ಮುಂಡಗೋಡ-ತಾಲೂಕಿನಲ್ಲಿ ನೊಂದವರ ಕಣ್ಣೀರು ಒರೆಸುತ್ತಿರೋ ಟಿಬೇಟಿಗರ ಕರ್ಮಾ ಪೌಂಡೇಶನ್ ಈಗ ಮತ್ತೊಂದು ಮಹತ್ತರ ಕಾರ್ಯ ಮಾಡಿ ಆದರ್ಶ ತೋರಿದೆ. ಬುದ್ದ ಪೂರ್ಣಿಮೆಯ ಅಂಗವಾಗಿ, ಮುಂಡಗೋಡ ತಾಲೂಕಾಸ್ಪತ್ರೆಗೆ ಒಟ್ಟೂ 1,33,280 ರೂ. ಮೌಲ್ಯದ ವೈದ್ಯಕೀಯ ಸಲಕರಣೆ ನೀಡಿದ್ದಾರೆ.

ಅದ್ರಲ್ಲಿ, 49280 ರೂ.ಮೌಲ್ಯದ
NIBP patient monitor machine,
84,000 ರೂ. ಮೌಲ್ಯದ oxygen concentrator ಸೆರಿದ್ದು ಮುಂಡಗೋಡ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್.ಇಂಗಳೆಯವರಿಗೆ ಶುಕ್ರವಾರ ಹಸ್ತಾಂತರಿಸಿದ್ದಾರೆ.

ಇನ್ನು ಟಿಬೇಟಿಯನ್ ಕಾಲೋನಿಯ ಡಿಟಿಆರ್ ಆಸ್ಪತ್ರೆಗೂ ಕೂಡ 84 ಸಾವಿರ ರೂ. ಮೌಲ್ಯದ oxygen concetratore machine ನೀಡಿದ್ದಾರೆ.

ಅಂದಹಾಗೆ, ಅಮೇರಿಕದಲ್ಲಿ ವಾಸವಾಗಿರೋ
ಯೊಂಗಚೆನ್ ಕುಟುಂಬ ಹಾಗೂ ಲೋಬ್ಚಾಂಗ್ ಚೋದೇನ್ ಕುಟುಂಬ ಕರ್ಮಾ ಪೌಂಡೇಶನ್ ಗೆ ಈ ವೈದ್ಯಕೀಯ ಸಲಕರಣೆಗಳನ್ನು ದೇಣಿಗೆ ನೀಡಿತ್ತು, ಹೀಗಾಗಿ ಕರ್ಮಾ ಪೌಂಡೇಶನ್ ತಾಲೂಕಾಸ್ಪತ್ರೆಗೆ ಹಾಗೂ ಡಿಟಿಆರ್ ಆಸ್ಪತ್ರೆಗೆ ಹಸ್ತಾಂತರಿಸಿದೆ

error: Content is protected !!