ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು..

ಸಿದ್ದನಗೌಡ ವರ್ಸಸ್ ಚಂದ್ರು

ವಾರ್ಡ್ ನಂಬರ್ ಒಂದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ರು.. ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರು ಹಡಪದ ವಿರುದ್ಧ ಅಖಾಡದಲ್ಲಿರೋ ಸಿದ್ದನಗೌಡ ಪಾಟೀಲ್ ಕೈ ಪಡೆಗೆ ಆಕ್ಸಿಜನ್ ಆಗ್ತಾರಾ ಕಾದು ನೋಡಬೇಕಿದೆ..

ಸಿದ್ದನಗೌಡ ಪಾಟೀಲ್ ನಾಮಪತ್ರ ಸಲ್ಲಿಕೆ

ವಿನೋದ್ ವರ್ಸಸ್ ತುಕಾರಾಂ
ಇನ್ನು ವಾರ್ಡ್ ನಂಬರ್ ಎರಡರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೈತ ತುಕಾರಾಮ್ ಹೊನ್ನಳ್ಳಿ ನಾಮಪತ್ರ ಸಲ್ಲಿಸಿದ್ರು.. ಇಲ್ಲಿ ಬಹುತೇಕ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮದ್ಯೆ ನೇರ ಹಣಾಹಣಿ ನಡಿಯೋ ಸಾಧ್ಯತೆ ಇದ್ದು ತೀವ್ರ ಜಿದ್ದಾ ಜಿದ್ದು ಏರ್ಪಡುವ ಲಕ್ಷಣಗಳಿವೆ.. ಈಗಾಗಲೇ ಬಿಜೆಪಿ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರೋ ವಿನೋದ್ ಬಿಸನಳ್ಳಿ ವಿರುದ್ಧ ತೊಡೆತಟ್ಟಿರೋ ತುಕಾರಾಮ್ ಹೊನ್ನಳ್ಳಿ ಅದ್ಯಾವ ಮಟ್ಟಿಗೆ ಠಕ್ಕರ್ ಕೊಡ್ತಾರೋ ಕಾದು ನೋಡಬೇಕಿದೆ..

ತುಕಾರಾಮ ಹೊನ್ನಳ್ಳಿ ನಾಮಪತ್ರ ಸಲ್ಲಿಕೆ

ಈಶ್ವರಗೌಡ ವರ್ಸೆಸ್ ಮಹಾವೀರ್
ಇನ್ನು ಹುನಗುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅತ್ತಿವೇರಿ, ಗೌಳಿದಡ್ಡಿ ಒಳಗೊಂಡ ಹುನಗುಂದ 3 ನೇ ವಾರ್ಡಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಈಶ್ವರಗೌಡ ಅರಳಿಹೊಂಡ ಇಂದು ನಾಮಪತ್ರ ಸಲ್ಲಿಸಿದ್ರು.. ಇಲ್ಲಿ ಮಹಾವೀರ ಅಕ್ಕಿ ಬಿಜೆಪಿ ಬೆಂಬಲದೊಂದಿಗೆ ಈಗಾಗಲೇ ಕಣದಲ್ಲಿದ್ದಾರೆ.. ಈ ವಾರ್ಡಿನಲ್ಲಿ ಬಹುತೇಕ ಅಲ್ಪಸಂಖ್ಯಾತ ಹಾಗೂ ಲಿಂಗಾಯತ ಮತಗಳೇ ನಿರ್ಣಾಯಕವಾಗಿವೆ.. ಹೀಗಾಗಿ, ಈ ವಾರ್ಡಿನಲ್ಲಿ ಯಾರು ಆ ಸಮುದಾಯದವರ ಮತಗಳನ್ನ ಪಡೆಯುವಲ್ಲಿ ಯಶಸ್ವಿಯಾಗ್ತಾರೋ ಅವರ ಗೆಲುವು ನಿಶ್ಚಿತ ಎನ್ನುವ ಮಾತುಗಳು ಕೇಳಿಬಂದಿವೆ..

ಈಶ್ವರಗೌಡ ಅರಳಿಹೊಂಡ ನಾಮಪತ್ರ ಸಲ್ಲಿಕೆ
error: Content is protected !!