Gold Price Today : ವೀಕೆಂಡ್ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬಂಗಾರ..!

Gold Price Today : ಭಾರತೀಯ ಮಾರುಕಟ್ಟೆಯಲ್ಲಿ ಶುಕ್ರವಾರ ಏರಿಕೆಗೆ ಸಾಕ್ಷಿಯಾಗಿದ್ದ ಚಿನ್ನದ ಬೆಲೆಯು ವೀಕೆಂಡ್‌ನಲ್ಲಿ ಸ್ಥಿರವಾಗಿದೆ. ಸತತ ಎರಡು ದಿನ ಇಳಿಕೆ ಬಳಿಕ ಮೇ 16ರಂದು ಹಳದಿ ಲೋಹದ ಬೆಲೆ ಏರಿಕೆಯಾಗಿತ್ತು. ಆದ್ರೆ ಇಂದು ಅಂದ್ರೆ ಮೇ 17ರಂದು ಚಿನ್ನ ಅಷ್ಟೇ ಅಲ್ಲದೆ ಬೆಳ್ಳಿ ಬೆಲೆಯು ಕೂಡ ಸ್ಥಿರವಾಗಿದೆ. ಹಾಗಿದ್ರೆ ಶನಿವಾರ 24 ಕ್ಯಾರೆಟ್ ಬಂಗಾರದ ಬೆಲೆ ಎಷ್ಟಿದೆ? ಬೆಳ್ಳಿ ಬೆಲೆ ಕೆಜಿಗೆ ಎಷ್ಟು? ಎಂಬುದನ್ನು ಇಲ್ಲಿ ತಿಳಿಯಿರಿ.

ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 87,350 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 95,280 ರೂಪಾಯಿ ದಾಖಲಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 97,000 ರೂಪಾಯಿನಷ್ಟೇ ಉಳಿದಿದೆ.

ದೇಶೀಯ ಮಾರುಕಟ್ಟೆಯಲ್ಲಿ ಶನಿವಾರ ಚಿನ್ನದ ಬೆಲೆ ಸ್ಥಿರವಾಗಿದೆ. ಸತತ ಎರಡು ದಿನಗಳ ಇಳಿಕೆ ಬಳಿಕ ಶುಕ್ರವಾರ ದಿಢೀರ್ ಚಿನ್ನದ ಬೆಲೆ ಹೆಚ್ಚಾಗಿತ್ತು. ಆದ್ರೆ ಇದೀಗ ಮೇ 17ರಂದು ಸ್ಥಿರವಾಗಿದ್ದು, ಬೆಳ್ಳಿ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ.

ಬಂಗಾರದ ಬೆಲೆ ಏರಿಕೆ ಹಾಗೂ ಇಳಿಕೆಗೆ ಸಾಕಷ್ಟು ಅಂಶಗಳು ಪರಿಣಾಮ ಬೀರಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಡಾಲರ್‌ ಹಾಗೂ ಭಾರತದ ರೂಪಾಯಿ ಬೆಲೆ ನಡುವಿನ ವ್ಯತ್ಯಾಸ ಕೂಡ ಪ್ರಭಾವ ಬೀರಲಿದೆ. ಇಷ್ಟಲ್ಲದೆ ಚಿನ್ನದ ಬೇಡಿಕೆ ಪ್ರಮಾಣ, ತೆರಿಗೆಗಳು ಸೇರಿದಂತೆ ಸಾಕಷ್ಟು ಅಂಶಗಳು ಬಂಗಾರದ ಬೆಲೆ ವ್ಯತ್ಯಾಸಕ್ಕೆ ಕಾರಣವಾಗಿವೆ.

 

error: Content is protected !!