Home Public First Newz

Author: Public First Newz (Public First Newz)

Post

ಗುಂಜಾವತಿ ಬಳಿ ಕಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಗಂಭೀರ

ಮುಂಡಗೋಡ: ಕಾರಿಗೆ ಮೋಟರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರನನ್ನು ಮೈನಳ್ಳಿ ಗ್ರಾಮದ ಸಣ್ಯಾ ಸಿದ್ದಿ ಎಂದು ತಿಳಿದು ಬಂದಿದೆ. ಈತನು ಮುಂಡಗೋಡ ಕಡೆಯಿಂದ ಹೋಗುತ್ತಿರುವಾಗ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಯಲ್ಲಾಪೂರದಿಂದ ಮುಂಡಗೋಡ ಕಡೆಗೆ ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದು ಸ್ವಯಂಕೃತ ಅಪಘಾತ ಪಡಿಸಿಕೊಂಡು ಹಣೆ, ತಲೆಗೆ, ಕಾಲು ಹಾಗೂ ಗದ್ದಕ್ಕೆ ಗಾಯಪಡಿಸಿಕೊಂಡಿದ್ದಾನೆಂದು ಮುಂಡಗೋಡ ಠಾಣೆಯಲ್ಲಿ ನೀಡಿದ...

Post

ಗೋ ಕಳ್ಳರಿಗೆ ನೆರವು; ಬಜರಂಗದಳ ಮಾಜಿ ಸಂಚಾಲಕ ಆರೆಸ್ಟ್

ಕಾರ್ಕಳ: ಗೋ ಕಳ್ಳರಿಗೆ ನೆರವಾಗುತ್ತಿದ್ದ ಕಾರ್ಕಳ ನಗರದ ಬಜರಂಗದಳ ಮಾಜಿ ಸಂಚಾಲಕ ಅನಿಲ್ ಪ್ರಭುನನ್ನ ಪೊಲೀಸರು ಬಂಧಿಸಿದ್ದಾರೆ. ಬಜರಂಗದಳ ಕಾರ್ಕಳ ನಗರ ಘಟಕದ ಮಾಜಿ ಸಂಚಾಲಕ ಅನಿಲ್ ಪ್ರಭು ಎಂಬಾತನನ್ನು ಕಳವುಗೈದ ಹಸುಗಳನ್ನು ವಧಿಸಿ ಅದರ ಮಾಂಸ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ದನಗಳನ್ನು ಕಳವು ಮಾಡಿ ವಧಿಸಿ ಮಾಂಸ ಮಾರಾಟ ಜಾಲದವರಿಗೆ ಅಭಯವಾಗಿದ್ದ ಅನಿಲ್ ಪ್ರಭು, ಪೊಲೀಸರಿಂದ ಯಾವುದೇ ರೀತಿ ತೊಂದರೆಯಾಗದಂತೆ ನಾನಿದ್ದೇನೆ ಎಂದು ವಾಗ್ದಾನ ನೀಡಿ ಅವರಿಂದ ಪಾಲು ಪಡೆಯುತ್ತಿದ್ದನೆಂದು...

Post

ನಾಳೆಯೂ ಬಸ್ ಸಿಗಲ್ಲ.. ಮತ್ತೆ ಮುಂದುವರೆದ ಸಾರಿಗೆ ಮುಷ್ಕರ

ಕಾರವಾರ- ಸರ್ಕಾರ ಹಾಗೂ ಸಾರಿಗೆ ನೌಕರರ ನಡುವಿನ ಜಿದ್ದಾ ಜಿದ್ದು ಬಗೆ ಹರಿಯುವ ಲಕ್ಷಣಗಳೇ ಕಾಣ್ತಿಲ್ಲ.. ಕಳೆದ ಮೂರು ದಿನಗಳಿಂದ ಮುಷ್ಕರದಲ್ಲಿ ನಿರತರಾಗಿರೋ ಸಾರಿಗೆ ಚಾಲಕ, ನಿರ್ವಾಹಕರು ನಾಳೆಯೂ ಮುಷ್ಕರ ಮುಂದುವರೆಸಿದ್ದಾರೆ.  ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಂಧಾನ ಮತ್ತೆ ವಿಫಲವಾಗಿದೆ. ವಿಧಾನ ಸಭೆಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಸರ್ಕಾರದ ಜೊತೆ ಸಂಧಾನ ಯಶಸ್ವಿ ಅಂತಾನೇ ಭಾವಿಸಲಾಗಿತ್ತು.. ಆದ್ರೆ, ಸಭೆಯ ಬಳಿಕ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನಾಳೆ ಮುಷ್ಕರ ಮುಂದುವರಿಯೋ ಬಗ್ಗೆ ಪ್ರೀಡಂ ಪಾರ್ಕ್ ನಲ್ಲಿ...

Post

ಗ್ರಾ.ಪಂ ಚುನಾವಣೆ; ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣು: ಡಿಸಿ ಡಾ.ಹರೀಶ್ ಕುಮಾರ್

ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿನ ಅವಿರೋಧ ಆಯ್ಕೆಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ ಅಂತಾ ಉತ್ತರ ಕನ್ನಡ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.. ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಕಾರವಾರ, ಅಂಕೋಲ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಲ್ಲಿ ಮುಗಿದಿದೆ. ಇನ್ನು, ಎರಡನೇ ಹಂತದಲ್ಲಿ ಸಿದ್ದಾಪುರ, ಸಿರಸಿ, ಮುಂಡಗೊಡ, ಯಲ್ಲಾಪುರ, ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾಗಳಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ನಡೆಯುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳು ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿ...

Post

ಹುನಗುಂದ ಬಳಿ ಅಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಗಡಿ ಮಹಿಳೆ

ಮುಂಡಗೋಡ- ಹೆರಿಗೆಗಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ 108 ಅಂಬುಲೆನ್ಸ್ ನಲ್ಲಿಯೇ ಗರ್ಭಿಣಿಯೊಬ್ರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.. ಮುಂಡಗೋಡ ತಾಲೂಕಿನ ಅಗಡಿ ಗ್ರಾಮದ 22 ವರ್ಷ ವಯಸ್ಸಿನ ಲಕ್ಷ್ಮೀ ಸುನಿಲ್ ಲಮಾಣಿ ಎಂಬುವರಿಗೆ ಇವತ್ತು ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ 108 ಅಂಬುಲೆನ್ಸ್ ಮೂಲಕ ಮುಂಡಗೋಡ ಆಸ್ಪತ್ರೆಗೆ ಗರ್ಭಿಣಿಯನ್ನು ಸಾಗಿಸುವ ಮದ್ಯೆ ಹುನಗುಂದ ಕ್ರಾಸ್ ಬಳಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ಇದು ಇವ್ರಿಗೆ ಎರಡನೇಯ ಹೆರಿಗೆಯಾಗಿದ್ದು ಮಗು ಆರೋಗ್ಯವಾಗಿದೆ.. ಈ ವೇಳೆ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್...

Post

ಅನಾಥ ಬುದ್ದಿಮಾಂದ್ಯೆಯ ಮೇಲೆ ಅತ್ಯಾಚಾರ; ಅನ್ನ ಕೊಡುವ ನೆಪದಲ್ಲಿ ವಿಕೃತಿ ಮೆರೆದ ಯುವಕ ಆರೆಸ್ಟ್

ಹಾವೇರಿ- ಹಾವೇರಿಯಲ್ಲೊಂದು ಹೀನ ಕೃತ್ಯ ನಡೆದಿದೆ..ಬುದ್ಧಿಮಾಂಧ್ಯ ಮಹಿಳೆಯ ಮೇಲೆ ಓರ್ವ ಪಾಪಿ ಯುವಕ ಅತ್ಯಾಚಾರ ಎಸಗಿದ್ದಾನೆ.. ಡಿಸೆಂಬರ್ 7 ರ ಮಧ್ಯರಾತ್ರಿ, ಹಾವೇರಿಯ ಎಪಿಎಂಸಿ ಬಳಿಯ ಉಜ್ಜಿವನ್ ಫೈನಾನ್ಸ್ ಕಟ್ಟಡದಲ್ಲಿ ಮಲಗಿದ್ದ ಸುಮಾರು 40-45 ವರ್ಷ ಪ್ರಾಯದ ಬುದ್ದಿಮಾಂದ್ಯೆಗೆ, 24 ವರ್ಷದ ತಸ್ಲೀಮ್ ಸೆರವಾಡ್ ಎಂಬ ಆರೋಪಿ ಊಟ ಕೊಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾನೆ.. ಈತನ ಕುಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.. ಇನ್ನು, ಸಿಸಿಟಿವಿ ದೃಶ್ಯ ನೋಡಿದ ಕಟ್ಟಡದ ಮಾಲೀಕ ನವೀನ್ ಕುಮಾರ್ ತೋಟಣ್ಣನವರ್ ಪೋಲಿಸರಿಗೆ ದೂರು...

Post

ನಾಳೆಯೂ ಬಸ್ ಗಳು ರಸ್ತೆಗಿಳಿಯಲ್ಲ; ಕುಟುಂಬಸ್ಥರೊಂದಿಗೆ ಪ್ರತಿಭಟನೆಗೆ ಸಜ್ಜಾದ ಸಾರಿಗೆ ನೌಕರರು

ಬೆಂಗಳೂರು- ಸಾರಿಗೆ ನೌಕರರ ಮುಷ್ಕರ ಮತ್ತಷ್ಟು ಜೋರಾಗುವ ಲಕ್ಷಣಗಳು ಕಾಣ್ತಿವೆ.. ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಅಂತಾ ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸ್ತಿರೋ ಸಾರಿಗೆ ಸಂಸ್ಥೆಯ ಚಾಲಕರು ಹಾಗೂ ನಿರ್ವಾಹಕರು ಎರಡು ದಿನದಿಂದ ಯಾವುದೇ ಸರ್ಕಾರಿ ಬಸ್ ಗಳನ್ನು ರಸ್ತೆಗಿಳಿಸಿಲ್ಲ.. ಪರಿಣಾಮ ನಿನ್ನೆಯಿಂದ ರಾಜ್ಯದಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.. ಇನ್ನು, ಸರ್ಕಾರ ಪ್ರತಿಭಟನಾನಿರತರ ಜೊತೆಗೆ ನಡೆಸುತ್ತಿರೊ ಸಂಧಾನಗಳು ಯಶಸ್ವಿಯಾಗಿಲ್ಲ.. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ‌ ನೀಡಿದ ಮೇಲಂತೂ ಸಾರಿಗೆ ನೌಕರರ ಮುಷ್ಕರ ಮತ್ತಷ್ಟು...

Post

ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಮುಂಡಗೋಡ- ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ 108 ಅಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿರೋ ಘಟನೆ ಮಳಗಿ ಸಮೀಪ ಶಿರಸಿ ರಸ್ತೆಯಲ್ಲಿ ನಡೆದಿದೆ.. ಗೋಟಗೋಡಿಕೊಪ್ಪದ ರೂಪಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.. ಗೊಟಗೋಡಿಕೊಪ್ಪದಿಂದ ಶಿರಸಿ ಗೆ ಹೋಗುವ ಮಾರ್ಗ ಮದ್ಯೆ ಹೆರಿಗೆಯಾಗಿದ್ದು ತಾಯಿ‌ ಮಗು ಆರೋಗ್ಯವಾಗಿದೆ..

Post
ಕಾಡಾನೆ ದಾಳಿಯಿಂದ ಬೆಳೆನಾಶ; ಮನನೊಂದ ರೈತ ಆತ್ಮಹತ್ಯೆ

ಕಾಡಾನೆ ದಾಳಿಯಿಂದ ಬೆಳೆನಾಶ; ಮನನೊಂದ ರೈತ ಆತ್ಮಹತ್ಯೆ

ಮುಂಡಗೋಡ: ಕಾಡಾನೆಗಳು ಭತ್ತದ ಕಾಳು ಬಣವೆಯನ್ನು ತಿಂದು ತುಳಿದು ಹಾನಿ ಮಾಡಿದ್ದನ್ನೆ ಮನಸ್ಸಿಗೆ ಹಚ್ಚಿಕೊಂಡು ತಾಲೂಕಿನ ಬೆಡಸಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯ ತೊಗರಳ್ಳಿ ಗ್ರಾಮದ ರೈತನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.. ಪ್ರಭಾಕರ್ ವಾಮನ ಕೊರ್ಸಿ(51) ಆತ್ಮಹತ್ಯೆ ಮಾಡಿಕೊಂಡ ರೈತ.. ಈತ ತನ್ನ ವ್ಯವಸಾಯಕ್ಕೆಂದು ವಿವಿಧ ಬ್ಯಾಂಕ ಹಾಗೂ ಸಂಘ ಸಂಸ್ಥೆಗಳಲ್ಲಿ ಸುಮಾರು 4ಲಕ್ಷ 20 ಸಾವಿರ ರೂಪಾಯಿ ಸಾಲ ಮಾಡಿ ಹೊಲದಲ್ಲಿ ಭತ್ತದ ಬೆಳೆಯನ್ನು ಬೆಳೆದು ಕೊಯ್ಲು ಮಾಡಿ ಕಾಳು ತುಂಬಿದ...

Post

ಕಾಲುವೆಯಲ್ಲೂ ಅಕ್ರಮದ ವಾಸನೆ.?; ತನಿಖೆ ಕೋರಿ ತಹಶೀಲ್ದಾರರಿಗೆ ಅಟ್ಟಣಗಿ ಗ್ರಾಮಸ್ಥರ ಮನವಿ

ಮುಂಡಗೋಡ-ತಾಲೂಕಿನ ಅಟ್ಟಣಗಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯವರು ಕೈಗೊಂಡ ಕಾಲುವೆ ಕಾಮಗಾರಿ ಕಳಪೆಯಾಗಿದೆ, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಬೇಕೆಂದು ಅಟ್ಟಣಗಿ ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ನಾಗನೂರ( ಹನುಮಾಪುರ) ಗ್ರಾಮ ಪಂಚಾಯತ ವ್ಯಾಪ್ತಿಯ ಅಟ್ಟಣಗಿ ಕೆರೆಗೆ ಸಣ್ಣ ನೀರಾವರಿ ಇಲಾಖೆಯಿಂದ ಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಕಾಮಗಾರಿ ಅಂದಾಜು ಮೊತ್ತ 50 ಲಕ್ಷ ಇದ್ದು ಕಾಮಗಾರಿ ಸಂಪೂರ್ಣ ಕಳಪೆ ಮಾಡಿದ್ದಾರೆ. ಈ ಕಾಮಗಾರಿಯಿಂದ ಅಟ್ಟಣಗಿ ಭಾಗದ ಸುಮಾರು 400 ರಿಂದ 500 ಎಕರೆ ಜಮೀನಿಗೆ ನೀರು ಹಾಯಲು...

error: Content is protected !!