ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
Author: Public First Newz (Public First Newz)
ಅವ್ರೊಬ್ಬ DyRFO ಸಾಹೇಬ್ರು..! ಅವ್ರ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್..! ಅರಣ್ಯಾಧಿಕಾರಿಗಳೇ ಯಾರಿಗಾಗಿ ಈ ದೌಲತ್ತು..?
ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ DyRFO ಒಬ್ರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೊಗೆ ಫೋಸ್ ನೀಡಿದ್ದಾರೆ. ಹಾಗಂತ ಸಾಕಷ್ಟು ಚರ್ಚೆಗಳು ಖುದ್ದು ಇಲಾಖೆಯ ಅಂಗಳದಲ್ಲೇ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಅಲ್ದೇ ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋಗಳೂ ಹರಿದಾಡ್ತಿವೆ. ಇಲಾಖೆಯ ಅಧಿಕಾರಿಗಳೇ ಹೀಗೆ ಮಾಡಿದ್ರೆ, ಸಾರ್ವಜನಿಕರ ಪಾಡೇನು ಅನ್ನೋ ಪ್ರಶ್ನೆ ನೆಟ್ಟಿಗರು ಕೇಳ್ತಿದಾರಂತೆ. ಅವರು ಹಾಗಾ..? ಅಸಲು, ಅವ್ರು ಇಡೀ ಕೆನರಾ ವಲಯದಲ್ಲೇ ಜಬರ್ದಸ್ತ್ ಪ್ರಭಾವಿಯಂತೆ. ಇಡೀ ಇಲಾಖೆಯೇ ಇವರ ಇಶಾರೆಯಲ್ಲಿ ಬದ್ರವಾಗಿದೆ ಅನ್ನೋ ಪುಕಾರು...
ಶಂಕರ್ ಫಕೀರಪ್ಪ ಗೆ ಪಿಹೆಚ್ ಡಿ ಪದವಿ ಪ್ರಧಾನ, ಸಿಹಿ ತಿನ್ನಿಸಿ ಸಂಭ್ರಮ..!
ಧಾರವಾಡ: ಶಂಕರ್ ಫಕೀರಪ್ಪ ಅವರು, ಧಾರವಾಡ ವಿಶ್ವ ವಿದ್ಯಾಲಯದಿಂದ ಗಣಿತ ಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದಾರೆ. ನಿನ್ನೆ ಸೋಮವಾರ ಧಾರವಾಡ ವಿಶ್ವವಿದ್ಯಾಲಯ ದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ರು. ಅಂದಹಾಗೆ, ಶಂಕರ್ ಫಕೀರಪ್ಪ ಇವ್ರು ಪಿಹೆಚ್ ಡಿ ಪದವಿ ಪಡೆದಿದ್ದಕ್ಕೆ, ಹಡಪದ ಅಪ್ಪಣ್ಣ ಸಮಾಜದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಸೇರಿದಂತೆ ಸಮಾಜದ ಹಲವು ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ. ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ.
ಬೆಳ್ಳಂ ಬೆಳಿಗ್ಗೆ ಅರಣ್ಯ ಅಧಿಕಾರಿಗಳಿಗೆ ಶಾಕ್, RFO ಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ..!
ಹಾವೇರಿಯಲ್ಲಿ ಬೆಳ್ಳಂ ಬೆಳಿಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಕ್ ನೀಡಲಾಗಿದೆ. ಇಬ್ಬರು RFO ಗಳ ಮನೆ, ಸೇರಿದಂತೆ 9 ಕಡೆ ಲೋಕಾ ದಾಳಿಯಾಗಿದೆ. RFO ಪರಮೇಶ್ವರ ಪೇರಲನವರ, RFO ಮಾಲತೇಶ ನ್ಯಾಮತಿ ಗೆ ಸೇರಿದ ಮನೆ ಹಾಗೂ ಫಾರ್ಮ್ ಹೌಸ್ ಸೇರಿ 9 ಕಡೆ ದಾಳಿ ನಡೆಸಲಾಗಿದೆ. ಹಾವೇರಿ ನಗರ ಹಾಗೂ ಕುರಬಗೊಂಡ ಗ್ರಾಮದಲ್ಲಿ ದಾಳಿ ನಡೆಸಲಾಗಿದೆ. RFO ಪರಮೇಶ್ವರ ಪೇರಲನವರಗೆ ಸೇರಿದ ಎರಡು ಮನೆ ಸೇರಿದಂತೆ 6 ಕಡೆ ದಾಳಿ ನಡೆದಿದೆ. ಇನ್ನು ಮತ್ತೋರ್ವ...
ಕಾರವಾರದ ಯುವಕ ಆತ್ಮಹತ್ಯೆ ಕೇಸ್, ಪಿಐ, ಪಿಎಸ್ಐ ಸೇರಿ ಮೂವರು ಪೊಲೀಸರು ಸಸ್ಪೆಂಡ್..!
ಪೊಲೀಸರ ಕಿರುಕುಳದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಯುವಕನ ಕೇಸ್ ಗೆ ಮೂವರು ಪೊಲೀಸರ ಅಮಾನತ್ತಾಗಿದೆ. ಕಾರವಾರದಲ್ಲಿ ಮಾರುತಿ ನಾಯ್ಕ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ, ಪಿಎಸ್ಐ ಸೇರಿದಂತೆ ಮೂವರನ್ನು ಸಸ್ಪೆಂಡ್ ಮಾಡಿ ಎಸ್ಪಿ ವಿಷ್ಣುವರ್ಧನ್ ಆದೇಶಿಸಿದ್ದಾರೆ. CPI ಕುಸುಮಾಧರ ಕೆ, PSI ಶಾಂತಿನಾಥ ಹಾಗೂ ಕಾನಸ್ಟೆಬಲ್ ದೇವರಾಜ್ ಸಸ್ಪೆಂಡ್ ಆಗಿದ್ದಾರೆ. ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಸುಸೈಡ್ ನೋಟ್ ಬರೆದು ವಿಡಿಯೋ ರೆಕಾರ್ಡ್ (video record)ಮಾಡಿದ್ದ. ತನ್ನ ಆತ್ಮಹತ್ಯೆಗೆ...
ಭ.ಶಂಭವನಾಥ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮ..!
ಮುಂಡಗೋಡಿನ ಭ.ಶಂಭವನಾಥ ತೀರ್ಥಂಕರರ ಜಿನಮಂದಿರದಲ್ಲಿ ನವರಾತ್ರಿಯ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಜಿನಮಂದರದಲ್ಲಿ ಪದ್ಮಾವತಿ ಅಮ್ಮನವರಿಗೆ ವಿಶೇಷ ಪೂಜಾಕೈಂಕರ್ಯಗಳನ್ನು ಜೈನ ಶ್ರಾವಕರು ಹಮ್ಮಿಕೊಂಡಿದ್ದರು. ಪದ್ಮಾವತಿ ಅಮ್ಮನವರಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಸುಮಂಗಲೆಯರು ಜಿನಭಕ್ತಿಗೀತೆಗಳೊಂದಿಗೆ ಅಮ್ಮನವರಿಗೆ ವಿಶೇಷ ಅರ್ಚನೆ ಮಾಡಿದ್ರು. ಈ ವೇಳೆ ಪಟ್ಟಣದ ಹಲವು ಜೈನ ಮುಖಂಡರು, ಶ್ರಾವಕ ಶ್ರಾವಕಿಯರು ಭಾಗಿಯಾಗಿದ್ರು.
ಮುಂಡಗೋಡ ಬೆಟ್ಟಿಂಗ್ ದಂಧೆಯಲ್ಲಿ ಅದ್ವಾನ, “ಬಾಬತ್ತು” ಎಜೇಂಟರನ ಯಡವಟ್ಟಿನಿಂದ ಅಮಾಯಕನಿಗೆ ಶಿಕ್ಷೆಯಾ..? ಇದು ಜಸ್ಟ್ ಬ್ರೇಕಿಂಗ್ ಮಾತ್ರ..!
ಮುಂಡಗೋಡಿನ ಅಕ್ರಮ ದಂಧೆಗಳ ಪೈಕಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಹಾಲೂ,ಹಣ್ಣು, ತುಪ್ಪ ಸುರಿದು ಸಲುಹುತ್ತಿರೋ ಅದೊಬ್ಬ ಸರ್ಕಾರಿ ಶೂರ ಯಡವಟ್ಟು ಮಾಡಿಕೊಂಡಿದ್ದಾನೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾನ್ಯ ಎಸ್ಪಿಯವರ ಹೆಸರಲ್ಲಿ ದಂಧೆಗಿಳಿದಿರೋ ಆ ಕಿಲಾಡಿಯ ಮಂಕು ಬುದ್ದಿಗೆ, ಅಸಲೀ ಆರೋಪಿಗಳು ಯಾರೂ ಅಂತಾನೇ ಅರ್ಥ ಆಗಿಲ್ಲ. ಹೀಗಾಗಿ, ತನ್ನ ದಂಧೆಯ ಕೊಂಡಿಯೊಬ್ಬ ನೀಡಿರೋ ಹೆಸರನ್ನೇ ಬರೆದುಕೊಂಡು ಕೇಸು ದಾಖಲಿಸಿರೋ ಆ ಅಡ್ನಾಡಿಗೆ ಇವಾಗ ಬಿಸಿ ಮುಟ್ಟುವ ಎಲ್ಲಾ ಸೂಚನೆ ಇದೆ. ಸದ್ಯ ಮೀಟಿಂಗ್ ನಡೀತಿದೆ.. ಅಲ್ಲಿ ಆತ...
ಮುಂಡಗೋಡ ಪಟ್ಟಣದ ಮೂರು ಶಿಶು ಪಾಲನ ಕೇಂದ್ರ ಮುಚ್ಚುವ ಆತಂಕ, ಪೋಷಕರಿಂದ ಮನವಿ ಸಲ್ಲಿಸಲು ನಿರ್ಧಾರ..!
ಮುಂಡಗೋಡ ಪಟ್ಟಣದ ಮೂರು ಸ್ಥಳಗಳಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸ್ತಿದ್ದ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗ್ತಿದೆಯಾ..? ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ತೆರೆದಿರೋ ಶಿಶು ಪಾಲನ ಕೇಂದ್ರಗಳನ್ನು ಸದ್ಯ ಮುಚ್ಚಲಾಗ್ತಿದೆ ಅನ್ನೋ ಸುದ್ದಿ ತಿಳಿದು ಅಲ್ಲಿನ ಪೋಷಕರು ಆತಂಕಗೊಂಡಿದ್ದಾರೆ. ಹೀಗಾಗಿ, ಪೋಷಕರು ಶಿಶು ಪಾಲನ ಕೇಂದ್ರ ಮುಚ್ಚದಂತೆ ತಹಶೀಲ್ದಾರರಿಗೆ ಮನವಿ ಅರ್ಪಿಸಿದ್ದಾರೆ. ಜಿಲ್ಲೆ ಸೇರಿದಂತ ರಾಜ್ಯದ ಕೆಲವೆಡೆ ಶಿಶು ಪಾಲನ ಕೇಂದ್ರಗಳನ್ನು ಮುಚ್ಚಲಾಗುತ್ತಿದ್ದು, ಅದೇ ಭಯ ಇದೀಗ ಮುಂಡಗೋಡಿನ ಸುಭಾಷನಗರ, ಲಂಬಾಣಿ ತಾಂಡಾ ನಂ.3 ಹಾಗೂ ಗಣೇಶನಗರದ...
ಪಕ್ಷಿಧಾಮದಲ್ಲಿ ಕಳ್ಳರ ಪಾಲಾಗಿದ್ದ ಶ್ರೀಗಂಧದಮರ ಎರಡಲ್ಲ ಕಣ್ರಿ; ಬರೋಬ್ಬರಿ ಐದು..!? ಅಷ್ಟಕ್ಕೂ ಈ ಮಸಲತ್ತಿನ ಸೂತ್ರದಾರಿಗಳು ಯಾರ್ಯಾರು ಗೊತ್ತಾ..?
ಅತ್ತಿವೇರಿ ಪಕ್ಷಿಧಾಮದಲ್ಲಿ ಶ್ರೀಗಂಧದ ಮರ ಕಳ್ಳತನ ಪ್ರಕರಣ ನಾವೇಲ್ಲ ಅಂದುಕೊಂಡಷ್ಟು ಸುಲಭವಾಗಿಲ್ಲ ಅನಿಸ್ತಿದೆ. ಮೇಲ್ನೋಟಕ್ಕೆ ಹೇಳೋದಾದ್ರೆ ಇಲ್ಲಿನ ಅಧಿಕಾರಿಗಳೇ ಇಲಾಖೆಯ ಕಣ್ಣಿಗೆ ಮಣ್ಣೆರೆಚಿದ್ದು ಬಹುತೇಕ ನಿಚ್ಚಳವಾದಂತಾಗಿದೆ. ಯಾಕಂದ್ರೆ, ನಾವು ನಿನ್ನೆ ತಮ್ಮೇದುರು ಬಯಲು ಮಾಡಿದ್ದ ಶ್ರೀಗಂಧದ ಮರಗಳ್ಳತನ ಕೇಸಿನಲ್ಲಿ ನಮಗೆ ಕೆವಲ ಎರಡೇ ಶ್ರೀಗಂಧದ ಮರ ದೋಚಿದ್ದಾರೆ ಅನ್ನೋ ಮಾಹಿತಿಯಿತ್ತು. ಆದ್ರೆ, ಅಲ್ಲಿನ ಅಸಲೀಯತ್ತೇ ಬೇರೆಯದ್ದಿದೆ. ಎರಡಲ್ಲ, ಬರೋಬ್ಬರಿ ಐದು..? ಅಸಲು, ಕರ್ನಾಟಕದ ವಿಖ್ಯಾತ ಅತ್ತಿವೇರಿ ಪಕ್ಷಿಧಾಮದಲ್ಲಿ ಅಧಿಕಾರಿಗಳ ಕಣ್ಣಾಮುಚ್ಚಾಲೆ ಆಟದಲ್ಲಿ ಬಲಿಯಾಗಿದ್ದು ಕೇವಲ...
ಮುಂಡಗೋಡ ತಾಲೂಕಾಸ್ಪತ್ರೆಯ ಪಕ್ಕದಲ್ಲೇ ಶ್ರೀಗಂಧದ ಮರ ಕಳುವು, ಮತ್ತೆ ಆ್ಯಕ್ಟಿವ್ ಆಯ್ತಾ “ಗಂಧ” ಕಳ್ಳರ ಗ್ಯಾಂಗ್..?
ಮುಂಡಗೋಡ: ತಾಲೂಕಾಸ್ಪತ್ರೆಯ ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲೇ ಶ್ರೀಗಂಧದ ಮರಗಳು ಕಳ್ಳತನವಾಗಿದೆ. ಬೆಲೆಬಾಳುವ ಎರಡು ಶ್ರೀಗಂಧದ ಮರಗಳನ್ನು ಅನಾಮತ್ತಾಗಿ ಎಗರಿಸಿಕೊಂಡು ಹೋಗಿದ್ದಾರೆ ಕಳ್ಳರು. ಕೋಟೆ ಕೊಳ್ಳೆ ಹೊಡೆದ ಮೇಲೆ ಅದೇಂತದ್ದೋ ಬಾಗಿಲು ಹಾಕಿದ್ರು ಅಂತಾರಲ್ಲ ಹಾಗೆ, ಅರಣ್ಯ ಇಲಾಖೆಯ ಅಧಿಕಾರಿಗಳು ಎಲ್ಲಾ ಮುಗಿದ ಮೇಲೆ ಓಡೋಡಿ ಬಂದಿದ್ದಾರೆ. ಮತ್ತದೇ ತನಿಖೆಗಿಳಿದಿದ್ದಾರೆ. ಅದು ಜನವಸತಿ ಏರಿಯಾ..! ಅಸಲು, ಇವಾಗ ಶ್ರೀಗಂಧದ ಮರ ಕಳ್ಳತನ ಮಾಡಿಕೊಂಡು ಹೋಗಿರೋ ಜಾಗ ಇದೆಯಲ್ಲ, ಅದು ಬಹುತೇಕ ಜನವಸತಿಯ ಜಾಗವೇ, ಹೀಗಿದ್ದಾಗಲೂ ಯಾರಿಗೂ ಒಂಚೂರು...