ಹಾವೇರಿ: ಜಿಲ್ಲೆಯ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರುಗಳ ಬಗೆ ಬಗೆಯ ಕಾರ್ಯಕ್ರಮಗಳು ಜಾರಿಯಲ್ಲಿವೆ. ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಇಂದು ಗ್ರಾಮ ವಾಸ್ತವ್ಯಕ್ಕಾಗಿ ಬಂದಿಳಿದಿದ್ದಾರೆ.
ಹೌದು, ಹಾವೇರಿ ಜಿಲ್ಲಿಯ ಶಿಗ್ಗಾವಿ ತಾಲುಕಿನ ಬಾಡ ಗ್ರಾಮದಲ್ಲಿ ಇಂದು ಕಂದಾಯ ಸಚಿವ ಆರ್.ಅಶೋಕ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ. ಕನಕದಾಸರ ಕರ್ಮಭೂಮಿ ಬಾಡದಲ್ಲಿ ನಡೆಯುಲಿರೋ ಕಾರ್ಯಕ್ರಮಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಲ್ಲದೇ ಸಿಎಂ ಬಸವರಾಜ್ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಕಾರ್ಯಕ್ರಮ ರಂಗು ಪಡೆದುಕೊಂಡಿದೆ. ಈ ಕಾರಣಕ್ಕಾಗಿಯೇ ಶಿಗ್ಗಾವಿಯ ಬಾಡ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಬಂದಿಳಿದಿದ್ರು. ಬಾಡ ಗ್ರಾಮಸ್ಥರು ಸಚಿವರನ್ನು ಪೂರ್ಣ ಕುಂಬದೊಂದಿಗೆ ಸ್ವಾಗತ ಕೋರಿದ್ರು. ನಂತರ ಕನಕದಾಸರ ಮೂರ್ತಿಗೆ ಹಾರ ಹಾಕಿ ಮಾಲಾರ್ಪಣೆ ಮಾಡಿದ ಆರ್ ಅಶೋಕ, ಗ್ರಾಮಸ್ಥರ ಕುಶಲೋಪರಿ ವಿಚಾರಿಸಿದ್ರು.
ಇನ್ನು ಬಾಡ ಗ್ರಾಮದಲ್ಲಿ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ, ಇದು 12 ನೇ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಇಂದು ಎಲ್ಲಾ ಇಲಾಖೆಯ ಅಧಿಕಾರಿಗಳು ಬಾಡ ಗ್ರಾಮದಲ್ಲಿ ಇದ್ದಾರೆ.
ಸಿಎಂ ತವರಲ್ಲೆ 28 ಸಾವಿರ ಜನಕ್ಕೆ ವಿವಿಧ ಯೋಜನೆಗಳಿಗೆ ಪ್ರಮಾಣ ಪತ್ರ ನೀಡುತ್ತಿದ್ದೇವೆ. 24 ಗಂಟೆಗಳ ಕಾಲ ನಾನು ಗ್ರಾಮ ವಾಸ್ತವ್ಯ ಮಾಡ್ತಾ ಇದ್ದಿನಿ.
ಕರ್ನಾಟಕದಲ್ಲಿ ಗ್ರಾಮ ವಾಸ್ತವ್ಯ ಜನಪ್ರೀಯ ಕಾರ್ಯಕ್ರಮ ಆಗಿದೆ. ಇದು ಜನರಿಗೆ ತಲುಪಿಸುವ ಕಾರ್ಯಕ್ರಮ ಆಗಿದೆ. ಆ ಸ್ಥಳದಲ್ಲೆ ಜನರಿಗೆ ಯೋಜನೆಯನ್ನು ನೀಡುವಂತಾಗಿದೆ. ಕರ್ನಾಟಕದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡ್ತಾ ಇದ್ದಾರೆ.ಸಿಎಂ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಇಂದು ನಡಿತಾ ಇದೆ. ಈ ಕಾರ್ಯಕ್ರಮ ಜನರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಸೇತುವೆ ಆಗಬೇಕು, ಅಧಿಕಾರಿಗಳು ಆಪೀಸ್ ನಲ್ಲಿ ಕೂರದೆ ಗ್ರಾಮಕ್ಕೆ ಬಂದಾಗ ಸಮಸ್ಯೆಗೆ ಪರಿಹಾರವಾಗುತ್ತದೆ. ಈ ಉದ್ದೇಶಕ್ಕಾಗಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇವೆ ಅಂತಾ ಕಂದಾಯ ಸಚಿವ್ರು ಹೇಳಿದ್ರು.
ಒಟ್ನಲ್ಲಿ ಸಿಎಂ ತವರು ಕ್ಷೇತ್ರದಲ್ಲಿ ಇಂದು ಗ್ರಾಮ ವಾಸ್ಯವ್ಯದ ಕಾರ್ಯಕ್ರಮ ನಡೆಯುತ್ತಿದ್ದು, ಜಿಲ್ಲೆಯ ಬಹುತೇಕ ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಈ ಮೂಲಕವಾದ್ರೂ ಕ್ಷೇತ್ರದ ಜನರ ಕಷ್ಟ ಪರಿಹಾರವಾಗತ್ತಾ ಕಾಯಬೇಕಿದೆ.