ನವದೆಹಲಿ : ಹಲವು ದಿನಗಳಿಂದಲೂ ನಿರಾಕರಿಸುತ್ತಲೇ ಬಂದಿದ್ದ ಕೊನೆಗೂ ಭಾರತದ ಸೇನೆಯು ತನ್ನ ವಾಯುನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದೆ ಎಂಬುದನ್ನು ಪಾಕಿಸ್ತನವು ಬಹಿರಂಗವಾಗಿ ಒಪ್ಪಿಕೊಂಡಿದೆ. ಸ್ವತಃ ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಮೇ 10 ರಂದು ಆಪರೇಶನ್ ಸಿಂದೂರ ಅಡಿಯಲಲಿ ಹಾರಿಸಲಾದ ಭಾರತದ ಕ್ಷಿಪಣಿಗಳು ಪಾಕಿಸ್ತಾನದ ಸೇನೆಯ ವಾಯುನೆಲೆಗಳ ದಾಳಿ ಮಾಡಿದೆ ಎಂದು ಒಪ್ಪಿಕೊಂಡಿದ್ದಾರೆ.
ಶುಕ್ರವಾರ ‘ಯೂಮ್-ಎ-ತಶಕೂರ್’ ಆಚರಣೆಯ ಭಾಗವಾಗಿ ಪಾಕಿಸ್ತಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡುವಾಗ ಷರೀಫ್ ಭಾರತದ ದಾಳಿಯನ್ನು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನ ಶುಕ್ರವಾರ ಮಿಲಿಟರಿಗೆ ಗೌರವ ಸಲ್ಲಿಸಲು ‘ಯೂಮ್-ಎ-ತಶಕೂರ್’ (ಧನ್ಯವಾದ ದಿನ) ಆಚರಿಸಿತು. ಶನಿವಾರ ಇಸ್ಲಾಮಾಬಾದ್‌ನಲ್ಲಿರುವ ಪಾಕಿಸ್ತಾನ ಸ್ಮಾರಕದಲ್ಲಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಷರೀಫ್, “ಮೇ 9-10 ರ ಮಧ್ಯರಾತ್ರಿ, ಬೆಳಗಿನ ಜಾವ 2:30 ರ ಸುಮಾರಿಗೆ, ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಸುರಕ್ಷಿತ ಮಾರ್ಗದ ಮೂಲಕ ನನಗೆ ಕರೆ ಮಾಡಿ, ಹಿಂದೂಸ್ತಾನಿ ಬ್ಯಾಲಿಸ್ಟಿಕ್ ಕ್ಷಿಪಣಿಗಳು ನೂರ್ ಖಾನ್ ವಾಯುನೆಲೆ ಮತ್ತು ಇತರ ಪ್ರದೇಶಗಳನ್ನು ಹೊಡೆದಿವೆ ಎಂದು ನನಗೆ ತಿಳಿಸಿದರು ಎಂದು ಪ್ರಧಾನಿ ಶರೀಫ್ ಹೇಳಿದ್ದಾರೆ.
ಭಾರತ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಹೇಳಿದರು. ಒಂದು ನೂರ್ ಖಾನ್ ವಾಯುನೆಲೆಯಲ್ಲಿ ಮತ್ತು ಕೆಲವು ಇತರ ಪ್ರದೇಶಗಳನ್ನು ಹೊಡೆದಿದೆ ಎಂದು ಜನರಲ್ ಆಸಿಫ್ ಮುನೀರ್ ತಿಳಿಸಿದರು ಎಂದು ಪ್ರಧಾನಿ ಷರೀಫ್ ಸಾರ್ವಜನಿಕ ಭಾಷಣದಲ್ಲಿ ಹೇಳಿದರು.
ಪಾಕಿಸ್ತಾನದೊಳಗೆ ನುಗ್ಗಿ ದಾಳಿ ಮಾಡಿದ ಸುದ್ದಿಯಿಂದ ಪಾಕಿಸ್ತಾನದ ಪ್ರಧಾನಿ ಮಧ್ಯರಾತ್ರಿ ಎಚ್ಚರಗೊಂಡರು. ಇದು ಆಪರೇಷನ್ ಸಿಂಧೂರದ ಯೋಜನೆ, ನಿಖರತೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಬಹಳಷ್ಟು ಹೇಳುತ್ತದೆ.
ರಾವಲ್ಪಿಂಡಿ ಮತ್ತು ಇಸ್ಲಾಮಾಬಾದ್ ನಡುವೆ ಇರುವ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ ವಾಯು ಕಾರ್ಯಾಚರಣೆಗಳಿಗೆ ಬಹಳ ಹಿಂದಿನಿಂದಲೂ ಕೇಂದ್ರಬಿಂದುವಾಗಿರುವ ಒಂದು ಕಾರ್ಯತಂತ್ರದ ಮಿಲಿಟರಿ ಸೌಲಭ್ಯವಾಗಿದೆ.
ಹಿಂದೆ ಚಕ್ಲಾಲಾ ವಾಯುನೆಲೆ ಎಂದು ಕರೆಯಲ್ಪಡುತ್ತಿದ್ದ ಇದನ್ನು 1971 ರ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಭಾರತೀಯ ಪಡೆಗಳು ಗುರಿಯಾಗಿಸಿಕೊಂಡಿದ್ದವು.
‘ಆಪರೇಷನ್ ಸಿಂಧೂರ’ ನಂತರ ದಿನಗಳ ಕಾಲ ಮಿಲಿಟರಿ ಕಾರ್ಯಾಚರಣೆಗಳು ಹೆಚ್ಚಾದ ನಂತರ, ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮಕ್ಕೆ ಒಪ್ಪಿಕೊಂಡವು.
ಮೇ 7 ರಂದು ಭಾರತದ ‘ಆಪರೇಷನ್ ಸಿಂಧೂರದಲ್ಲಿ ತನಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಸೇನೆ ಬಲವಾಗಿ ನಿರಾಕರಿಸಿದ ನಂತರ ಈಗ ಪಾಕಿಸ್ತಾನ ಪ್ರಧಾನಿ ತಮ್ಮ ವಾಯುನೆಗಳಲ್ಲಿ ಹಾನಿಯಾಗಿದ್ದರ ಬಗ್ಗೆ ಹೇಳಿಕೆ ನೀಡಿದ್ದಾರೆ.
ನೂರ್ ಖಾನ್ ವಾಯುನೆಲೆ ಸೇರಿದಂತೆ ತನ್ನ ಮಿಲಿಟರಿ ಸ್ವತ್ತುಗಳನ್ನು ಭಾರತ ಗುರಿಯಾಗಿಸಿಕೊಂಡಿದೆ ಎಂದು ಪಾಕಿಸ್ತಾನ ಹೇಳಿದ್ದರೂ, ಯಾವುದೇ ಗಮನಾರ್ಹ ಹಾನಿ ಸಂಭವಿಸಿಲ್ಲ ಎಂದು ಹೇಳಿತ್ತು ಹಾಗೂ ಬದಲಾಗಿ ಭಾರತೀಯ ಸೇನೆಯ ಸ್ವತ್ತುಗಳ ಮೇಲೆ ತೀವ್ರ ಹಾನಿಯನ್ನುಂಟುಮಾಡಿರುವುದಾಗಿ ಹೇಳಿಕೊಂಡಿತ್ತು.
ಭಾರತವು ಒಂದೇ ಕಾರ್ಯಾಚರಣೆಯಲ್ಲಿ ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರದ 11 ವಾಯುನೆಲೆಗಳ ಮೇಲೆ ದಾಳಿ ಮಾಡಿದ ಮೊದಲ ದೇಶವಾಯಿತು, ಇದು ಪಾಕಿಸ್ತಾನದ ವಾಯುಪಡೆಯ ಆಸ್ತಿಗಳಲ್ಲಿ ಶೇಕಡಾ 20 ರಷ್ಟು ನಾಶಪಡಿಸಿತು. ಭೂಲಾರಿ ವಾಯುನೆಲೆಯಲ್ಲಿ ಸ್ಕ್ವಾಡ್ರನ್ ನಾಯಕ ಉಸ್ಮಾನ್ ಯೂಸುಫ್ ಸಾವು ಮತ್ತು ಪ್ರಮುಖ ಯುದ್ಧ ವಿಮಾನಗಳ ನಾಶ ಸೇರಿದಂತೆ ಹೆಚ್ಚಿನ ಸಾವುನೋವುಗಳಿಗೆ ಕಾರಣವಾಗಿದೆ ಎಂದು ಭಾರತೀಯ ಸೇನೆ ಹೇಳಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರ ಸಾವಿಗೆ ಪ್ರತೀಕಾರವಾಗಿ ಭಾರತ ಮೇ 7 ರಂದು ‘ಆಪರೇಷನ್ ಸಿಂಧೂರ’ವನ್ನು ಪ್ರಾರಂಭಿಸಿತು. ಪಾಕಿಸ್ತಾನದಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ನಿಖರವಾದ ದಾಳಿಗಳನ್ನು ನಡೆಸಿತು.
ಆದಾಗ್ಯೂ, ಪ್ರತೀಕಾರವಾಗಿ, ಪಾಕಿಸ್ತಾನವು ಮೇ 8,9 ಮತ್ತು 10 ರಂದು ಅಂತರರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯಾದ್ಯಂತ ಭಾರತೀಯ ಮಿಲಿಟರಿ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ಪ್ರಾರಂಭಿಸಿತು. ದಿನಗಳ ಕಾಲ ನಡೆದ ಮಿಲಿಟರಿ ಕಾರ್ಯಾಚರಣೆಗಳ ನಂತರ, ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಕದನ ವಿರಾಮಕ್ಕೆ ಒಪ್ಪಿಕೊಂಡವು.