ವಿಜಯಪುರ-ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಮಾಡಿದ ನಿರ್ಣಯ ನಾವು ಸ್ವಾಗತಿಸಲೇ ಬೇಕು ಎಂದು ಮಾಜಿ‌ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದ್ದಾರೆ..

 

ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು ಮರಾಠಾ ಸಮಾಜದ ಸಲುವಾಗಿ ಮಾಡಿದ ಪ್ರಾಧಿಕಾರವದು, ಅವರು ಕೂಡಾ ಹಿಂದುಗಳಲ್ಲಿ ಇರುವ ವಿಶೇಷ ಜನಾಂಗ. ಅವರಲ್ಲೂ ಸಹಿಹ ಸಾಕಷ್ಟು ಕಡು ಬಡವರು, ನಿರುದ್ಯೋಗಿಗಳಿದ್ದಾರೆ, ಅವರಿಗೆ ಸರ್ಕಾರದಿಂದ ಸೌಲತ್ತು ಸಿಗುತ್ತಿಲ್ಲ. ಇದು ಮರಾಠಿ ಭಾಷೆಗರಿಗೆ ನೀಡಿದ ಅನುದಾನಲವಲ್ಲ. ಕನ್ನಡಪರ‌ ಸಂಘಟನೆಗಳು ಇದನ್ನು ತಪ್ಪಾಗಿ ಭಾವಿಸಿವೆ. ಗಡಿ ಜಿಲ್ಲೆಗಳಾದ ವಿಜಯಪುರ, ಬಾಗಲಕೋಟೆ, ಬೀದರ, ಕಲಬುರಗಿಯಲ್ಲಿ ಆ ಜನಾಂಗ ಹೆಚ್ಚಾಗಿ ವಾಸಿಸುತ್ತಾರೆ. ಅವರೆಲ್ಲ ಕನ್ನಡಿಗರೇ, ಅವರಿಗಾಗಿ‌ ಮುಖ್ಯಮಂತ್ರಿಗಳು ತೆಗೆದುಕೊಂಡ‌ ನಿರ್ಣಯ ಸ್ವಾಗತಾರ್ಹ ಎಂದರು. ಇನ್ನೂ ಕನ್ನಡ ಪರ ಸಂಘಟನೆಗಳು ‌ಇದನ್ನು ತಪ್ಪಾಗಿ ಭಾವಿಸಿ, ಬಂದ್ ಕರೆ ನೀಡಿವೆ, ಬೇರೆ ಬೇರೆ ಸಮುದಾಯಕ್ಕೆ ಸಾಕಷ್ಟು ಅಭಿವೃದ್ಧಿ ‌ಪ್ರಾಧಿಕಾರವನ್ನು ಸರ್ಕಾರ ಮಾಡಿದೆ.
ಲಿಂಗಾಯತರಿಗಾಗಿಯೇ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ, ಇನ್ನೂ ಮರಾಠಾ ಸಮುದಾಯಕ್ಕೆ ಮಾಡಿದ್ದು ತಪ್ಪೇನು. ಕನ್ನಡಪರ ಸಂಘಟನೆಗಳು‌ ನೀಡಿರುವ ಬಂದ್ ಕರೆಯನ್ನು ಇನ್ನೊಮ್ಮೆ ಪರಿಶೀಲನೆ‌ ಮಾಡುವ ಮೂಲಕ ಬಂದ್ ಕರೆ ನೀಡಬೇಕು ಎಂದ ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ ಹೇಳಿದ್ದಾರೆ.

error: Content is protected !!