Gold Rate Today: ಕಳೆದ ವಾರ ಚಿನ್ನದ ಬೆಲೆ ತೀವ್ರ ಕುಸಿತ ಕಂಡಿದೆ. ಆದರೆ, ನಿನ್ನೆ ಶನಿವಾರ ಸ್ವಲ್ಪ ಏರಿಕೆ ದಾಖಲಿಸಿತ್ತು. ಆದರೆ, ಇಂದು ಭಾನುವಾರ ಬಂಗಾರದ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಮೇ 18 ರಂದು ಬೆಂಗಳೂರಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕಳೆದ ವಾರದಲ್ಲಿ ಚಿನ್ನದ ಬೆಲೆ ಸಾವಿರಾರು ರೂಪಾಯಿ ಕುಸಿತ ಕಂಡಿತ್ತು. ಆದರೆ,ನಿನ್ನೆ ಶನಿವಾರದಂದು ಬಂಗಾರದ ಬೆಲೆಯಲ್ಲಿ ಸ್ವಲ್ಪ ಏರಿಕೆ ಕಂಡಿತ್ತು. ಆದರೆ, ಇಂದು ಮೇ 18 ರಂದು ಚಿನ್ನದ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿವೆ. ಬೆಂಗಳೂರಲ್ಲಿ ಇಂದು ಭಾನುವಾರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬ ವಿವರ ಇಲ್ಲಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನಿರಂತರವಾಗಿ ಇಳಿಕೆಯಾಗುತ್ತಿದೆ. ಇಂದು ಸ್ವಲ್ಪ ಹೆಚ್ಚಿದ್ದರೂ, ಗರಿಷ್ಠ ಮಟ್ಟದಿಂದ ನೋಡಿದಾಗ ಇನ್ನೂ ತುಂಬಾ ಕಡಿಮೆಯಾಗಿದೆ. ಸ್ಪಾಟ್ ಚಿನ್ನದ ದರ ಪ್ರಸ್ತುತ ಔನ್ಸ್‌ಗೆ $3203 ನಲ್ಲಿ ವಹಿವಾಟು ನಡೆಸುತ್ತಿದೆ. ಸ್ಪಾಟ್ ಬೆಳ್ಳಿ ದರ ಪ್ರತಿ ಔನ್ಸ್‌ಗೆ $32.31 ನಲ್ಲಿಯೇ ಇದೆ. ಮತ್ತೊಂದೆಡೆ, ಭಾರತೀಯ ಕರೆನ್ಸಿ ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ. ಡಾಲರ್ ಎದುರು ಪ್ರಸ್ತುತ ₹85,640 ರಲ್ಲಿ ವಹಿವಾಟು ನಡೆಸುತ್ತಿದೆ.
Rain Alert News: ಉತ್ತರ ಕನ್ನಡ ಸೇರಿ ಮುಂದಿನ 3 ದಿನ ಮಳೆಯ ಮುನ್ಸೂಚನೆ..! ಯೆಲ್ಲೊ ಅಲರ್ಟ್
ಬೆಂಗಳೂರಲ್ಲಿ ಚಿನ್ನದ ಬೆಲೆ..!
ಬೆಂಗಳೂರಲ್ಲಿ ನಿನ್ನೆ ಶನಿವಾರದಂದು ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹1200 ಏರಿಕೆ ಕಂಡು ₹95130 ಕ್ಕೆ ತಲುಪಿತ್ತು. ಆಭರಣ ಚಿನ್ನದ ಬೆಲೆಯಲ್ಲಿ (22 ಕ್ಯಾರಟ್) 1100 ರೂ. ಏರಿಕೆಯೊಂದಿಗೆ ₹87200ಕ್ಕೆ ತಲುಪಿತ್ತು. ಆದರೆ, ಇಂದು ಭಾನುವಾರದಂದು ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆಯ ದರಗಳೇ ಮುಂದುವರಿದಿದೆ.
ಬೆಳ್ಳಿ ದರ ಸ್ಥಿರ..!
ಹಿಂದಿನ ದಿನ ಚಿನ್ನದ ಬೆಲೆ ತೀವ್ರ ಏರಿಕೆಯಾಗಿದ್ದರೂ, ಬೆಳ್ಳಿ ಸ್ವಲ್ಪ ಸಮಾಧಾನ ತಂದಿತು. ಇದು ಗಮನಾರ್ಹವಾಗಿ ಕಡಿಮೆಯಾಗುತ್ತಿದೆ ಮತ್ತು ಎರಡು ದಿನಗಳಿಂದ ಸ್ಥಿರವಾಗಿದೆ. ಬೆಂಗಳೂರಲ್ಲಿ ಪ್ರಸ್ತುತ ಪ್ರತಿ 1 ಕೆಜಿ ಬೆಳ್ಳಿ ಬೆಲೆ ₹97,000ದಲ್ಲಿ ವಹಿವಾಟು ನಡೆಸುತ್ತಿದೆ. ಹೈದರಾಬಾದ್ ಮಾರುಕಟ್ಟೆಯಲ್ಲಿ ಪ್ರಸ್ತುತ ಪ್ರತಿ ಕೆಜಿ ಬೆಳ್ಳಿಯ ದರ ರೂ. 1,08,000 ದಲ್ಲಿ ಸ್ಥಿರವಾಗಿ ವಹಿವಾಟು ನಡೆಸುತ್ತಿದೆ.
Covid News: 3 ವರ್ಷಗಳಿಗೂ ಅಧಿಕ ಕಾಲ ವಿಶ್ವವನ್ನು ಕಾಡಿ ತೆರೆಮರೆಗೆ ಸರಿದಿದ್ದ ಕೊರೋನಾ ಮತ್ತೆ ಸದ್ದು..!
ಮೇಲೆ ತಿಳಿಸಲಾದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಮೇ 18 ರ ಮಾರುಕಟ್ಟೆ ಬೆಲೆಗಳಾಗಿದ್ದು, ಇದರಲ್ಲಿ ಜಿಎಸ್‌ಟಿ ತೆರಿಗೆ, ಮೇಕಿಂಗ್ ಶುಲ್ಕ ಮೊದಲಾದ ಇತರೆ ವೆಚ್ಚಗಳನ್ನು ಸೇರಿಸ ಲಾಗಿಲ್ಲ. ನಿಖರ ಬೆಲೆಗಳನ್ನು ತಿಳಿಯಲು ಹತ್ತಿರದ ಆಭರಣ ಮಳಿಗೆಗೆ ಭೇಟಿ ನೀಡಿ.