ನಂದಿಗಟ್ಟಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಹೆಣವಾಗಿ ಪತ್ತೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಗ್ರಾಮದ ಹೊರವಲಯದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ದುರ್ನಾತ ಬೀರುತ್ತಿದೆ.

ಅಂದಹಾಗೆ, ಕಳೆದ ಎರಡು ದಿನಗಳಿಂದ ನಂದಿಗಟ್ಟಾ ಗ್ರಾಮದ ಮಾಬುಸಾಬ್ ಅತ್ತಿವೇರಿ (47) ಎಂಬುವ ವ್ಯಕ್ತಿ ನಾಪತ್ತೆಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಬುಸಾಬ್ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದ, ಆದ್ರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಏಕಾಏಕಿ ನಾಪತ್ತೆಯಾದವನು ಈಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ಸದ್ಯ ಮುಂಡಗೋಡ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ರವಾನಿಸಿದ್ದು ಶವ ಹೊರ ತೆಗೆಯುವ ಕಾರ್ಯ ನಡೆಸಲಾಗುತ್ತದೆ ಅಂತಾ ಮಾಹಿತಿ ತಿಳಿದು ಬಂದಿದೆ.

error: Content is protected !!