Home uttara kannada news

Tag: uttara kannada news

Post
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ವರ್ಗಾವಣೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಮುಂಡಗೋಡ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಬಸವರಾಜ್, ರಾಮನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅಂದಹಾಗೆ, ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಎಲ್ಲಾಲಿಂಗ ಸಾಹೆಬ್ರು ಜಾಯಿನ್ ಆಗಿದ್ದಾರೆ. ಅಸಲು ಬಸವರಾಜ್ ಮಬನೂರು, ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ನಿಷ್ಟೆಯ ಕಾರ್ಯ ನಿರ್ವಹಿಸಿದ್ದರು. ಕೊರೋನಾ ಲಾಕಡೌನ್ ಸಂದರ್ಭದಲ್ಲಿ ತಾಲೂಕಿನಲ್ಲಿ ಯುವ ಪಡೆಯೊಂದಿಗೆ ಕೈ ಜೋಡಿಸಿ, ಹಲವು ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿದ್ದರು.  

Post
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

 ಮುಂಡಗೋಡ: ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮುಂಡಗೋಡಿನಲ್ಲಿ ‌ಮೊದಲ ಮಾತು ಆಡಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರು ಬಂದ ನಂತ್ರ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದ್ದೇವೆ ಅಂತಾ ಆರೋಪಿಸಿದ್ದಾರೆ. ತಮ್ಮ‌ಮಾತಿನುದ್ದಕ್ಕೂ ಸಚಿವರ ವಿರುದ್ಧ ಪರೋಕ್ಷವಾಗೇ ವಾಗ್ದಾಳಿ ನಡೆಸಿದ್ದಾರೆ. ಮನೆ ಹಂಚಲೂ ಸಚಿವರೇ ಬೇಕು..! ಕ್ಷೇತ್ರದಲ್ಲಿ ಈ ಮೊದಲು ಕಾರ್ಯಕರ್ತರೇ ನಾಯಕರಾಗಿರುತ್ತಿದ್ದರು. ಆದ್ರೆ ಈಗ ಗ್ರಾಮ ಪಂಚಾಯತಿ ಸದಸ್ಯರ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ತಮ್ಮ ವಾರ್ಡಿನಲ್ಲಿನ ಅರ್ಹ ಫಲಾನುಭವಿಗಳನ್ನು ಹುಡುಕಿ ಮನೆ ಹಂಚುವ ಹಕ್ಕೂ ಗ್ರಾಪಂ ಸದಸ್ಯರಿಗೆ ಉಳಿದಿಲ್ಲ....

Post
ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

 ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಮತ್ತೆ ಜೀವ ಬಂದಂತಾಗಿದೆ. ಬಿಜೆಪಿಯ ಎರಡೇರಡು ಪ್ರಭಾವಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕೈ ಹಿಡಿದಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಗೊಂಡು ಇವತ್ತು ಮೊದಲ ಬಾರಿಗೆ ಮುಂಡಗೋಡಿಗೆ ಬಂದಿಳಿದಿದ್ದಾರೆ. ಹೀಗಾಗಿ, ಮುಂಡಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಕೇಸರಿ ಧ್ವಜ, ಕೇಸರಿ ಶಾಲು..! ಅಂದಹಾಗೆ, ಪಟ್ಟಣದ ಶಿವಾಜಿ ಸರ್ಕಲ್ ಗೆ ವಿ.ಎಸ್.ಪಾಟೀಲ್ ಬಂದಿಳಿದರು. ಈ...

Post
ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಬಾಚಣಕಿ ಡ್ಯಾಂನಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವ ಯಾರದ್ದು ಗೊತ್ತಾ..? ಸಾವಿನ ಸುತ್ತ ಮತ್ತದೇ ಅನುಮಾನದ ಹುತ್ತ..?

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ‌. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಮುಂಡಗೋಡ ಪೊಲೀಸರಿಗೆ ಮಹಿಳೆಯ ಡೀಟೇಲ್ಸ್ ಲಭ್ಯವಾಗಿದೆ. ಅಂದಹಾಗೆ, ಮೃತ ಮಹಿಳೆಯ ಹೆಸ್ರು ಸುರೇಖಾ ದೇವೇಂದ್ರ ಕಲಾಲ್, ವಯಸ್ಸು ಅಜಮಾಸು 50 ವರ್ಷವಂತೆ, ಹುಬ್ಬಳ್ಳಿಯ ಆನಂದ ನಗರ ನಿವಾಸಿಯಂತೆ. ಇದು ಫಸ್ಟ್ ಇನ್ಫರ್ಮೇಶನ್ ರಿಪೋರ್ಟ್..! ಐದು ದಿನದ ಹಿಂದೆ..! ಅಸಲು, ಡಿಸೆಂಬರ್ 2 ನೇ ತಾರೀಖಿನ ದಿನವೇ ಈ ಮಹಿಳೆ ನಾಪತ್ತೆಯಾಗಿದ್ದಾಳೆ. ಹೀಗಾಗಿ, ಹುಬ್ಬಳ್ಳಿಯಲ್ಲಿ ಮಿಸ್ಸಿಂಗ್...

Post
ಯಲ್ಲಾಪುರದ ಅರಬೈಲು ಘಾಟಿನಲ್ಲಿ ನಡೆದಿದ್ದ ಭಯಾನಕ “ರಾಬರಿ” ಹಿಂದೆ ಕೇರಳದ ಕ್ರಿಮಿಗಳು, ಅಷ್ಟಕ್ಕೂ, ಸವಾಲಾಗಿದ್ದ ಕೇಸು ಬೇಧಿಸಿದ್ದು ಹೇಗೆ ಗೊತ್ತಾ..?

ಯಲ್ಲಾಪುರದ ಅರಬೈಲು ಘಾಟಿನಲ್ಲಿ ನಡೆದಿದ್ದ ಭಯಾನಕ “ರಾಬರಿ” ಹಿಂದೆ ಕೇರಳದ ಕ್ರಿಮಿಗಳು, ಅಷ್ಟಕ್ಕೂ, ಸವಾಲಾಗಿದ್ದ ಕೇಸು ಬೇಧಿಸಿದ್ದು ಹೇಗೆ ಗೊತ್ತಾ..?

ಯಲ್ಲಾಪುರ ಪೊಲೀಸರು ಕಡೆಗೂ ತಮ್ಮ ಜಿದ್ದು ಸಾಧಿಸಿದ್ದಾರೆ. ಅರಬೈಲು ಘಟ್ಟದಲ್ಲಿ ಕೋಟಿ ಕೋಟಿ ಹಣ ರಾಬರಿ ಮಾಡಿದ್ದ ಖತರ್ನಾಕ ನಟೋರಿಯಸ್ ಗ್ಯಾಂಗ್ ಪತ್ತೆ ಹಚ್ಚಿದ್ದಾರೆ. ಇದಕ್ಕಾಗಿ ಬರೋಬ್ಬರಿ ಒಂದು ತಿಂಗಳು,ಇಪ್ಪತ್ತು ದಿನಗಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ‌. ಥೇಟು ಸಿನಿಮಾ ಸ್ಟೈಲಿನಲ್ಲೇ ನಡೆದಿದ್ಧ ಭಯಾನಕ ರಾಬರಿಯನ್ನು ಅಂತದ್ದೇ ಸಿನಿಮಿಯ ರೀತಿಯಲ್ಲೇ ಟ್ರೇಸ್ ಮಾಡಿದ್ದಾರೆ ನಮ್ಮ‌ ಪೊಲೀಸ್ರು.. ಅಂದಹಾಗೆ, ದರೋಡೆ ನಡೆದ ದಿನವೇ ಪಬ್ಲಿಕ್ ಫಸ್ಟ್ ನ್ಯೂಸ್ ಘಟನೆಯ ಸಂಪೂರ್ಣ ಹಕೀಕತ್ತು ತಮ್ಮ‌ಮುಂದೆ ಇಟ್ಟಿತ್ತು. ಅವತ್ತು ಅಕ್ಟೋಬರ್ 1… ನಿಮಗೆ...

Post
ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು. ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ, ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ...

Post
ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ಸನವಳ್ಳಿ ಬಾಲಕರ ಭವಿಷ್ಯಕ್ಕೆ ಬೆಳಕಾದ ಸಚಿವ್ರು..! ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ ಅಲ್ವಾ..? ಸಲಾಂ ಸಾಹೇಬ್ರೇ..!

ನಿಜ ಹೆಬ್ಬಾರ್ ಅಂದ್ರೆ ಇಷ್ಟವಾಗೋದು ಇದೇ ಕಾರಣಕ್ಕೆ. ರಾಜಕೀಯವಾಗಿ ಅದೇನೋ ನಂಗೆ ಗೊತ್ತಿಲ್ಲ. ಆದ್ರೆ ಮಾನವೀಯ ಮೌಲ್ಯಗಳ ವಿಷಯಕ್ಕೆ ಬಂದ್ರೆ ಬಹುಶಃ ಕ್ಷೇತ್ರದಲ್ಲಿ ಮನೆ ಮನೆಗೂ ಶಿವರಾಂ ಹೆಬ್ಬಾರ್ ರವರ ಆಸರೆಯ ಅರಿವು ಇದೆ. ಮನೆ ಮನೆಯಲ್ಲೂ ಸಾಂತ್ವನದ ಕಿರಿಬೆರಳಿನ ಆಸರೆಗಳಿವೆ. ಇವತ್ತೂ ಕೂಡ ಅದೇ ಶಿವರಾಂ ಹೆಬ್ಬಾರ್ ನೊಂದಿದ್ದ ಒಂದಿಡೀ ಕುಟುಂಬಕ್ಕೆ ಕಿರಿಬೆರಳಿನ ಆಸರೆ ನೀಡಿದ್ದಾರೆ‌. ಬಡಬಾಲಕರ ಭವಿಷ್ಯತ್ತಿಗೆ ಬೆಳಕಾಗಿದ್ದಾರೆ. ಅಸಲು, ನಿನ್ನೆ ಮಂಗಳವಾರ ಪಬ್ಲಿಕ್ ಫಸ್ಟ್ ನ್ಯೂಸ್ ಬಡ ಬಾಲಕರ ಕುರಿತು ವಿಸ್ತೃತ ವರದಿ...

Post
ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!

ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!

ಇದು ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ ಅಂತಲೇ ಹೇಳಲಾಗ್ತಿದೆ. ಅದ್ರಲ್ಲೂ ನಮ್ಮ ರಕ್ಷಣೆಗಾಗಿ ಹಗಲಿರುಳು ರಜೆಯಿಲ್ಲದೇ ದುಡಿಯೋ ಪೊಲೀಸರಿಗೆ ಸರ್ಕಾರದ ಅದೊಂದು ಕಾನೂನು ಇಡಿ ಇಡಿಯಾಗಿ ನೋವು ಮತ್ತು ಆತಂಕಕ್ಕೆ ದೂಡಿದೆ ಅಂತಾ ಖುದ್ದು ಪೊಲೀಸ್ ಇಲಾಖೆಯ ಅಸಂಖ್ಯ ಪೇದೆಗಳು ಅಲವತ್ತುಕೊಂಡಿದ್ದಾರೆ. ರಾಜ್ಯ ಸರ್ಕಾರ ಸದ್ಯ 16 A ಕಾಲಂ ನ್ನು ತಿದ್ದುಪಡಿ ಮಾಡಿರೋದು ಸಾಕಷ್ಟು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ. ಏನದು ತಿದ್ದುಪಡಿ..? ಈ ಹಿಂದೆ 16A ಕಾಲಂ ಅಡಿಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಬಲಿಷ್ಟ ಕಾನೂನು...

Post
ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!

ಬಡ ಮಕ್ಕಳ ಗೋಳಿಗೆ ಸ್ಪಂಧಿಸಿದ್ರು ಸಿಡಿಪಿಓ ದೀಪಕ್ಕ, ಕಾರ್ಮಿಕರ ಮಕ್ಕಳಿಗೆ ದೊರೆಯಿತು ಆಸರೆ..!

ಮುಂಡಗೋಡ ತಾಲೂಕಿನ ಹುನಗುಂದ ಭಾಗದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ಬಡ ಕಾರ್ಮಿಕರ ಮಕ್ಕಳಿಗೆ ಅಂತೂ ಇಂತೂ ಆಸರೆ ಸಿಕ್ಕಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ವರದಿ ಪ್ರಸಾರ ಆಗ್ತಿದ್ದಂತೆ ಸಿಡಿಪಿಓ ದೀಪಾ ಬಂಗೇರ್ ಮೇಡಮ್ಮು ಹುನಗುಂದಕ್ಕೆ ಧಾವಿಸಿ ಬಂದಿದ್ದಾರೆ. ಬಡಮಕ್ಕಳ ಗೋಳು ಕಣ್ಣಾರೆ ಕಂಡಿದ್ದಾರೆ. ಮಮ್ಮಲ ಮರುಗಿದ್ದಾರೆ. ಇಲಾಖೆಯಿಂದ ಅದೇನೇನು ಸೌಲಭ್ಯ ಇದೆಯೋ ಅದನ್ನೇಲ್ಲ ಯಥಾವತ್ತಾಗಿ ಪೂರೈಸಲು ಕ್ರಮ ಕೈಗೊಂಡಿದ್ದಾರೆ. ಹೀಗಾಗಿ, ಪುಟ್ಟ ಕಂದಮ್ಮಗಳ ಮುಖದಲ್ಲಿ ಈಗ ಮಂದಹಾಸ ಮೂಡಿದೆ. ಹೀಗಾಗಿ, ದೀಪಕ್ಕನ ಕರ್ತವ್ಯಪರತೆಗೆ ಧನ್ಯವಾದ ಹೇಳಲೇಬೇಕಿದೆ....

Post
ಈ ಮಕ್ಕಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾ..? ಮಕ್ಕಳ ಕಲ್ಯಾಣದ ಹೊಣೆ ಹೊತ್ತ ಅಧಿಕಾರಿಗಳೇ ಗಮನಿಸಿ, ಒಣಗುತ್ತಿವೆ ಕಂದಮ್ಮಗಳು..!

ಈ ಮಕ್ಕಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾ..? ಮಕ್ಕಳ ಕಲ್ಯಾಣದ ಹೊಣೆ ಹೊತ್ತ ಅಧಿಕಾರಿಗಳೇ ಗಮನಿಸಿ, ಒಣಗುತ್ತಿವೆ ಕಂದಮ್ಮಗಳು..!

ಮುಂಡಗೋಡ: ಸರ್ಕಾರ ಬಡ ಮಕ್ಕಳಿಗೆ ಅಂತಾ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲೂ ಹಳ್ಳಿಗಾಡಿನ ಕಂದಮ್ಮಗಳಿಗೆ ಯಾವುದೇ ಅಪೌಷ್ಟಿಕತೆ ಬರದೆ ಇರಲಿ ಅಂತಾ ಅಂಗನವಾಡಿಗಳ ಮೂಲಕ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಅಲ್ಲದೇ ವಲಸೆ ಬರುವ ಕುಟುಂಬಗಳ ಮಕ್ಕಳಿಗಾಗೇ ಆಯಾ ವ್ಯಾಪ್ತಿಯ ಅಂಗನವಾಡಿಗಳ ಮೂಲಕ ವಿಶೇಷ ಕಾಳಜಿಗಳನ್ನೂ ವ್ಯವಸ್ಥೆ ಮಾಡಿದೆ. ಒಣಗುತ್ತಿವೆ ಕಂದಮ್ಮಗಳು..! ಆದ್ರೆ ಮುಂಡಗೋಡ ತಾಲೂಕಿನ ಅಧಿಕಾರಿಗಳಿಗೆ ಮಾತ್ರ ಇದೇಲ್ಲ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ತಾಲೂಕಿನಲ್ಲಿ ಸದ್ಯ ಕಬ್ಬು ಕಟಾವು ಮಾಡಲು ದೂರದ ಜಿಲ್ಲೆಗಳಿಂದ ಬಂದ ಆ...

error: Content is protected !!