ಮುಂಡಗೋಡ ತಾಲೂಕಿನ ಬಾಚಣಕಿಯ ಹಿರಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್(70) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರು ಎಳೆದಿರೋ ಬರಮಪ್ಪ ಜನಾನುರಾಗಿಯಾಗಿದ್ದರು.
ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಬರಮಪ್ಪ, ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ. ಇನ್ನು ಬರಮಪ್ಪ ಏಗಪ್ಪನವರ್ ನಿಧನಕ್ಕೆ ತಾಲೂಕಿನ ಜೈನ ಸಮಾಜ ಕಂಬನಿ ಮಿಡಿದಿದೆ.