Home mundgod news

Tag: mundgod news

Post
ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಇಂದೂರು ಬಳಿ ಟ್ರಾಕ್ಟರ್ ಹಾಗೂ ಬೈಕ್ ನಡುವೆ ಅಪಘಾತ, ನೆಲ್ಲಿಹರವಿ ತಾಂಡಾದ ದಂಪತಿಗೆ ಗಾಯ

ಮುಂಡಗೋಡ ತಾಲೂಕಿನ ಇಂದೂರು ಬಳಿಯ ಷರೀಫ ದೇವಸ್ಥಾನದ ಬಳಿ ಅಪಘಾತವಾಗಿದೆ. ಟ್ರಾಕ್ಟರ್ ಹಾಗೂ ಬೈಕ್‌ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ಮೇಲಿದ್ದ ದಂಪತಿಗೆ ಗಾಯವಾಗಿದೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾದ ಆಕಾಶ್ ವಾಸಪ್ಪ ಲಮಾಣಿ (22) ಸಂಗೀತಾ ಆಕಾಶ್ ಲಮಾಣಿ (20) ಗಾಯಗೊಂಡವರಾಗಿದ್ದಾರೆ. ಇಂದೂರು ಕಡೆಯಿಂದ ಬರುತ್ತಿದ್ದ ಬೈಕ್ ಹಾಗೂ ಮುಂಡಗೋಡ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ನಡುವೆ ಡಿಕ್ಕಿಯಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಗಾಯಾಳುವನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ‌. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!

ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!

ಮುಂಡಗೋಡ: ತಾಲೂಕಿನ ಕಾತೂರಿನ ಸಭಾಭವನದಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಮುಂಡಗೋಡ ಜೆಎಮ್ ಎಫ್ ಸಿ ಕೋರ್ಟ್ ನ್ಯಾಯಧೀಶ ಕೇಶವ್ ಕೆ. ಕಾರ್ಯಕ್ರಮ ಉದ್ಘಾಟಿಸಿದ್ರು. ಪೊಲೀಸ್ ನಿರೀಕ್ಷಕ ಸಿದ್ದಪ್ಪ ಸಿಮಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ, ಮುಂಡಗೋಡ ಹಾಗೂ ವಕೀಲರ ಸಂಘ ಮುಂಡಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ...

Post
ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

 ಇದು ಮುಂಡಗೋಡ ತಾಲೂಕಿನ ಪಾಲಿಗೆ ಅಚ್ಚರಿಯ ಸಂಗತಿ. ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರ ಖುರ್ಚಿಗೆ ಕುತ್ತು ಬಂದಿದೆಯಾ..? ಮಾರ್ಕೆಟಿಂಗ್ ಸೊಸೈಟಿಗೆ ರವಿಗೌಡ ಪಾಟೀಲರ ನಾಮನಿರ್ದೇಶನವೇ ಕಾನೂನು ಬಾಹಿರಾಗಿದೆ ಅಂತಾ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಆದೇಶ ನೀಡಿದೆ. 03.11.2020 ರಂದು ರವಿಗೌಡ ಪಾಟೀಲರನ್ನು ಸರ್ಕಾರದಿಂದಲೇ ನಾಮ ನಿರ್ದೇಶನಗೊಳಿಸಿದ್ದು ಕಾನೂನು ಬಾಹಿರ ಅಂತಾ ಸರ್ಕಾರದ ಆದೇಶವನ್ನು ಮಾನ್ಯ ಹೈಕೋರ್ಟ್ ವಿಭಾಗೀಯ ಪೀಠ ಕಿತ್ತು ಹಾಕಿದೆ. ಹೀಗಾಗಿ, ಸಚಿವ ಶಿವರಾಮ್ ಹೆಬ್ಬಾರ್ ರವರ ಪರಮಾಪ್ತ, ಬಿಜೆಪಿಯ ಪ್ರಭಾವಿ ಮುಖಂಡ...

Post
ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?

ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?

ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅನ್ನೋದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವಾಗಿ ವರ್ಷಗಳೇ ಕಳೆದು ಹೋಗಿದೆ. ಪ್ರತೀ ಚುನಾವಣೆ ಬಂದಾಗಲಷ್ಟೇ ಎಲ್ಲೆಲ್ಲಿಂದಲೋ ಬಂದು ಬ್ಯಾನರು, ಪ್ಲೆಕ್ಸು ಕಟ್ಟುವ ನಾಯಕರುಗಳು ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾಗುವ ಚಾಳಿ “ಸಂಪ್ರದಾಯ” ಆದಂತೆ ಆಗಿದೆ. ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರೋ ಈ ಸಂದರ್ಭದಲ್ಲೂ ಮತ್ತದೇ ಸಂಪ್ರದಾಯ ಶುರುವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರಸಕ್ತ ಮುಂಡಗೋಡ ಜೆಡಿಎಸ್ ನಲ್ಲಿ ನಡೆಯುತ್ತಿರೋ ವಿದ್ಯಮಾನಗಳು ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗ್ತಿದೆ. ಅವ್ರು ಸಂತೋಷ ರಾಯ್ಕರ್ ಹೆಚ್ಚೂ...

Post
ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ನಂದೀಪುರ ಬಳಿ ಭೀಕರ ಅಪಘಾತವಾಗಿದೆ. ರಾಂಗ್ ಸೈಡ್ ಬಂದ ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಯೂ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಕಾರು, ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಹಾವೇರಿ ಮೂಲದ ಓರ್ವ ಮಹಿಳೆ ಹಾಗೂ ಪುರುಷನಿಗೆ ಗಂಭೀರ ಗಾಯವಾಗಿದೆ. ಹಾಗೆಯೇ ಮತ್ತೊಂದು ಬೈಕಿನಲ್ಲಿದ್ದ ವ್ಯಕ್ತಿಗೂ ಗಾಯವಾಗಿದೆ. ಎಣ್ಣೆ ಏಟಲ್ಲಿ..?...

Post
ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ

ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ

ಮುಂಡಗೋಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕದ ವತಿಯಿಂದ ಇಲ್ಲಿನ ಶಿವಾಜಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಲಾಯಿತು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ್ರು. ವಿವಿಧ ರಾಜ್ಯದೆಡೆಯಿಂದ ಬಂದ ಪ್ರತಿಯೊಬ್ಬರೂ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕಿದೆ ಇಲ್ಲಿ ದೊರಕುವ ಶಾಂತಿ ಸಂಹಿತೆ ದೇಶದ ಇತರೆ ಕಡೆ ಕಾಣಸಿಗುವುದಿಲ್ಲ ಎಂದ ಅವರು, ತಾಲೂಕಿಗೆ ನೂತನವಾಗಿ ಆಗಮಿಸಿರುವ ಪ್ರವೀಣ ಶೆಟ್ಟಿ ಬಣದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ನ್ಯಾಯಕ್ಕಾಗಿ...

Post
ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ

ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ

ಮುಂಡಗೋಡ ತಾಲೂಕಿನ ಬಾಚಣಕಿಯ ಹಿರಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್(70) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರು ಎಳೆದಿರೋ ಬರಮಪ್ಪ ಜನಾನುರಾಗಿಯಾಗಿದ್ದರು. ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಬರಮಪ್ಪ, ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ‌. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ‌. ಇನ್ನು ಬರಮಪ್ಪ ಏಗಪ್ಪನವರ್ ನಿಧನಕ್ಕೆ ತಾಲೂಕಿನ ಜೈನ ಸಮಾಜ ಕಂಬನಿ ಮಿಡಿದಿದೆ.

Post
ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?

ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?

ಯಲ್ಲಾಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಮಾಜಿ NWKSRTC ಅಧ್ಯಕ್ಷ ವಿ.ಎಸ್. ಪಾಟೀಲ್ “ಕೈ” ಪಡೆ ಸೇರುವ ಮುಹೂರ್ತ ಫಿಕ್ಸ್ ಆಗಿದೆ. ನೆವೆಂಬರ್ 4 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕಮಲ ತೊರೆದು “ಕೈ” ಹಿಡಿಯಲಿದ್ದಾರೆ ಪಾಟೀಲರು. ಅಂದಹಾಗೆ, ಇವತ್ತು ಬೆಂಗಳೂರಿನಲ್ಲಿ ಇಂತಹದ್ದೊಂದು ತೀರ್ಮಾನ ಹೊರಬಿದ್ದಿದೆ. ಡಿಕೆಶಿ ಭೇಟಿ..! ಅಸಲು, ಹಲವು ತಿಂಗಳುಗಳಿಂದಲೇ ಬಿಜೆಪಿ ಜೊತೆಗಿನ ಸಂಬಂಧ ಕಳೆದುಕೊಂಡಿದ್ದ ವಿಎಸ್ಪಿ, ಬಹುತೇಕ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಒಂದು ಹೆಜ್ಜೆ ಇಟ್ಟಾಗಿತ್ತು. ಆದ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಕಾರ್ಯಕ್ರಮದಲ್ಲಿ...

Post
ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಇಂದಿರಾನಗರದ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಓರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡಿನಿಂದ ಕಲಘಟಗಿ ಕಡೆಗೆ ಹೋಗುತ್ತಿರುವಾಗ, ಇಂದಿರಾ ನಗರ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬೈಕ್ ನಲ್ಲಿದ್ದ ಕುಂದಗೋಳ ತಾಲೂಕಿ‌ನ ಸುರೇಶ ಶಿವಪ್ಪ ಗುಡಿಯಾಳ್(33) ಎಂಬುವವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಮತ್ತೊರ್ವನಿಗೆ ಯಾವುದೇ ಗಾಯವಾಗದೆ ಸುರಕ್ಷಿತವಾಗಿದ್ದಾನೆ. ಇನ್ನು ಅಪಘಾತ ನಡೆದ ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ...

Post
ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ‌ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್...

error: Content is protected !!