ಮುಂಡಗೋಡ- ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಸನವಳ್ಳಿ ಗ್ರಾಮದಲ್ಲಿ ಇದುವರೆಗೂ ಗ್ರಾಮದ ಮುಖ್ಯರಸ್ತೆಯಲ್ಲಿ ಪಕ್ಕಾಗಟಾರ ಇಲ್ಲದೆ ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಾರ್ವಜನಿಕರಿಗೆ ಇನ್ನಿಲ್ಲದ ಪಜೀತಿ ತಂದಿಡುತ್ತಿದೆ..!

ಗಟಾರದ ಕಲುಷಿತ ನೀರು ಸಂಪೂರ್ಣವಾಗಿ ಮುಖ್ಯ ರಸ್ತೆಯ ಮೇಲೆ ಬಂದು ಸಾರ್ವಜನಿಕರ ಓಡಾಟಕ್ಕೆ, ವಾಹನ ಸವಾರರಿಗೆ ತೊಂದರೆಯಾಗಿದೆ. ವಾಹನ ಸವಾರರು ಪ್ರತಿದಿನವೂ ಈ ರಸ್ತೆಯಲ್ಲಿ ಜಾರಿಬಿದ್ದು ಗಾಯಗೊಂಡಿರೋ ಸಾಕಷ್ಟು ಪ್ರಕರಣಗಳಿವೆ. ನಿತ್ಯವೂ ಹೀಗೆ ಈ ರಸ್ತೆಯಲ್ಲಿ ಎದ್ದು ಬಿದ್ದು ಅಂಗೈಯಲ್ಲಿ ಜೀವ ಹಿಡಿದು ಓಡಾಡುವುದು ಅನಿವಾರ್ಯ ಎಂಬಂತಾಗಿದೆ.

ಚರಂಡಿ ನೀರು ಗ್ರಾಮದಲ್ಲಿ ಸುಮಾರು ಎರಡು ಕಿಲೋಮೀಟರ್ ವರೆಗೆ ಹರಿಯುತ್ತದೆ. ಸಾಂಕ್ರಾಮಿಕ ರೋಗಗಳಿಗೆ ಕಾರ್ಖಾನೆಯಂತಾಗಿದೆ. ನಿತ್ಯವೂ ಈ ರಸ್ತೆಯಲ್ಲಿ ಸಂಚರಿಸುವ ಗ್ರಾಮಸ್ಥರು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಆದ್ರೆ ಇದುವರೆಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಗಾಲಿ, ಚುನಾಯಿತ ಜನಪ್ರತಿನಿಧಿಳಗಾಲಿ ಈ ಗ್ರಾಮದ ಸಮಸ್ಯೆಯ ಬಗ್ಗೆ ಗಮನ ಹರಿಸಿಲ್ಲ..
ಕೊಳಚೆ ನೀರಿಗೆ ಸಮರ್ಪಕವಾದ ಗಟಾರ ನಿರ್ಮಿಸಿ ಸಾರ್ವಜನಿಕರಿಗೆ ಆಗುವ ಸಮಸ್ಯೆಗೆ ಪರಿಹಾರ ನೀಡುತ್ತಿಲ್ಲ ಅನ್ನೋದು ಗ್ರಾಮಸ್ಥರ ಆರೋಪವಾಗಿದೆ.

ಇನ್ನಾದ್ರೂ ಸಂಬಂದ ಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸ್ತಾರಾ..? ಕಾದು ನೋಡಬೇಕಿದೆ.

error: Content is protected !!