ಹಾನಗಲ್: ಬಸ್ ನಿಂದ ಆಯತಪ್ಪಿ ಬಿದ್ದು ವಿದ್ಯಾರ್ಥಿನಿಯೋರ್ವಳು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಹಾನಗಲ್ ತಾಲ್ಲೂಕಿನ ಕುಸನೂರು ಗ್ರಾಮದ ಬಳಿ ಘಟನೆ ನಡೆದಿದ್ದು ಪೋಷಕರ ಆಕ್ರಂಧನ ಮುಗಿಲು ಮುಟ್ಟಿದೆ. ಮಧು ಕುಂಬಾರ (14) ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಇಂದು ವಾಸನ ಗ್ರಾಮದಿಂದ ಕುಸನೂರು ಗ್ರಾಮಕ್ಕೆ ಪ್ರೌಢಶಾಲೆಗೆ ಆಗಮಿಸುತ್ತಿದ್ಲು, ಈ ವೇಳೆ ಬಸ್ ನಲ್ಲಿ ಜನ ತುಂಬಿದ್ದಾರೆಂದು ವಿದ್ಯಾರ್ಥಿನಿ ಬಸ್ ಬಾಗಿಲ ಬಳಿ ನಿಂತಿದ್ದಳು. ಆದ್ರೆ, ಬಸ್ ಟರ್ನ್ ಆಗುವಾಗ ಆಯ ತಪ್ಪಿ ಬಲವಾಗಿ ತಲೆ ಹಚ್ಚಿ ನೆಲಕ್ಕೆ...
Top Stories
Rain Alert News: ಭಾರಿ ಮಳೆಯ ಮುನ್ಸೂಚನೆ, ಉತ್ತರ ಕನ್ನಡದಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ: ಎಚ್ಚರಿಕೆ ವಹಿಸಿ; ಡಿಸಿ ಲಕ್ಷ್ಮೀಪ್ರಿಯ
Death News: ವೈಜಿಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ದಾರುಣ ಸಾವು..!
ಬಂಗಾರದ ಬೆಲೆ ಮತ್ತೆ ₹380 ಹೆಚ್ಚಳ; ಬೆಳ್ಳಿ ₹1000 ತುಟ್ಟಿ, ಈ ದರ ಏರಿಕೆಗೆ ಕಾರಣಗಳೇನು ಗೊತ್ತಾ..?
ಸತತ 2ನೇ ದಿನ ಕುಸಿದ ಷೇರುಪೇಟೆ : ಸೆನ್ಸೆಕ್ಸ್ 270 ಪಾಯಿಂಟ್ಸ್ ಇಳಿಕೆ, ಟಾಪ್ ಗೇನರ್ ಮತ್ತು ಲೂಸರ್ಸ್ ಇಲ್ಲಿವೆ
Lokayukta Raid News :ಅಡ್ಮಿಶನ್ ಮಾಡಿಕೊಳ್ಳಲು ಲಂಚ ಸ್ವೀಕಾರ, ಸವಣೂರು ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕನ ಬಂಧನ..!
Accident News: ಕಾರ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ BJP ತಾಲೂಕಾ ಮಾಜಿ ಅಧ್ಯಕ್ಷ ಸೇರಿ ಮೂವರು ದುರಂತ ಸಾವು..!
FIRE MISHAP News: ಹೈದರಾಬಾದ್ ಬೆಂಕಿ ಅವಘಡ, ಒಂದೇ ಕುಟುಂಬದ 17 ಜನರ ಸಾವು..!
Terrorist Death News: ಬೆಂಗಳೂರಿನ IISC ಮೇಲಿನ ದಾಳಿ ರೂವಾರಿ, ಲಷ್ಕರ್-ಎ-ತೊಯ್ಬಾದ ಡೇಂಜರಸ್ ಉಗ್ರ ಸೈಫುಲ್ಲಾ ಖಾಲಿದ್ ಹತ್ಯೆ..!
Shashi Taroor News: ಉಗ್ರ ಮುಖವಾಡ ಬಯಲು ಟೀಂನಲ್ಲಿ ಶಶಿ ತರೂರ್ ಗೆ ಸ್ಥಾನ, ಬಿಜೆಪಿ- ಕಾಂಗ್ರೆಸ್ ನಡುವೆ ಭಾರೀ ತಿಕ್ಕಾಟ..!
Gold Rate Today: ರವಿವಾರವೂ ಚಿನ್ನ- ಬೆಳ್ಳಿ ಬೆಲೆಗಳು ಸ್ಥಿರ; ಪ್ರಸ್ತುತ ಬೆಂಗಳೂರಲ್ಲಿ ಗೋಲ್ಡ್ ರೇಟ್ ಎಷ್ಟಿದೆ?
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!
IPL T20 News: ಮಳೆರಾಯನ ಅರ್ಭಟಕ್ಕೆ ಕೊಚ್ಚಿ ಹೋಯ್ತು ಐಪಿಎಲ್ ಪುನಾರಂಭದ ಪಂದ್ಯ! RCB ಪ್ಲೇ ಆಫ್ಗೆ ಎಂಟ್ರಿ, ಟೂರ್ನಿಯಿಂದ ಹೊರಬಿದ್ದ ಹಾಲಿ ಚಾಂಪಿಯನ್ಸ್
‘ಮಸೂದೆಗೆ ಅಂಕಿತ ಹಾಕಲು ರಾಷ್ಟ್ರಪತಿ, ರಾಜ್ಯಪಾಲರಿಗೆ ಸುಪ್ರೀಂ ಕೋರ್ಟ್ ಗಡುವು ವಿಧಿಸಬಹುದೇ ? ಸುಪ್ರೀಂ ಕೋರ್ಟಿಗೆ ರಾಷ್ಟ್ರಪತಿ ಮುರ್ಮು 14 ಪ್ರಶ್ನೆ..!
ರಾಜ್ಯದ 200 ಪೊಲೀಸ್ರಿಗೆ “ಡಿಜಿ & ಐಜಿಪಿ ಪ್ರಶಂಸಾ ಡಿಸ್ಕ್ 2024-25” ಪುರಸ್ಕಾರ ಘೋಷಣೆ..!
ಸೇನೆ ಬರ್ಲಿ ನೋಡ್ಕೊಳ್ತೇನೆ; ಎನ್ಕೌಂಟರಿನಲ್ಲಿ ಸಾಯುವ ಸ್ವಲ್ಪ ಮೊದಲು ತಾಯಿ ಜೊತೆ ಭಯೋತ್ಪಾದಕ ವೀಡಿಯೊ ಕರೆಯಲ್ಲಿ ಮಾತನಾಡಿದ ದೃಶ್ಯ ವೈರಲ್..!
ಭಾರತೀಯ ಸಂಜಾತ ಲೇಖಕ ಸಲ್ಮಾನ್ ರಶ್ದಿ ಇರಿದ ವ್ಯಕ್ತಿಗೆ 25 ವರ್ಷ ಜೈಲು ಶಿಕ್ಷೆ..!
ಈಗ ಯೂ ಟರ್ನ್ ; ಪಾಕಿಸ್ತಾನ ಸೇನೆ ವಾಯುನೆಲೆಗಳ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪ್ರಧಾನಿ ಶೆಹಬಾಜ್ ಷರೀಫ್..!
Tag: crime news
ಮುಂಡಗೋಡ ಟಿಂಬರ್ ಡೀಪೋದಿಂದ ಕಟ್ಟಿಗೆ ಕಳ್ಳಾಟ ಕೇಸ್, ಸಿಕ್ಕಿಬಿದ್ದ ಲಾರಿಗಳ ಮಾಲೀಕರು, ಚಾಲಕರ ಕುಟುಂಬಸ್ಥರ ಆಕ್ರೋಶ..!
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಿಂದ ಕಟ್ಟಿಗೆ ಸಾಗಾಟ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಾಗಾಟದ ವೇಳೆ ಸಿಕ್ಕಿಬಿದ್ದಿರೋ ಎರಡೂ ಲಾರಿಗಳ ಮಾಲೀಕರು ಹಾಗೂ ಚಾಲಕರ ಕುಟುಂಬಸ್ಥರು ಇಲಾಖೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಕೇಸ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನಮ್ಮನ್ನ ಬಲಿ ಪಶು ಮಾಡಲಾಗಿದೆ ಅಂತಾ ಆಕ್ರೋಶ ಹೊರಹಾಕಿದ್ದಾರೆ. ಹೌದು, ರವಿವಾರ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿರೋ ಲಾರಿ...
ಮುಂಡಗೋಡ ಟಿಂಬರ್ ಡೀಪೋದಲ್ಲಿ ಕಟ್ಟಿಗೆ ಕಳ್ಳಾಟ ಕೇಸ್, RFO ಸೇರಿ ಆರು ಜನರಿಗೆ ಕಡ್ಡಾಯ ರಜೆ..! ಯಾರ್ಯಾರ ಮೇಲೆ “ತೂಗುಕತ್ತಿ” ಗೊತ್ತಾ..?
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿನ ಕಳ್ಳಾಟ ಅಕ್ಷರಶಃ ಇಡೀ ಇಲಾಖೆಯ ನಿದ್ದೆಗೆಡಿಸಿದೆ. ಇಲ್ಲಿ ಅಕ್ರಮಿಗಳು ಅಂದ್ರೆ ಅದು ಖುದ್ದು ಇಲಾಖೆಯ ಅನ್ನ ಉಂಡವರೇ ಅನ್ನೋದು ಒಂದೆಡೆಯಾದ್ರೆ, ಯೂನಿಫಾರ್ಮ್ ತೊಟ್ಟ ಕ್ರಿಮಿನಲ್ ಗಳೇ ಇಂತಹದ್ದೊಂದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಅಂತಾ ಬಹುಶಃ ಮೇಲ್ನೋಟಕ್ಕೆ ಕಂಡುಬಂದಿದೆ ಎನ್ನಲಾಗ್ತಿದೆ. ಹೀಗಾಗಿನೇ ಬರೋಬ್ಬರಿ ಆರು ಜನ ಅಧಿಕಾರಿಗಳಿಗೆ ಕಡ್ಡಾಯ ರಜೆ ನೀಡಿ ಕಳಿಸಿದ್ದಾರೆ ಡಿಎಫ ಓ ಸಾಹೇಬ್ರು.. ಆರು ಅಧಿಕಾರಿಗಳ ಮೇಲೆ ತೂಗುಕತ್ತಿ..! ಅಂದಹಾಗೆ, ಮುಂಡಗೋಡ ಸರ್ಕಾರಿ ಟಿಂಬರ್ ಡೀಪೋದಿಂದ ಶುಕ್ರವಾರ ರಾತ್ರಿ...
ಮುಂಡಗೋಡ ಅರಣ್ಯ ಇಲಾಖೆಯ ಟಿಂಬರ್ ಡೀಪೋದಲ್ಲಿ ಸರ್ಕಾರಿ ಕಳ್ಳರು..? ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ ಮಾಲು ಶಿರಸಿಯಲ್ಲಿ ವಶಕ್ಕೆ..! ಯಾರ ಪಾಲು ಎಷ್ಟೇಷ್ಟು..?
ಮುಂಡಗೋಡಿನ ಅರಣ್ಯ ಇಲಾಖೆಯಲ್ಲಿ ದಂಧೆಕೋರರ ಸಂಖ್ಯೆ ಮಿತಿ ಮೀರಿದೆಯಾ..? ಇಲ್ಲಿ ಅರಣ್ಯದ ಸಂಪತ್ತು ರಕ್ಷಣೆಗೆ ಅಂತಾ ನಿಯುಕ್ತಿಗೊಂಡಿರೋ ದೊಡ್ಡ ದೊಡ್ಡ ಹುದ್ದೆಯಲ್ಲಿರೋರೇ ಅಡ್ನಾಡಿ ದಂಧೆಗಿಳಿದ್ರಾ..? ಅಂತಹದ್ದೊಂದು ಅನುಮಾನ ಸದ್ಯ ಶುರುವಾಗಿದೆ. ಯಾಕಂದ್ರೆ ಮುಂಡಗೋಡಿನ ಸರ್ಕಾರಿ ಟಿಂಬರ್ ಡಿಪೋದಿಂದಲೇ ಲಕ್ಷ ಲಕ್ಷ ಬೆಲೆಬಾಳುವ ಅರಣ್ಯ ಸಂಪತ್ತು ಸಾಗಿಸಲು ಹೋಗಿ ಶಿರಸಿಯಲ್ಲಿ ತಗಲಾಕ್ಕೊಂಡಿದ್ದಾರೆ ಖದೀಮರು. ಮೂಲಗಳ ಪ್ರಕಾರ ಹಾಗೆ ಅಕ್ರಮವಾಗಿ ಸಾಗಿಸಲಾದ ಕಟ್ಟಿಗೆಯ ಕರಾಮತ್ತಿನ ಹಿಂದೆ ಅವನೊಬ್ಬ ದೊಡ್ಡ ಅಧಿಕಾರಿಯ “ರೇಂಜು” ಬಟಾ ಬಯಲಾಗುವ ಎಲ್ಲಾ ಸಾಧ್ಯತೆ...
ಜಿನ್ನೂರಿನಲ್ಲಿ ಹಸೆಮಣೆ ಏರಬೇಕಿದ್ದ ಯುವಕನ ಮರ್ಡರ್ ಕೇಸ್ ಗೆ ಟ್ವಿಸ್ಟ್: ಅನೈತಿಕ ಸಂಬಂಧವೇ ಕೊಲೆಗೆ ಕಾರಣ..!
ಕಲಘಟಗಿ: ಹಸೆಮಣೆ ಏರಬೇಕಿದ್ದ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಾವರಗೇರಿ ಯುವತಿಯೊಂದಿಗೆ ಇದೇ ಜೂನ್ 7 ಕ್ಕೆ ಹಸೆಮಣಿ ಏರಬೇಕಿದ್ದ ಯುವಕ ಬರ್ಬರವಾಗಿ ಹತ್ಯೆಯಾಗಿದ್ದರ ಹಿಂದೆ ಅನೈತಿಕ ಸಂಬಂಧದ ಕರಿನೆರಳಿದೆ. ಹಾಗಂತ ಪೊಲೀಸರ ತನಿಖೆಯಿಂದ ಬೆಚ್ಚಿ ಬೀಳಿಸುವ ಸಂಗತಿ ಹೊರಬಿದ್ದಿದೆ. ಹೌದು, ವಿವಾಹಿತ ಮಹಿಳೆ ಜೊತೆ ಯುವಕನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ತೋಟದ ಮನೆಯಲ್ಲಿ...
ಕಲಘಟಗಿಯಲ್ಲಿ ನೇಣು ಬಿಗಿದುಕೊಂಡು ಬಾಲ ಸಹೋದರಿಯರು ಆತ್ಮಹತ್ಯೆ..!
ಕಲಘಟಗಿ: ಮನೆಯಲ್ಲಿ ನೇಣು ಬಿಗಿದುಕೊಂಡು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಘಟಗಿಯಲ್ಲಿ ನಡೆದಿದೆ. ಕಾವೇರಿ ಹಡಪದ (17) ಭೂಮಿಕಾ ಹಡಪದ (19) ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರು. ಕಲಘಟಗಿಯ ಬೆಂಡಿಗೇರಿ ಓಣಿಯಲ್ಲಿರುವ ಬಾಡಿಗೆ ಮನೆಯಲ್ಲಿ ತಾಯಿ ಇಲ್ಲದ ವೇಳೆ ಸಹೋದರಿಯರು ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜೂನ್ 7 ರಂದು ಮದುವೆಯಾಗಬೇಕಿದ್ದ ಹುಡುಗ, ಜಿನ್ನೂರಿನ ತೋಟದ ಮನೆಯಲ್ಲಿ ಭೀಕರ ಹತ್ಯೆಯಾದ..!
ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ. ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆಗೈದು ಹೋಗಿದ್ದಾರೆ ದುಷ್ಕರ್ಮಿಗಳು. ಇನ್ನೇನು ಜೂ. 7 ರಂದು ಹಸೆಮಣೆ ಏರಲು ರೆಡಿಯಾಗಿದ್ದ ಯುವಕ ಸದ್ಯ ಹೆಣವಾಗಿ ಬಿದ್ದಿದ್ದಾನೆ. ಅಂದಹಾಗೆ, ಜಿನ್ನೂರಿನ ನಿಂಗಪ್ಪ ನವಲೂರ (28) ಕೊಲೆಯಾಗಿರುವ ಯುವಕನಾಗಿದ್ದು, ತೋಟದ ಮನೆಯಲ್ಲಿ ಮಲಗಿದ್ದ ವೇಳೆ ಮದ್ಯರಾತ್ರಿ ಬರ್ಬರವಾಗಿ ಹತ್ಯೆ ಮಾಡಿ ಹೋಗಿದ್ದಾರೆ ದುಷ್ಟರು. ಅಸಲು, ಇದೇ ಜೂನ್ 7 ರಂದು ಯುವಕನಿಗೆ ಮದುವೆ ಫಿಕ್ಸ್ ಆಗಿತ್ತು. ಕಲಘಟಗಿ ತಾಲೂಕಿನ...
ಸನವಳ್ಳಿ ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿದ ತಹಶೀಲ್ದಾರ್, ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ..!
ಮುಂಡಗೋಡಿನ ದಕ್ಷ, ಗಂಡೆದೆಯ ತಹಶೀಲ್ದಾರ್ ಶಂಕರ್ ಗೌಡಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಸಮರ ಸಾರಿರೋ ತಹಶೀಲ್ದಾರ್ ಇವತ್ತು ಅಕ್ರಮ ಇಟ್ಟಿಗೆ ಭಟ್ಟಿಗಳನ್ನು ತೆರವು ಕಾರ್ಯಾಚರಣೆ ನಡೆಸಿದ್ರು. ನೋಟೀಸ್ ನೀಡಿದ್ದರೂ..! ಅಸಲು, ಈ ಹಿಂದೆ ದಾಳಿ ಮಾಡಿದ್ದ ತಹಶೀಲ್ದಾರ್ ಸಾಹೇಬ್ರು ಅಕ್ರಮ ಇಟ್ಟಿಗೆ ಭಟ್ಟಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿ, ನೋಟೀಸ್ ಜಾರಿ ಮಾಡಿದ್ರು. ಆದ್ರೆ ಇಟ್ಟಿಗೆ ಭಟ್ಟಿ ನಡೆಸ್ತಿರೋ ಮಾಲೀಕರು ಕ್ಯಾರೇ ಅಂದಿರಲಿಲ್ಲ. ಹೀಗಾಗಿ, ಸಮಯಕ್ಕಾಗಿ ಕಾದಿದ್ದ ತಹಶೀಲ್ದಾರ್ ಇವತ್ತು ತಮ್ಮ...
ಮುಂಡಗೋಡ ಪೊಲೀಸರ ಭರ್ಜರಿ ಕಾರ್ಯಾಚರಣೆ, ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ..!
ಮುಂಡಗೋಡ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಅಂತರ್ ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಈ ಮೂಲಕ ಮುಂಡಗೋಡಿನಲ್ಲಿ ನಡೆದಿದ್ದ ಬೈಕ್ ಕಳ್ಳತನ ಪ್ರಕರಣ ಬೇಧಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ತಡಸ ಗ್ರಾಮದ ರಮೇಶ ಗಂಗಪ್ಪಾ ಮುಗಳಕಟ್ಟಿ(26) ಮಂಜುನಾಥ ಸುಬಾಸ ಸೋಮನಕೊಪ್ಪ (32) ಎಂಬುವ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಅಂದಹಾಗೆ, ಮುಂಡಗೋಡ ಪಟ್ಟಣದ ಕಲಾಲ್ ಓಣಿಯ ಪೀರಸಾಬ ಅಬ್ದುಲಖಾದರ ಬಂಗ್ಲೆವಾಲೆ ಎಂಬುವವರ ಎಲೆಕ್ಟ್ರಿಕಲ್ ಅಂಗಡಿ ಮುಂದೆ ನಿಲ್ಲಿಸಿದ್ದ, ಹೀರೋ ಸ್ಪ್ಲೆಂಡರ್ ಫ್ಲಸ್ ಬೈಕ್ ನ್ನು ದಿನಾಂಕ...
ಮುಂಡಗೋಡ ಬಂಕಾಪುರ ರಸ್ತೆಯಲ್ಲಿ ಬೈಕ್ ಸ್ಕಿಡ್, ಮದುವೆಗೆ ಹೋಗಿದ್ದ ಮೂವರು ಯುವಕರಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಬಂಕಾಪುರ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಬೈಕಗ ಅಪಘಾತವಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದು ಮೂವರು ಯುವಕರಿಗೆ ಗಂಭೀರ ಗಾಯವಾಗಿದೆ. ಮದುವೆಗೆಂದು ಹೊರಟಿದ್ದವರಿಗೆ ಆಘಾತವಾಗಿದೆ. ಗಾಯಗೊಂಡವರನ್ನು ಮುಂಡಗೋಡ ಪಟ್ಟಣದ ಇಂದಿರಾನಗರದ ಇಜಾಜ್, ಜಿಲಾನಿ, ಹಾಗೂ ಮಲ್ಲಿಕ್ ಅಂತಾ ಗುರುತಿಸಲಾಗಿದೆ. ಮೂವರಿಗೂ ಗಂಭೀರ ಗಾಯವಾಗಿದ್ದು, ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.