ಹಾನಗಲ್ ನಲ್ಲಿ ಎರಡು ಪುಟ್ಟ ಕಂದಮ್ಮಗಳೂ ಸೇರಿ ಮೂವರ ಬರ್ಬರ ಹತ್ಯೆ..! ಮೈದುನನಿಂದಲೇ ನಡೀತಾ ಕೃತ್ಯ..?

ಹಾನಗಲ್ ತಾಲೂಕಿನ ಯಳ್ಳೂರಿನಲ್ಲಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈದುನನೇ ಅಣ್ಣನ ಹೆಂಡತಿ ಹಾಗೂ ಎರಡು ಪುಟ್ಟ ಪುಟ್ಟ ಕಂದಮ್ಮಗಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ ಅನ್ನೋ ಆರೋಪ ಕೇಳಿ ಬಂದಿದೆ.

ಕೊಲೆ ಆರೋಪಿ ಕುಮಾರ್

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ತ್ರಿಬಲ್ ಮರ್ಡರ್ ಆಗಿದೆ ಅನ್ನೋ ಅನುಮಾನ ವ್ಯಕ್ತವಾಗಿದ್ದು, ಗೀತಾ ಮರಿಗೌಡ್ರು (32), ಅಕುಲ್ (10), ಅಂಕಿತಾ (7) ಭೀಕರವಾಗಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ. ಬೆಳಗಿನ ಜಾವ 3.30 ರ ಸುಮಾರಿನಲ್ಲಿ ಭೀಕರ ಹತ್ಯೆ ನಡೆದಿದೆ ಎನ್ನಲಾಗಿದೆ. ಕುಮಾರಗೌಡ್ ಮರಿಗೌಡ್ರು (35)ಎಂಬುವ ಮೈದುನನೇ ಕೊಲೆ ಮಾಡಿ ನಾಪತ್ತೆಯಾಗಿರೋ ಅನುಮಾನ ವ್ಯಕ್ತವಾಗಿದೆ.

 

ಕೊಲೆಯಾದ ಮಹಿಳೆ

ಪಾಪಿ ತಮ್ಮನೇ, ಸ್ವಂತ ಅಣ್ಣ ಹೊನ್ನೆಗೌಡ ಎಂಬುವವನ ಹೆಂಡತಿ ಮತ್ತು ಮಕ್ಕಳನ್ನು ಹತ್ಯೆಗೈದಿದ್ದಾನೆ ಎನ್ನಲಾಗಿದ್ದು, ಮೃತ ಗೀತಾ ಪತಿ ಹೊನ್ನೆಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹೀಗಾಗಿ, ಸದ್ಯ ನಾಪತ್ತೆಯಾಗಿರೋ ಮೈದುನ ಕುಮಾರಗೌಡನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕೊಲೆಯಾದ ಕಂದಮ್ಮಗಳು

ಸದ್ಯ ಘಟನಾ ಸ್ಥಳಕ್ಕೆ ಹಾವೇರಿ ಎಸ್ಪಿ, ಹಾನಗಲ್ ಸಿಪಿಐ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

error: Content is protected !!