ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ DyRFO ಒಬ್ರು ಹುಲಿ ಉಗುರಿನ ಪೆಂಡೆಂಟ್ ಧರಿಸಿ ಫೋಟೊಗೆ ಫೋಸ್ ನೀಡಿದ್ದಾರೆ. ಹಾಗಂತ ಸಾಕಷ್ಟು ಚರ್ಚೆಗಳು ಖುದ್ದು ಇಲಾಖೆಯ ಅಂಗಳದಲ್ಲೇ ಕಳೆದ ಎರಡು ಮೂರು ದಿನಗಳಿಂದ ನಡೆಯುತ್ತಿದೆ. ಅಲ್ದೇ ಸಾಮಾಜಿಕ ಜಾಲತಾಣಗಳಲ್ಲಿ ಆ ಪೋಟೋಗಳೂ ಹರಿದಾಡ್ತಿವೆ. ಇಲಾಖೆಯ ಅಧಿಕಾರಿಗಳೇ ಹೀಗೆ ಮಾಡಿದ್ರೆ, ಸಾರ್ವಜನಿಕರ ಪಾಡೇನು ಅನ್ನೋ ಪ್ರಶ್ನೆ ನೆಟ್ಟಿಗರು ಕೇಳ್ತಿದಾರಂತೆ.
ಅವರು ಹಾಗಾ..?
ಅಸಲು, ಅವ್ರು ಇಡೀ ಕೆನರಾ ವಲಯದಲ್ಲೇ ಜಬರ್ದಸ್ತ್ ಪ್ರಭಾವಿಯಂತೆ. ಇಡೀ ಇಲಾಖೆಯೇ ಇವರ ಇಶಾರೆಯಲ್ಲಿ ಬದ್ರವಾಗಿದೆ ಅನ್ನೋ ಪುಕಾರು ಇದೆ. ಅಂತಹದ್ದೊಂದು ಹವಾ ಮೆಂಟೇನ್ ಮಾಡಿರೋ ಅವರ ವಿರುದ್ಧ ತುಟಿ ಬಿಚ್ಚಲು ಅಲ್ಲಿನ ಹಿರಿಯ ಅಧಿಕಾರಿಗಳೇ ಒಂದುಕ್ಷಣ ಬೆವರಿ ಬಿಡ್ತಾರೆ ಅನ್ನೋ ವಾತಾವರಣ ಇದೆಯಂತೆ. ಅದಕ್ಕಾಗೇ ನಾವೂ ಕೂಡ ಅವ್ರಿಗೆ “ಅವನು ಇವನು” ಅನ್ನದೇ ಫುಲ್ಲಿಲೋಡೇಡ್ ಗೌರವ ನೀಡುತ್ತಿದ್ದೆವೆ.. ಯಾಕಂದ್ರೆ, ಅದು ನಮ್ಮ ಪುಣ್ಯ ಅಂದುಕೊಂಡಿದ್ದಿವಿ.
ನಮಗೂ ಬೆವರು ಕಣ್ರಿ..!
ಅಲ್ದೇ ಅವರ ಹವಾ, ಬಲಿಷ್ಟ ಬಿರುಗಾಳಿಯ ಬಗ್ಗೆ ಹತ್ತಾರು ಜನ ಇಲಾಖೆಯ ಪಡಸಾಲೆಯಲ್ಲಿದ್ದವರೇ ಹೇಳಿದಾಗ, ನಮಗಂತೂ ಬರಬಾರದ ಕಡೆಯೇಲ್ಲ ಬೆವರು ಬಂದಿದೆ. ನಿಜ ಅಂದ್ರೆ ನಾವೂ ಕೂಡ ಅವರ ಸಾಧನೆಗಳ “ಹವಾ”ಗಳಿಗೆ ಒಂದು ಗೌರವದ ಸೆಲ್ಯೂಟ್ ಹೊಡಿತಿವಿ. ಆದ್ರೆ, ಅರಣ್ಯ ಇಲಾಖೆಯ ವನದೇವಿಯ ಮಡಿಲಿನ ರಕ್ಷಣೆಗಾಗಿ ಇದ್ದ ಮಗನೊಬ್ಬ ಹೀಗೇಲ್ಲ ವನ್ಯಜೀವಿಯ ಉಗುರನ್ನು ಆಭರಣವಾಗಿ ಬಳಸಿಕೊಂಡ್ರೆ ಏನೇನ್ನಬೇಕು ನೀವೇ ಹೇಳಿ..! ಅದು ಅಸಲಿಯಾದ್ರೂ ಸರಿ, ನಕಲಿಯಾದ್ರೂ ಸರಿ ಅದು ಖಂಡಿತ ತಪ್ಪೇ ತಾನೇ..?
ಅಸಲಿಯೋ..? ನಕಲಿಯೋ..?
ಅಂದಹಾಗೆ, ಆ ಪೋಟೊ ನೋಡಿದ್ರೆ ಮೇಲ್ನೋಟಕ್ಕೆ ಅದು ಹುಲಿ ಉಗುರು ಇರಬಹುದು ಅಂತಾ ಕೆಲವ್ರು ಹೇಳ್ತಿದಾರೆ. ಇಲ್ಲಿ, ಅದು ಹುಲಿ ಉಗುರೋ ಅಥವಾ ನಕಲಿ ಉಗುರೋ ಮುಖ್ಯ ಅನಿಸ್ತಿಲ್ಲ. ಬದಲಾಗಿ, ಅದು ನಕಲಿಯೇ ಇದ್ದರೂ, ತಾನೊಬ್ಬ ಅರಣ್ಯ ಇಲಾಖೆಯ ನೆರಳಲ್ಲಿ ಕಾರ್ಯನಿರ್ವಹಿಸುವ ಇವ್ರು ಅಂತಹ ಪೆಂಡೆಂಟ್ ಧರಿಸಿ ಸಾರ್ವಜನಿಕರಿಗೆ ಅದ್ಯಾವ ಮೆಸೇಜ್ ಕೊಡಲು ಹೊರಟಿದ್ದರು ಅನ್ನೋದೇ ನಮ್ಮ ಮೂಲ ಪ್ರಶ್ನೆ..! ಹುಲಿ ಉಗುರು ಧರಿಸಿ ಸುರ ಸುಂದರಾಂಗನಂತೆ ಫೋಸು ಕೊಟ್ರೆ ಅದನ್ನ ನೋಡಿದ ನಮ್ಮ ಹಳ್ಳೀ ಹೈಕ್ಳು ಅದೇ ಧಿಮಾಕನ್ನೇ ಫಾಲೋ ಮಾಡಲ್ವಾ..? ಹಾಗೆ ಫಾಲೋ ಮಾಡಿದ್ರೆ ಅರಣ್ಯದಲ್ಲಿ ಈಗಾಗಲೇ ಅಳಿವಿನಂಚಿನಲ್ಲಿರೋ ಹುಲಿಗಳ ಪರಿಸ್ಥಿತಿ ಏನಾಗಬೇಡ..? ಕುಳಿತು ಯೋಚಿಸಿ.
ತಿಪ್ಪೆ ಸಾರಿಸುವ ಯತ್ನ..?
ಅಸಲು, ಈ ಫೋಟೊ ಇಲಾಖೆಯ ಅಂಗಳದಲ್ಲಿ ಹರಿದಾಡುತ್ತಲೇ ಕೆಲವು ಪ್ರಮಾಣಿಕ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರಂತೆ. ಆದ್ರೆ, ಅವನ ಹಿಂದೆ ಮುಂದೆ ಕೊಸರಾಡುವ ಕೆಲ ಅಡ್ನಾಡಿಗಳು ಬೆಂಗಾವಲಿಗೆ ನಿಂತಿದ್ದಾರೆ ಅನ್ನೋದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಶಿರಸಿಯ ದಕ್ಷ CCF ಸಾಹೇಬ್ರು, ಯಲ್ಲಾಪುರದ ದಕ್ಷ DFO ಸಾಹೇಬ್ರು ಈ ಘಟನೆಯ ಸಂಪೂರ್ಣ ಸತ್ಯಾಸತ್ಯತೆ ಅರಿತು ಕ್ರಮ ಕೈಗೊಳ್ಳಬೇಕಿದೆ.
ಇದರ ಹೊರತಾಗಿ..!
ಹಾಗೆ ನೋಡಿದ್ರೆ, ಯಲ್ಲಾಪುರ- ಮುಂಡಗೋಡ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ಪ್ರಮಾಣಿಕ ಅಧಿಕಾರಿಗಳ ದೊಡ್ಡದೊಂದು ಹಿಂಡೇ ಇದೆ. ಅಂತವರಿಗೇಲ್ಲ ನಮ್ಮದೊಂದು ಬಿಗ್ ಸೆಲ್ಯೂಟ್ ಇದೆ. ಆದ್ರೆ ಇಂತಹ ಪ್ರಮಾಣಿಕರ ನಟ್ಟ ನಡುವೆಯೇ ಕೆಲವೇ ಕೆಲವ್ರು ಏನೇನೋ ಅಂದುಕೊಂಡು ಬದುಕ್ತಿದಾರೆ. ಅಸಲು, ಇವ್ರು ಅರಣ್ಯ ಇಲಾಖೆಯ ಅಧಿಕಾರಿಗಳೋ ಅಥವಾ ರಾಜಕೀಯ ಪುಡಾರಿಗಳೋ ಅರ್ಥವೇ ಆಗ್ತಿಲ್ಲ. ಬರೀ ಜಾತೀ ಲೆಕ್ಕಾಚಾರದ ಗುಂಪು ಕಟ್ಟಿ, ಕೆಲ ರಾಜಕೀಯ ನಾಯಕರ “ಗೆದ್ದೆತ್ತಿನ ಬಾಲ” ಹಿಡಿಯುವ ಹುಂಬ ಚಾಳಿ ರೂಢಿಸಿಕೊಂಡಿದ್ದಾರೆ. ಇಂತವರೇಲ್ಲ ಇಲಾಖೆಯ ಕೆಲಸ ಮಾಡುವುದನ್ನು ಬಿಟ್ಟು ಇಲ್ಲದ ಉಸಾಬರಿ ಮಾಡಿಕೊಂಡು ತಿರುಗುತ್ತಿದ್ದಾರೆ ಅನ್ನೋ ಆರೋಪಗಳಿವೆ.
ಹೀಗಾಗಿ, ಅಂತವರ ಕಡೆ ಹಿರಿಯ ಅಧಿಕಾರಿಗಳು ಕೊಂಚ ದೃಷ್ಟಿ ಹಾಯಿಸಬೇಕಿದೆ. ರಾಜಕೀಯದ ತೆವಲು ಇದ್ದರೆ, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಫುಲ್ ಟೈಮ್ ರಾಜಕೀಯ ಮಾಡಿಕೊಂಡಿರಲಿ. ಬೇಕಿದ್ರೆ ನಾವೂ ಅಂತವರಿಗೆ ಇಷ್ಟವಾದ್ರೆ ಒಂದು ಓಟು ಹಾಕ್ತಿವಿ, ಅದನ್ನ ಬಿಟ್ಟು ಇಲಾಖೆಯಲ್ಲೇ ಇದ್ದುಕೊಂಡು ರಾಜಕೀಯದ ಆಟಗಳನ್ನು ಆಡುವವರ ಕಿವಿ ಹಿಂಡಬೇಕು ಅಂತಿದಾರೆ ಸಾಮಾನ್ಯ ಜನ.