ವಿಶೇಷ ವರದಿ:

ಮುಂಡಗೋಡ: ಆತ ಓರ್ವ ಚಿತ್ರ ಕಲಾವಿದ, ಪೇಂಟಿಂಗ್ ಮಾಡಿಕೊಂಡು ತನ್ನ ಬದುಕು ಕಟ್ಟಿಕೊಂಡಿದ್ದವ, ಆದ್ರೆ ಸದ್ಯ ಕೊರೋನಾ ಮಹಾಮಾರಿ ಜನರ ಜೀವ ಹಿಂಡುತ್ತಿರೋ ಸಂದರ್ಭದಲ್ಲಿ ಆತನೂ ಬಸವಳಿದು ಹೋಗಿದ್ದ.. ಕೊರೋನಾ ಮಹಾಮಾರಿಯಿಂದ ಅದೇಷ್ಟೋ ಸ್ನೇಹಿತರಿಗೆ ಆಗುತ್ತಿರೋ ತೊಂದರೆ, ಸಂಕಷ್ಟಗಳನ್ನು ಕಣ್ಣಾರೆ ಕಂಡಿದ್ದ, ಹೀಗಾಗಿ ಕೊರೋನಾ ವಿರುದ್ಧ ತಾನೂ ಯುದ್ಧ ಸಾರಬೇಕು ಅಂತಾ ನಿರ್ಧಾರ ಮಾಡಿದ್ದ..

ಯಸ್, ಹೀಗೆ ಕೊರೋನಾ ಹಿಮ್ಮೆಟ್ಟಿಸಲು ಆ ಕಲಾವಿದನಿಗೆ ಹೊಳೆದದ್ದು ಬೇರೆ ಏನೂ ಅಲ್ಲ.. ಜನ್ರಿಗೆ ಜಾಗ್ರತಿ ಮೂಡಿಸುವ ಮಹತ್ಕಾರ್ಯ.. ಹೀಗಾಗಿ, ತನ್ನ ಬತ್ತಳಿಕೆಯಲ್ಲಿದ್ದ ಕುಂಚಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡು ಫಿಲ್ಡಿಗಿಳಿದುಬಿಟ್ಟ.. ಪರಿಣಾಮ, ಹಳ್ಳಿ ಹಳ್ಳಿಗಳಲ್ಲಿ ಕೊರೋನಾ ಕುರಿತು ಚಿತ್ರಗಳ ಮೂಲಕವೇ ಜಾಗ್ರತಿ ಮೂಡಿಸುತ್ತಿದ್ದಾನೆ..

ಆತನ ಹೆಸ್ರು ಚಿದಾನಂದ್ ಬಡಿಗೇರ್.. ಮುಂಡಗೋಡಿನ ಹಳೂರು ನಿವಾಸಿ. ಚಿತ್ರನಟ ಉಪೇಂದ್ರರ ಬಹುದೊಡ್ಡ ಫ್ಯಾನ್. ಉಪೇಂದ್ರರವರ ಸಾಮಾಜಿಕ ಜವಾಬ್ದಾರಿಯ ಕಾರ್ಯದಂತೆಯೇ ಅವ್ರ ಅಭಿಮಾನಿಯಾದ ಚಿದಾನಂದ ಕೂಡ ತನ್ನ ಕೈಲಾದ ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ..

ಮುಂಡಗೋಡ ತಾಲೂಕಿನ ಹಲವು ಹಳ್ಳಿಗಳಿಗೆ ತೆರಳಿ, ತಮ್ಮ ಸ್ವಂತ ಖರ್ಚಿನಿಂದಲೇ ಬಣ್ಣಗಳನ್ನು ಖರೀದಿಸಿ ಚಿತ್ರ ಬಿಡಿಸಿ ಕೊರೋನಾ ಜಾಗ್ರತಿ ಮೂಡಿಸುತ್ತಿರೋದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ..

error: Content is protected !!