ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಪತ್ತೆಯಾಗಿದ್ದ ಮಹಿಳೆಯ ಶವದ ಗುರುತು ಪತ್ತೆಯಾಗಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ಮುಂಡಗೋಡ ಪೊಲೀಸರಿಗೆ ಮಹಿಳೆಯ ಡೀಟೇಲ್ಸ್ ಲಭ್ಯವಾಗಿದೆ. ಅಂದಹಾಗೆ, ಮೃತ ಮಹಿಳೆಯ ಹೆಸ್ರು ಸುರೇಖಾ ದೇವೇಂದ್ರ ಕಲಾಲ್, ವಯಸ್ಸು ಅಜಮಾಸು 50 ವರ್ಷವಂತೆ, ಹುಬ್ಬಳ್ಳಿಯ ಆನಂದ ನಗರ ನಿವಾಸಿಯಂತೆ. ಇದು ಫಸ್ಟ್ ಇನ್ಫರ್ಮೇಶನ್ ರಿಪೋರ್ಟ್..!
ಐದು ದಿನದ ಹಿಂದೆ..!
ಅಸಲು, ಡಿಸೆಂಬರ್ 2 ನೇ ತಾರೀಖಿನ ದಿನವೇ ಈ ಮಹಿಳೆ ನಾಪತ್ತೆಯಾಗಿದ್ದಾಳೆ. ಹೀಗಾಗಿ, ಹುಬ್ಬಳ್ಳಿಯಲ್ಲಿ ಮಿಸ್ಸಿಂಗ್ ಕಂಪ್ಲೆಂಟ್ ದಾಖಲಾಗಿತ್ತಂತೆ. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ರೂ ಪತ್ತೆಯಾಗಿರಲಿಲ್ಲವಂತೆ. ಹೀಗಾಗಿ, ಇವತ್ತು ಪಬ್ಲಿಕ್ ಫಸ್ಟ್ ನಲ್ಲಿ ಸುದ್ದಿ ಪ್ರಸಾರ ಆಗ್ತಿದ್ದಂತೆ ವಿಷಯ ತಿಳಿದ ಮೃತ ಸುರೇಖಾ ಪತಿ ದೇವೇಂದ್ರ ಕಲಾಲ್ ಸ್ಥಳಕ್ಕೆ ಆಗಮಿಸಿದ್ದಾರೆ.
ಅನಾರೋಗ್ಯವಾ..? ಅಥವಾ..?
ಇನ್ನು, ಮೃತ ಮಹಿಳೆ ಸುರೇಖಾಗೆ ಮೈತುಂಬ ಸಕ್ಕರೆ ಕಾಯಿಲೆ, ಬಿಪಿ, ಥೈರಾಯಿಡ್ ಸೇರಿ ಹಲವು ರೋಗಗಳಿಂದ ಬಳಲುತ್ತಿದ್ದಳಂತೆ. ಹೀಗಾಗಿ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಅಂತಾ ಕುಟುಂಬಸ್ಥರು ಅನುಮಾನಗೊಂಡಿದ್ದಾರೆ. ಆದ್ರೆ, ಮುಂಡಗೋಡ ಪೊಲೀಸರಿಗೆ ಸಾವಿನ ಬಗ್ಗೆ ಹಲವು ಪ್ರಶ್ನೆಗಳು ಸಹಜವಾಗೇ ಎದ್ದಿವೆ. ಹೀಗಾಗಿ ಸಂಶಯಾಸ್ಪದ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ ಎನ್ನಲಾಗಿದೆ.
ಅಷ್ಟಕ್ಕೂ ಹೇಗೆ ಸಾಧ್ಯ..?
ಒಮ್ಮೆ ಯೋಚಿಸಿ, ಆ ಮಹಿಳೆಗೆ ಈಗ ಎನಿಲ್ಲವೆಂದರೂ 50 ರ ಆಸುಪಾಸಿನ ವಯಸ್ಸು. ಜೊತೆ ಜೊತೆಗೆ ಮೈತುಂಬ ಕಾಯಿಲೆಗಳಿವೆ. ಹೀಗಿದ್ದಾಗಲೂ ಆ ಯಮ್ಮ ಹುಬ್ಬಳ್ಳಿಯ ಆನಂದನಗರದಿಂದ, ಬಾಚಣಕಿ ಜಲಾಶಯದ ನಿರ್ಜನ ಪ್ರದೇಶಕ್ಕೇ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ..? ಅಷ್ಟಕ್ಕೂ ಮೊದಲೇ ಅನಾರೋಗ್ಯದಿಂದ ಪೀಡಿತ ದೇಹ, ಮನಸ್ಥಿತಿಯಲ್ಲಿ ಬಾಚಣಕಿ ಜಲಾಶಯದವರೆಗೂ ಬಂದಿದ್ದಾದ್ರೂ ಹೇಗೆ..? ಅಸಲು, ಸಾಯಲೇ ಬೇಕು ಅಂತಾ ಬಂದಿದ್ದವಳು ಜೊತೆಯಲ್ಲಿ ಅಷ್ಟೇಲ್ಲ ಮಾತ್ರೆಗಳನ್ನು, ಮೆಡಿಸಿನ್ ಗಳನ್ನು ಹೊತ್ತು ತಂದಿದ್ದಾದ್ರೂ ಏಕೆ..? ಬಾಚಣಕಿ ಜಲಾಶಯಕ್ಕೆ ಹುಬ್ಬಳ್ಳಿಯಿಂದ ಹೇಗೆ ಬಂದ್ರು..? ಆತ್ಮಹತ್ಯೆ ಮಾಡಿಕೊಳ್ಳಲೇ ಬೇಕು ಅಂತಾ ನಿರ್ಧರಿಸಿದ್ದ ಮಹಿಳೆ ಹುಬ್ಬಳ್ಳಿಯಿಂದ ಬಾಚಣಕಿ ಜಲಾಶಯಕ್ಕೆ ಬರುವ ದರ್ದು ಏನಿತ್ತು..? ಇದೇಲ್ಲ ಪ್ರಶ್ನೆಗಳಿವೆ. ಸದ್ಯ ಮುಂಡಗೋಡಿನ ಪೊಲೀಸ್ರ ಕೈಯಲ್ಲಿ ಕೇಸಿನ ಡೀಟೇಲ್ಸ್ ಇದೆ. ತನಿಖೆ ಶುರುವಾಗಿದೆ. ಅದೇನೇ ಸತ್ಯ ಇದ್ರೂ ಇಷ್ಟರಲ್ಲೇ ಹೊರಬೀಳಲಿದೆ.