ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ದ ಅಂತಾ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸಚಿವರು ಸಿಎಂ ರಾಜೀನಾಮೆ ಮಾತಿಗೆ ಹೇಳಿದ್ದಾದ್ರೂ ಏನು..? ತಿಳಿಬೇಕಾ ಈ ಕೆಳಗಿನ ಯೂಟ್ಯೂಬ್ ಲಿಂಕ್ ಗೆ ಕ್ಲಿಕ್ ಮಾಡಿ..
ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ಆಗ್ತಿದೆ,
ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಈ ರೀತಿ ಹೇಳಿರಬಹುದು. ಕೋವಿಡ್ ಸಮಯದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಸಿಎಂ ರಾಜೀನಾಮೆ ಕೊಡಿಸುವ ಯಾವ ಪ್ರಶ್ನೆ ಪಕ್ಷದ ಮುಂದಿಲ್ಲ. ಹೈಕಮಾಂಡ್ ನಿಂದಲೂ ಯಾವುದೇ ರೀತಿಯ ಸೂಚನೆ ಅವರಿಗಿಲ್ಲ
ಅಂತಾ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.