಟ ನಡೆಸಿದ್ದ ASI ಮೆಹಮೂದ್ ಮಿಯಾ, ಮುಖ್ಯ ಪೇದೆಗಳಾದ ನಾಗರಾಜ್ ಸಾಯಿಬಣ್ಣಾ ಇಮಾಮ್, ಮತ್ತು ಪೇದೆ ನಾಗಭೂಷಣ್ ಸೇರಿ ಒಟ್ಟು ಐವರನ್ನ ಸಸ್ಪೆಂಡ್ ಮಾಡಿದ್ದಾರೆ. ಅಷ್ಟೇಅಲ್ಲ PSI ತಿರುಮಲೇಶಗೂ ಕಾರಣ ಕೇಳಿ ನೋಟಿಸ್ ಜಾರಿಮಾಡಿದ್ದಾರೆ.