RCB-KKR IPL T20 News: ಬೆಂಗಳೂರು: ಆರ್‌ಸಿಬಿ ಹಾಗೂ ಕೆಕೆಆರ್ ವಿರುದ್ಧ ಪಂದ್ಯ ಒಂದೇ ಒಂದು ಬಾಲ್ ಆಡದೆ ಮಳೆಯಿಂದಾಗಿ ರದ್ದಾಯಿತು. ಆ ಮೂಲಕ ಆರ್‌ಸಿಬಿ ಹಾಗೂ ಕೆಕೆಆರ್ ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಆದ್ರೆ ಇಂದಿನ ಪಂದ್ಯ ರದ್ದಾಗಿದ್ದರಿಂದ ಕೆಕೆಆರ್ ಟೂರ್ನಿಯಿಂದ ಹೊರಬಿದ್ದಿತು.
ಭಾರತ- ಪಾಕಿಸ್ತಾನ (India Pakistan) ಸಂಘರ್ಷದ ಹಿನ್ನೆಲೆ ಮೇ 8ರಂದು ದಿಢೀರನೆ ರದ್ದಾಗಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಪಂದ್ಯಾವಳಿಗಳು ಬರೋಬ್ಬರಿ 10 ದಿನಗಳ ಬಳಿಕ ಪುನರ್ ಆರಂಭಗೊಂಡಿವೆ. ಆದ್ರೆ, ದುರಾದೃಷ್ಟ ಎಂಬಂತೆ ಚಿನ್ನಸ್ವಾಮಿಯಲ್ಲಿ ಆಯೋಜನೆಗೊಂಡಿದ್ದ ಇಂದಿನ ಪಂದ್ಯ ಒಂದೇ ಒಂದು ಬಾಲ್ ಆಡದೆ ಮಳೆಯಿಂದಾಗಿ ರದ್ದಾಯಿತು. ಆ ಮೂಲಕ ಆರ್‌ಸಿಬಿ ಹಾಗೂ ಕೆಕೆಆರ್ (RCB vs KKR) ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡವು. ಆದ್ರೆ, ಇಂದಿನ ಪಂದ್ಯ ರದ್ದಾಗಿದ್ದರಿಂದ ಕೆಕೆಆರ್ ಟೂರ್ನಿಯಿಂದ ಹೊರಬಿದ್ದರೆ, ಆರ್‌ಸಿಬಿ ಅಗ್ರಸ್ಥಾನಕ್ಕೇರುವ ಮೂಲಕ ಪ್ಲೇ ಆಫ್ ಖಚಿತಪಡಿಸಿಕೊಂಡಿತು.
ಅಗ್ರಸ್ಥಾನಕ್ಕೇರಿದ ಆರ್‌ಸಿಬಿ
ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ರದ್ದಾದರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು ಹಾಗೂ ಒಂದು ಪಂದ್ಯ ರದ್ದಾಗುವ ಮೂಲಕ 17 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿತು. ಮಾತ್ರವಲ್ಲ ಆರ್‌ಸಿಬಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿತು.
RCB-KKR IPL T20 News:
ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಟೂರ್ನಿಯುದ್ಧಕ್ಕೂ ಸೋಲು-ಗೆಲುವನ್ನು ಸಮಾನವಾಗಿ ನೋಡಿಕೊಂಡು ಬಂದಿದೆ. ಕೆಕೆಆರ್ ಆಡಿರುವ 13 ಪಂದ್ಯಗಳಲ್ಲಿ 5 ಗೆಲುವು, 7 ಸೋಲು ಹಾಗೂ 2 ಪಂದ್ಯಗಳು ರದ್ದಾದ ಹಿನ್ನೆಲೆ ಟೂರ್ನಿಯಲ್ಲಿ 12 ಅಂಕ ಹೊಂದಿದೆ. ಆ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ 6 ಸ್ಥಾನದಲ್ಲಿದೆ. ಆದ್ರೂ ಕೂಡ ತಂಡ ಪ್ಲೇ ಆಫ್ ತಲುಪುವುದು ಅಸಾಧ್ಯ. ಒಂದು ವೇಳೆ ಕೆಕೆಆರ್ ಸೆಮಿಫೈನಲ್ ತಲುಪಬೇಕೆಂದರೆ ಪವಾಡ ನಡೆಯಬೇಕು ಅಷ್ಟೆ..!