ಶಿವಮೊಗ್ಗ: ಕಳೆದ ನಾಲ್ಕು ದಿನದ ಹಿಂದೆ ಮದುವೆಯಾಗಿದ್ದ ನವ ವಿವಾಹಿತೆ ಕೊರೊನಾಗೆ ಬಲಿಯಾದ ದಾರುಣ ಘಟನೆ
ಶಿವಮೊಗ್ಗ ಜಿಲ್ಲೆಯ ಮಲವಗೊಪ್ಪದಲ್ಲಿ ನಡೆದಿದೆ.
ಪೂಜಾ ಎಂಬುವವರೇ ಕೊರೋನಾಗೆ ಬಲಿಯಾದ ನವವಧು ಆಗಿದ್ದಾರೆ..
ಪೂಜಾ ಅವರ ವಿವಾಹ ಕಳೆದ ನಾಲ್ಕು ದಿನದ ಹಿಂದೆ ಅಂದರೆ ಮೇ 24 ರಂದು ಹರಿಗೆಯ ಮಹೇಶ್ ಅವರೊಂದಿಗೆ ನಡೆದಿತ್ತು.
ಮದುವೆಯ ಮರು ದಿನದಿಂದಲೇ ಪೂಜಾಗೆ ಜ್ವರ ಕಾಣಿಸಿಕೊಂಡಿತ್ತು. ಆದರೆ ಸ್ಥಳೀಯ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಪೂಜಾಗೆ, ಇಂದು ಜ್ವರ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೂಜಾ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಹೀಗಾಗಿ, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಇದೀಗ ಸೂತಕ ಆವರಿಸಿದೆ.