Home Publicfirstnewz

Tag: Publicfirstnewz

Post
ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

ಮಳಗಿಯಲ್ಲಿ ಪಿಕ್ ನಿಕ್ ಗೆ ಹೊರಟಿದ್ದ ಟ್ರಾಕ್ಟರ್ ಪಲ್ಟಿ, 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಗಾಯ..!

 ಮುಂಡಗೋಡ ತಾಲೂಕಿನ ಮಳಗಿಯಲ್ಲಿ ವಿದ್ಯಾರ್ಥಿಗಳನ್ನು ಪಿಕ್ ನಿಕ್ ಗೆ ಕರೆದೊಯ್ಯುತ್ತಿದ್ದ ಟ್ರಾಕ್ಟರ್ ಪಲ್ಟಿಯಾಗಿದೆ‌. ಪರಿಣಾಮ ಟ್ರಾಕ್ಟರಿನಲ್ಲಿದ್ದ ಸುಮಾರು 40-45 ವಿದ್ಯಾರ್ಥಿನಿಯರಿಗೆ ಗಾಯವಾಗಿದೆ. ಅದ್ರಲ್ಲಿ, ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಪಿಕ್ ನಿಕ್ ಗೆ ಹೊರಟಿದ್ದರು..! ಇಂದು ಮಳಗಿಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಟ್ರಾಕ್ಟರ್ ಮೂಲಕ ಪಿಕ್ ನಿಕ್ ಗೆ ಅಂತಾ ಮಳಗಿಯಿಂದ ಕೊಳಗಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಪಿಕ್ ನಿಕ್ ಮುಗಿಸಿಕೊಂಡು ವಾಪಸ್ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ ಎನ್ನಲಾಗಿದೆ....

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಸಿದ್ದೇಶ್ವರ ಶ್ರೀಗಳ ಚೇತರಿಕೆಗೆ ನಾಡಿನೆಲ್ಲೆಡೆ ಪ್ರಾರ್ಥನೆ, ನಡೆದಾಡುವ ದೇವರ ಕಾಣದೇ ಭಕ್ತರಲ್ಲಿ ಹೆಚ್ಚಿದ ಆತಂಕ..!

ಸಿದ್ದೇಶ್ವರ ಶ್ರೀಗಳ ಚೇತರಿಕೆಗೆ ನಾಡಿನೆಲ್ಲೆಡೆ ಪ್ರಾರ್ಥನೆ, ನಡೆದಾಡುವ ದೇವರ ಕಾಣದೇ ಭಕ್ತರಲ್ಲಿ ಹೆಚ್ಚಿದ ಆತಂಕ..!

ವಿಜಯಪುರ: ನಡೆದಾಡುವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಚೇತರಿಕೆಗಾಗಿ ನಾಡಿನೆಲ್ಲಡೆ ಪ್ರಾರ್ಥನೆ ಶುರುವಾಗಿದೆ. ಜೀವಂತ ದೇವರು, ಜ್ಞಾನಯೋಗಿ ಸಿದ್ಧೇಶ್ವರ ಸ್ವಾಮೀಜಿಗಳು ಕೋಟಿ ಕೋಟಿ ಭಕ್ತರನ್ನು ಹೊಂದಿದ್ದಾರೆ. ಹೀಗಾಗಿ ಆಶ್ರಮದ ಸುತ್ತಲೂ ಬೆಳಗಿನಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಸ್ವಾಮೀಜಿಗಳ ದರ್ಶನಕ್ಕಾಗಿ ಕಾದು ಕುಳಿತಿರುವ ಭಕ್ತಗಣ ಒಂದೆಡೆಯಾದ್ರೆ ಮತ್ತೊಂದೆಡೆ ಶ್ರೀಗಳು ಗುಣವಾಗಲಿ ಎಂದು ಎಲ್ಲೆಂದರಲ್ಲಿ ಪ್ರಾರ್ಥನೆಗಳನ್ನು ಭಕ್ತರು ಮಾಡುತ್ತಿದ್ದಾರೆ. ಭಗವಂತನೇ ನಮ್ಮ ದೇವರನ್ನು ಕಾಪಾಡು..! ಸಾಮೂಹಿಕ ಪ್ರಾರ್ಥನೆ, ಆಶ್ರಮದಲ್ಲಿ ವಿಶೇಷ ಪೂಜೆ..! ಹೌದು ಇಂತಹದ್ದೊಂದು ಆತಂಕಕಾರಿ ವಿಚಾರ ಇದೀಗ ಭಕ್ತರಲ್ಲಿ...

Post
ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ‌. ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ...

Post
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ವರ್ಗಾವಣೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಮುಂಡಗೋಡ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಬಸವರಾಜ್, ರಾಮನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅಂದಹಾಗೆ, ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಎಲ್ಲಾಲಿಂಗ ಸಾಹೆಬ್ರು ಜಾಯಿನ್ ಆಗಿದ್ದಾರೆ. ಅಸಲು ಬಸವರಾಜ್ ಮಬನೂರು, ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ನಿಷ್ಟೆಯ ಕಾರ್ಯ ನಿರ್ವಹಿಸಿದ್ದರು. ಕೊರೋನಾ ಲಾಕಡೌನ್ ಸಂದರ್ಭದಲ್ಲಿ ತಾಲೂಕಿನಲ್ಲಿ ಯುವ ಪಡೆಯೊಂದಿಗೆ ಕೈ ಜೋಡಿಸಿ, ಹಲವು ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿದ್ದರು.  

Post
ಸಿಎಂ ತವರು ನೆಲದಲ್ಲಿ ಕಂದಾಯ ಮಂತ್ರಿ, ಆರ್.ಅಶೋಕ್ ಗ್ರಾಮ ವಾಸ್ತವ್ಯ..!

ಸಿಎಂ ತವರು ನೆಲದಲ್ಲಿ ಕಂದಾಯ ಮಂತ್ರಿ, ಆರ್.ಅಶೋಕ್ ಗ್ರಾಮ ವಾಸ್ತವ್ಯ..!

ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರುಗಳ ಬಗೆ ಬಗೆಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕಂದಾಯ ಸಚಿವ ಆರ್‌.ಅಶೋಕ್ ಇಂದು ಗ್ರಾಮ ವಾಸ್ತವ್ಯಕ್ಕಾಗಿ ಬಂದಿಳಿದಿದ್ದಾರೆ. ಹೌದು, ಹಾವೇರಿ ಜಿಲ್ಲಿಯ ಶಿಗ್ಗಾವಿ ತಾಲುಕಿನ ಬಾಡ ಗ್ರಾಮದಲ್ಲಿ ಇಂದು ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ. ಕನಕದಾಸರ ಕರ್ಮಭೂಮಿ ಬಾಡದಲ್ಲಿ ನಡೆಯುಲಿರೋ ಕಾರ್ಯಕ್ರಮಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ‌. ಅಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು...

Post
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

 ಮುಂಡಗೋಡ: ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮುಂಡಗೋಡಿನಲ್ಲಿ ‌ಮೊದಲ ಮಾತು ಆಡಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರು ಬಂದ ನಂತ್ರ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದ್ದೇವೆ ಅಂತಾ ಆರೋಪಿಸಿದ್ದಾರೆ. ತಮ್ಮ‌ಮಾತಿನುದ್ದಕ್ಕೂ ಸಚಿವರ ವಿರುದ್ಧ ಪರೋಕ್ಷವಾಗೇ ವಾಗ್ದಾಳಿ ನಡೆಸಿದ್ದಾರೆ. ಮನೆ ಹಂಚಲೂ ಸಚಿವರೇ ಬೇಕು..! ಕ್ಷೇತ್ರದಲ್ಲಿ ಈ ಮೊದಲು ಕಾರ್ಯಕರ್ತರೇ ನಾಯಕರಾಗಿರುತ್ತಿದ್ದರು. ಆದ್ರೆ ಈಗ ಗ್ರಾಮ ಪಂಚಾಯತಿ ಸದಸ್ಯರ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ತಮ್ಮ ವಾರ್ಡಿನಲ್ಲಿನ ಅರ್ಹ ಫಲಾನುಭವಿಗಳನ್ನು ಹುಡುಕಿ ಮನೆ ಹಂಚುವ ಹಕ್ಕೂ ಗ್ರಾಪಂ ಸದಸ್ಯರಿಗೆ ಉಳಿದಿಲ್ಲ....

Post
ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

  ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ರು. ಹೀಗಾಗಿ, ಬಸ್ ನಿಲ್ದಾಣದಲ್ಲೇ ಬಸ್ ಗಳು ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್ಸೇ ಇಲ್ಲ..! ಅಂದಹಾಗೆ, ಇದು ಇವತ್ತಿನ ಸಮಸ್ಯೆ ಅಷ್ಟೇ ಅಲ್ಲ‌. ಮುಂಡಗೋಡ ಬಸ್ ನಿಲ್ದಾಣದಲ್ಲಿ ನಿತ್ಯವೂ ಇದೇ ಗೋಳು. ಶಾಲಾ,ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಪರಿಪಾಟಲು ಅಂತೂ ಹೇಳತೀರದ್ದು. ಹೀಗಾಗಿ, ಅದೇಷ್ಟೇ ಬಾರಿ...

Post
ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ನ್ಯಾಸರ್ಗಿಯಲ್ಲಿ ಅನಾಮಿಕ ಅಭಿಮಾನಿಯಿಂದ ಅಯ್ಯಪ್ಪನಿಗೆ ಚೀಟಿ..!

ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ನ್ಯಾಸರ್ಗಿಯಲ್ಲಿ ಅನಾಮಿಕ ಅಭಿಮಾನಿಯಿಂದ ಅಯ್ಯಪ್ಪನಿಗೆ ಚೀಟಿ..!

ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದ್ರೊಂದಿಗೆ, ಬರುವ ವಿದಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಲ್ಲಿ ಭರ್ಜರಿ ಕಾದಾಟ ಪಕ್ಕಾ ಎನ್ನುವಂತಾಗಿದೆ. ಅದ್ರ ಜೊತೆ ಇಂದು ತಾಲೂಕಿನ ನ್ಯಾಸರ್ಗಿಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ಅನಾಮಿಕ ಅಭಿಮಾನಿಯೊಬ್ಬರು, ಪಾಟೀಲರ ಹೆಸರಲ್ಲಿ ಅರ್ಚನೆ ಮಾಡಿಸುವಂತೆ ಚೀಟಿ ಬರೆದಿಟ್ಟು ಹೋಗಿದ್ದಾರೆ‌. ಗುರುವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ನ್ಯಾಸರ್ಗಿಯ ಅಯ್ಯಪ್ಪ ಸ್ವಾಮಿಯ...

Post
ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬೆಂಗಳೂರು; ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ‌. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದಹಾಗೆ ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದ ವಿ.ಎಸ್.ಪಾಟೀಲರು, ಬಿಜೆಪಿ ತೊರದಿದ್ದರು. ಆದ್ರೆ, ಕಾಂಗ್ರೆಸ್ ಸೇರುವ ದಿನಾಂಕ‌ ಮಾತ್ರ ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಡೊಲಾಯಮಾನ ಅನ್ನುವಂತಾಗಿತ್ತು. ಸದ್ಯ ಕಾಂಗ್ರೆಸ್ ಗೆ ಅಧಿಕೃತವಾಗಿಬಸೇರ್ಪಡೆಗೊಂಡಿರೋ ವಿ.ಎಸ್.ಪಾಟೀಲರು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ...

error: Content is protected !!