ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!



ಇದು ಮುಂಡಗೋಡ ತಾಲೂಕಿನ ಪಾಲಿಗೆ ಅಚ್ಚರಿಯ ಸಂಗತಿ. ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರ ಖುರ್ಚಿಗೆ ಕುತ್ತು ಬಂದಿದೆಯಾ..? ಮಾರ್ಕೆಟಿಂಗ್ ಸೊಸೈಟಿಗೆ ರವಿಗೌಡ ಪಾಟೀಲರ ನಾಮನಿರ್ದೇಶನವೇ ಕಾನೂನು ಬಾಹಿರಾಗಿದೆ ಅಂತಾ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಆದೇಶ ನೀಡಿದೆ. 03.11.2020 ರಂದು ರವಿಗೌಡ ಪಾಟೀಲರನ್ನು ಸರ್ಕಾರದಿಂದಲೇ ನಾಮ ನಿರ್ದೇಶನಗೊಳಿಸಿದ್ದು ಕಾನೂನು ಬಾಹಿರ ಅಂತಾ ಸರ್ಕಾರದ ಆದೇಶವನ್ನು ಮಾನ್ಯ ಹೈಕೋರ್ಟ್ ವಿಭಾಗೀಯ ಪೀಠ ಕಿತ್ತು ಹಾಕಿದೆ. ಹೀಗಾಗಿ, ಸಚಿವ ಶಿವರಾಮ್ ಹೆಬ್ಬಾರ್ ರವರ ಪರಮಾಪ್ತ, ಬಿಜೆಪಿಯ ಪ್ರಭಾವಿ ಮುಖಂಡ ರವಿಗೌಡ ಪಾಟೀಲರಿಗೆ ದಕ್ಕಿದ್ದ ಇಲ್ಲಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಗಾದಿ ಬಹುತೇಕ ಕೈ ತಪ್ಪುವಂತಾಗಿದೆ.

ಕಾನೂನು ಬಾಹಿರ..!
ಅಂದಹಾಗೆ, 3.11.2020 ರಂದು ಮಾರ್ಕೆಟಿಂಗ್ ಸೊಸೈಟಿಯಲ್ಲಿ ಅಧ್ಯಕ್ಷ ಪದವಿಗಾಗಿಯೇ ಸರ್ಕಾರದ ಪರವಾಗಿ ನಾಮಿನೇಟ್ ಸದಸ್ಯರನ್ನಾಗಿ ರವಿಗೌಡರಿಗೆ ನೇಮಿಸಲಾಗಿತ್ತು. ಅಧ್ಯಕ್ಷ ಪದವಿ ನೀಡುವ ಸಲುವಾಗಿಯೇ ಕಾನೂನು ಬಾಹಿರವಾಗಿ ನಾಮಿನೆಟ್ ಮಾಡಲಾಗಿದೆ ಅಂತಾ ಕೆಲವು ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು‌. ಹೀಗಾಗಿ, ಸದ್ಯ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ನೀಡಿದ್ದು ಸಹಕಾರ ಕಾಯ್ದೆಯಡಿ ಈ ನಾಮನಿರ್ದೇಶನ ಪ್ರಕ್ರಿಯೆಯೇ ತಪ್ಪುಅಂತಾ ಕೋರ್ಟ್ ಆದೇಶಿಸಿದೆ‌. ಅಲ್ಲದೇ ನಾಮನಿರ್ದೇಶನವನ್ನೇ ಕಿತ್ತು ಹಾಕಿದೆ. ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾರ್ಕೆಟಿಂಗ್ ಸೊಸೈಟಿಯ ಕೆಲವು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ರವಿಗೌಡ ಪಾಟೀಲ್

ಭಾರೀ ಹಿನ್ನಡೆ..!
ಅಸಲು, ಸಚಿವ ಶಿವರಾಮ್ ಹೆಬ್ಬಾರ್ ಕೃಪೆಯಿಂದ ಅಧ್ಯಕ್ಷ ಗಾದಿಗೆ ಏರಿದ್ದ ರವಿಗೌಡ ಪಾಟೀಲರಿಗೆ ಹೈಕೋರ್ಟ್ ಆದೇಶದಿಂದ ಭಾರೀ ಮುಖಭಂಗವಾಗಿದೆ. ಹೀಗಾಗಿ, ಅವ್ರ ಮುಂದಿನ ನಡೆ ಏನು ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಅಂದಹಾಗೆ, ಅಕ್ಟೋಬರ್ 19 ರಂದೇ ಹೈಕೋರ್ಟ್ ವಿಭಾಗೀಯ ಪೀಠ ಇಂತಹದ್ದೊಂದು ಆದೇಶ ಹೊರಡಿಸಿದ್ದು, ಒಳಗೊಳಗೆ ಸಾಕಷ್ಟು ರೂಮರ್ರುಗಳಿಗೆ ಕಾರಣವಾಗಿತ್ತು. ಆದೇಶ ಬಂದು 15 ದಿನ ಕಳೆದ್ರೂ ಯಾಕೆ ಇನ್ನೂ ಬಹಿರಂಗವಾಗಿಲ್ಲ ಅನ್ನೋ ಗುಮಾನಿಗಳು ಎದ್ದಿದ್ದವು. ಆದ್ರೆ ಇಂದು ಅದೇಲ್ಲ ರೂಮರುಗಳಿಗೆ, ಅದೇಲ್ಲ ಗುಮಾನಿಗಳಿಗೆ ಪತ್ರಿಕಾಗೋಷ್ಟಿ ನಡೆಸಿ ತೆರೆ ಎಳೆಯಲಾಗಿದೆ.

ಅದ್ರೊಂದಿಗೆ, ರವಿಗೌಡ ಪಾಟೀಲರು ಅಧ್ಯಕ್ಷರಾದ ಗಳಿಗೆಯಿಂದ ಇದುವರೆಗೂ ಆಡಳಿತ ಮಂಡಳಿಯ ಗಮನಕ್ಕೆ ತಾರದೆ, ಡಿಆರ್ ಗಮನಕ್ಕೆ ತಾರದೆ ಅನೇಕ ಕಾರ್ಯಗಳನ್ನು ನಡೆಸಿದ್ದಾರೆ. ಹೀಗಾಗಿ, ಆ ಎಲ್ಲಾ ಕೆಲಸಗಳಲ್ಲೂ ಅಕ್ರಮದ ವಾಸನೆ ಬರುತ್ತಿದೆ. ಹೀಗಾಗಿ, ಅದೇಲ್ಲದರ ತನಿಖೆಯಾಗಬೇಕು ಅಂತಾ ಬೆಂಡಿಗೇರಿ, ತಿರುಪತಿ ಬೋವಿವಡ್ಡರ್, ಮಹ್ಮದ್ ಗೌಸ್ ಮಖಾಂದಾರ್ ಸೇರಿ ಮೂವರು ಆಗ್ರಹಿಸಿದ್ದಾರೆ.

ಹೈಕೋರ್ಟ್ ಆದೇಶದ ಪ್ರತಿಗಳು

error: Content is protected !!