ಕಾತೂರಿನಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನಕ್ಕೆ ಚಾಲನೆ..!

ಮುಂಡಗೋಡ: ತಾಲೂಕಿನ ಕಾತೂರಿನ ಸಭಾಭವನದಲ್ಲಿ ಕಾನೂನು ಅರಿವು ಮತ್ತು ನೆರವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ ಕಾರ್ಯಕ್ರಮ ಉದ್ಘಾಟನೆಗೊಂಡಿದೆ. ಮುಂಡಗೋಡ ಜೆಎಮ್ ಎಫ್ ಸಿ ಕೋರ್ಟ್ ನ್ಯಾಯಧೀಶ ಕೇಶವ್ ಕೆ. ಕಾರ್ಯಕ್ರಮ ಉದ್ಘಾಟಿಸಿದ್ರು. ಪೊಲೀಸ್ ನಿರೀಕ್ಷಕ ಸಿದ್ದಪ್ಪ ಸಿಮಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ, ಮುಂಡಗೋಡ ಹಾಗೂ ವಕೀಲರ ಸಂಘ ಮುಂಡಗೋಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪೊಲಿಸ್‌ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರೋ ಕಾರ್ಯಕ್ರಮದಲ್ಲಿ, ಮುಖ್ಯ ಅತಿಥಿಗಳಾಗಿ ಕು. ಉಮಾ ದಾಮೋದರ ನಾಯ್ಕ್, ಪಿಎಸ್ಐ ಬಸವರಾಜ ಮಬನೂರು, ಎಎಸ್ಐ ಶ್ರೀಮತಿ ಗೀತಾ ಕಲಘಟಗಿ,
ಶ್ರೀ ಮತಿ ರೂಪ ಅಂಗಡಿ, ಮೇಲ್ವಿಚಾರಕರು ಸಿಡಿಪಿಒ, ವಿ.ಸಿ. ಪವಾಡಶೆಟ್ಟರ್ , ಪ್ಯಾನಲ್ ವಕೀಲರುಗಳಾದ ಆರ್.ಸಿ. ಮಳೆಕ‌ರ್, ಆರ್. ಎಮ್. ಮಳಗಿಕ‌ರ್, ಆರ್. ಬಿ. ಹುಬ್ಬಳ್ಳಿ, ಆರ್. ಎಸ್. ಹಂಚಿನಮನಿ, ಶ್ರೀ ಜಿ. ಆರ್. ಆಲದಕಟ್ಟಿ ಆಗಮಿಸಿದ್ದರು.

error: Content is protected !!