Home Publicfirstnewz

Tag: Publicfirstnewz

Post
ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ನಾಯಿ ದಾಳಿಗೆ ತುತ್ತಾಗಿದ್ದ ಸನವಳ್ಳಿ ಬಾಲಕನ ಬೇಟಿಯಾಗಿ, ದೈರ್ಯ ತುಂಬಿದ ಪಿಐ ಸಿದ್ದಪ್ಪ ಸಿಮಾನಿ

ಮುಂಡಗೋಡ ತಾಲೂಕಿನ ಸನವಳ್ಳಿ ಗ್ರಾಮದಲ್ಲಿ ನಾಯಿ ದಾಳಿಗೆ ತುತ್ತಾದ ಬಾಲಕನನ್ನು ಪಿಐ ಸಿದ್ದಪ್ಪ ಸಿಮಾನಿ ಭೇಟಿ ಮಾಡಿ ದೈರ್ಯ ತುಂಬಿದ್ರು. ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನಿಗೆ ಹಣ್ಣು ಹಂಪಲು ನೀಡಿ ಸಂತೈಸಿದರು. ಅಂದಹಾಗೆ, ಕಳೆದ ವರ್ಷವಷ್ಟೇ ತಾಯಿ ಕಳೆದುಕೊಂಡು ಅನಾಥರಾಗಿರೋ ಮೂವರು ಬಾಲಕರಿಗೆ, ತಂದೆಯ ನಿರ್ಲಕ್ಷವೂ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರ ಜೊತೆ ನಿನ್ನೆ ಸನವಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕನಿಗೆ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿದ್ದವು. ಈ ಕಾರಣಕ್ಕಾಗಿ, ನಾಯಿಗಳ ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ...

Post
ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ಸನವಳ್ಳಿಯ ಬಾಲಕನ “ಮೂಕ”ರೋಧನ, ನಾಯಿಗಳ ದಾಳಿಗೆ ತುತ್ತಾದ ತಮ್ಮನಿಗೆ ಪುಟ್ಟ ಅಣ್ಣನೇ ಆಸರೆ, ಕರುಳು ಹಿಂಡುವ ಕತೆಯಿದು..!

ನಿಜಕ್ಕೂ ಇದೊಂದು ಹೃದಯ ಹಿಂಡುವ ಕರುಣಾಜನಕ ಕತೆ. ಮುಂಡಗೋಡ ತಾಲೂಕಿನ ಸನವಳ್ಳಿಯ ಅದೊಬ್ಬ ಬಾಲಕನ ಮನಮಿಡಿಯುವ ಕತೆ. ಆತನ ಹೆಸ್ರು ಗುತ್ತೆಪ್ಪ.. ಈಗಿನ್ನೂ 7 ವರ್ಷದ ಬಾಲಕ. ಆತನಿಗೆ ಹಡೆದವ್ವ ಇಲ್ಲ. ತಾಯಿ ತೀರಿಕೊಂಡು ವರ್ಷ ಕಳೆದಿದೆ. ಹಡೆದ ತಂದೆಗೆ ಅದೇನಾಗಿದೆಯೋ ಗೊತ್ತಿಲ್ಲ. ಮಕ್ಕಳ ಬಗ್ಗೆ ಕ್ಯಾರೇ ಇಲ್ಲ. ಮೇಲಾಗಿ ಆ ಬಾಲಕನಿಗೆ ಮಾತೇ ಬರಲ್ಲ. ಇವನೊಬ್ಬನೇ ಅಲ್ಲ ಈತನಿಗೆ ಇನ್ನಿಬ್ಬರು ಅಣ್ಣಂದಿರು ಇದ್ದಾರೆ. ಓರ್ವ ಅಣ್ಣನ ಹೆಸ್ರು ನಾಗರಾಜ ಆತನಿಗೆ 17 ವರ್ಷ ವಯಸ್ಸು, ಮತ್ತೋರ್ವ...

Post
ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!

ನೌಕರರ ವರ್ಗಾವಣೆಯಲ್ಲಿ ಪತಿ, ಪತ್ನಿಯರಿಗಷ್ಟೇ ಅಲ್ಲ ಪೊಲೀಸರಿಗೂ ವಿನಾಯಿತಿ ನೀಡಿ, 16A ತಿದ್ದುಪಡಿ ವಿರುದ್ಧ ಪೊಲೀಸ್ ಪೇದೆಗಳ ಮೂಕರೋಧನ..!

ಇದು ಸರ್ಕಾರಿ ನೌಕರರಿಗೆ ಬಹುದೊಡ್ಡ ಆಘಾತ ಅಂತಲೇ ಹೇಳಲಾಗ್ತಿದೆ. ಅದ್ರಲ್ಲೂ ನಮ್ಮ ರಕ್ಷಣೆಗಾಗಿ ಹಗಲಿರುಳು ರಜೆಯಿಲ್ಲದೇ ದುಡಿಯೋ ಪೊಲೀಸರಿಗೆ ಸರ್ಕಾರದ ಅದೊಂದು ಕಾನೂನು ಇಡಿ ಇಡಿಯಾಗಿ ನೋವು ಮತ್ತು ಆತಂಕಕ್ಕೆ ದೂಡಿದೆ ಅಂತಾ ಖುದ್ದು ಪೊಲೀಸ್ ಇಲಾಖೆಯ ಅಸಂಖ್ಯ ಪೇದೆಗಳು ಅಲವತ್ತುಕೊಂಡಿದ್ದಾರೆ. ರಾಜ್ಯ ಸರ್ಕಾರ ಸದ್ಯ 16 A ಕಾಲಂ ನ್ನು ತಿದ್ದುಪಡಿ ಮಾಡಿರೋದು ಸಾಕಷ್ಟು ಪೊಲೀಸರ ಆಕ್ರೋಶಕ್ಕೆ ಕಾರಣವಾಗಿದೆ. ಏನದು ತಿದ್ದುಪಡಿ..? ಈ ಹಿಂದೆ 16A ಕಾಲಂ ಅಡಿಯಲ್ಲಿ ಅಂತರ್ ಜಿಲ್ಲಾ ವರ್ಗಾವಣೆಗೆ ಬಲಿಷ್ಟ ಕಾನೂನು...

Post
ಈ ಮಕ್ಕಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾ..? ಮಕ್ಕಳ ಕಲ್ಯಾಣದ ಹೊಣೆ ಹೊತ್ತ ಅಧಿಕಾರಿಗಳೇ ಗಮನಿಸಿ, ಒಣಗುತ್ತಿವೆ ಕಂದಮ್ಮಗಳು..!

ಈ ಮಕ್ಕಳು ಬಡವರ ಹೊಟ್ಟೆಯಲ್ಲಿ ಹುಟ್ಟಿದ್ದೇ ತಪ್ಪಾ..? ಮಕ್ಕಳ ಕಲ್ಯಾಣದ ಹೊಣೆ ಹೊತ್ತ ಅಧಿಕಾರಿಗಳೇ ಗಮನಿಸಿ, ಒಣಗುತ್ತಿವೆ ಕಂದಮ್ಮಗಳು..!

ಮುಂಡಗೋಡ: ಸರ್ಕಾರ ಬಡ ಮಕ್ಕಳಿಗೆ ಅಂತಾ ಸಾಕಷ್ಟು ಯೋಜನೆಗಳನ್ನ ಜಾರಿಗೆ ತಂದಿದೆ. ಅದ್ರಲ್ಲೂ ಹಳ್ಳಿಗಾಡಿನ ಕಂದಮ್ಮಗಳಿಗೆ ಯಾವುದೇ ಅಪೌಷ್ಟಿಕತೆ ಬರದೆ ಇರಲಿ ಅಂತಾ ಅಂಗನವಾಡಿಗಳ ಮೂಲಕ ಸಾಕಷ್ಟು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಅಲ್ಲದೇ ವಲಸೆ ಬರುವ ಕುಟುಂಬಗಳ ಮಕ್ಕಳಿಗಾಗೇ ಆಯಾ ವ್ಯಾಪ್ತಿಯ ಅಂಗನವಾಡಿಗಳ ಮೂಲಕ ವಿಶೇಷ ಕಾಳಜಿಗಳನ್ನೂ ವ್ಯವಸ್ಥೆ ಮಾಡಿದೆ. ಒಣಗುತ್ತಿವೆ ಕಂದಮ್ಮಗಳು..! ಆದ್ರೆ ಮುಂಡಗೋಡ ತಾಲೂಕಿನ ಅಧಿಕಾರಿಗಳಿಗೆ ಮಾತ್ರ ಇದೇಲ್ಲ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ತಾಲೂಕಿನಲ್ಲಿ ಸದ್ಯ ಕಬ್ಬು ಕಟಾವು ಮಾಡಲು ದೂರದ ಜಿಲ್ಲೆಗಳಿಂದ ಬಂದ ಆ...

Post
ಇಂದೂರಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ..!

ಇಂದೂರಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ..!

ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾಗಿದ್ದಾನೆ. ಇಂದೂರು ಗ್ರಾಮದ ಹೊರವಲಯದಲ್ಲಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಹ್ಮದ್ ಸಾಬ್ ಲಾಲ್ ಸಾಬ್ ಮುಲ್ಲಾನವರ್ (47) ಎಂಬುವವನೇ ನೇಣಿಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಟಿಬೇಟಿಯ‌ನ್ ಕಾಲೋನಿ ಬಳಿ‌ ಮರಕ್ಕೆ ಡಿಕ್ಕಿ ಹೊಡೆದ KTM ಬೈಕ್, ಮುಂಡಗೋಡಿನ ಯುವಕ ಸ್ಥಳದಲ್ಲೇ ಸಾವು..!

ಮುಂಡಗೋಡ ಸಮೀಪದ ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಬಳಿ ಬೈಕ್ ಅಪಘಾತವಾಗಿದೆ. ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮುಂಡಗೋಡ ಪಟ್ಟಣದ ಸಂಜು ನರಸಪ್ಪ ಕಳಲಕೊಂಡ(32) ಮೃತ ಬೈಕ್ ಸವಾರ. ಯಲ್ಲಾಪುರ ಕಡೆಯಿಂದ ಮುಂಡಗೋಡ ಕಡೆ ಬರುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ನಿಯಂತ್ರಣ ತಪ್ಪಿದ ಕೆಟಿಎಂ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಕೂಡ ನುಜ್ಜುಗುಜ್ಜಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು...

Post
ಪಾಳಾ ಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಮಟ ಮಟ ಮಟ್ಕಾ, ಅಸಲು, ದಂಧೆ ನಡಿತಿರೋದು ಯಾರ ನೆರಳಲ್ಲಿ ಗೊತ್ತಾ..? “ಮಟ್ಕಾಲಿ”ಯ ಅಡ್ಡಕಸುಬಿಗೆ ಶ್ರೀ ರಕ್ಷೆ ಯಾರದ್ದು..?

ಪಾಳಾ ಭಾಗದಲ್ಲಿ ಹೆಜ್ಜೆ ಹೆಜ್ಜೆಗೂ ಮಟ ಮಟ ಮಟ್ಕಾ, ಅಸಲು, ದಂಧೆ ನಡಿತಿರೋದು ಯಾರ ನೆರಳಲ್ಲಿ ಗೊತ್ತಾ..? “ಮಟ್ಕಾಲಿ”ಯ ಅಡ್ಡಕಸುಬಿಗೆ ಶ್ರೀ ರಕ್ಷೆ ಯಾರದ್ದು..?

ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಮೇಡಂ ವರ್ಗಾವಣೆಯಾದ ಗಳಿಗೆಯಿಂದಲೇ ಅಕ್ರಮ ದಂಧೆಗಳು ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿವೆ. ಅದ್ರಂತೆ ಮುಂಡಗೋಡ ತಾಲೂಕಿನಲ್ಲಿ ಈಗ ಮತ್ತೆ ಮಟ್ಕಾ ಅನ್ನೊ ದಂಧೆ ಹೆಜ್ಜೆ ಹೆಜ್ಜೆಗೂ ಬಡವರ ರಕ್ತ ಹೀರುತ್ತಿದೆ. ಅಂದಹಾಗೆ, ಇದು ಉತ್ತರ ಕನ್ನಡಕ್ಕೆ‌ ನೂತನ ಎಸ್ಪಿಯಾಗಿ ಬಂದಿರೋ ಎನ್.ವಿಷ್ಣುವರ್ಧನ್ ಸಾಹೇಬ್ರಿಗೆ “ಪಬ್ಲಿಕ್ ಫಸ್ಟ್” ನೀಡುತ್ತಿರೋ “ಫಸ್ಟ್ ಇನ್ಪರ್ಮೇಶನ್ ರಿಪೋರ್ಟ್” ಅಂದ್ರೆ ಮೊದಲ FIR ಮಟ್ಕಾ ಅಡ್ಡೆಗಳು..! ಎಸ್ಪಿ ಸಾಹೇಬ್ರೆ, ಈಗ್ಗೆ ಒಂದು ವರ್ಷವಾಯ್ತು. ಬಹುತೇಕ‌ ಮುಂಡಗೋಡ...

Post
ಮುಂಡಗೋಡ ಪೊಲೀಸ್ ಪೇದೆ ಅಣ್ಣಪ್ಪ ಬುಡಗೇರಗೆ “ತಿಂಗಳ ಅತ್ಯುತ್ತಮ ಸಾಧಕ” ಗೌರವ

ಮುಂಡಗೋಡ ಪೊಲೀಸ್ ಪೇದೆ ಅಣ್ಣಪ್ಪ ಬುಡಗೇರಗೆ “ತಿಂಗಳ ಅತ್ಯುತ್ತಮ ಸಾಧಕ” ಗೌರವ

ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಅಣ್ಣಪ್ಪಾ ಬುಡಗೇರ್ ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಬಳಗದಿಂದ ಗೌರವ ದೊರೆತಿದೆ. ಶಿರಸಿ ವಿಭಾಗದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದ ಕಾರಣ “ತಿಂಗಳ ಅತ್ಯುತ್ತಮ ಸಾಧಕ” ಪ್ರಮಾಣಪತ್ರ ಲಭಿಸಿದೆ. ಶಿರಸಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್, ಪೇದೆ ಅಣ್ಣಪ್ಪ ಬುಡಗೇರ್ ಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಿರ್ವಹಿಸಿದ ಅತ್ಯುತ್ತಮ‌ ಸೇವೆ ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ...

Post
ನಂದಿಗಟ್ಟಾದ ಗ್ರಾಮ ಪಂಚಾಯತಿ ಪಕ್ಕದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ‌‌..!

ನಂದಿಗಟ್ಟಾದ ಗ್ರಾಮ ಪಂಚಾಯತಿ ಪಕ್ಕದಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ‌‌..!

ಮುಂಡಗೋಡ ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ವ್ಯಕ್ತಿಯೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ. ಗ್ರಾಮ ಪಂಚಾಯತಿ ಪಕ್ಕದಲ್ಲೇ ಬಾಡಿಗೆ ರೂಂ ಹಿಂದಿನ ಕಿಡಕಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹುಬ್ಬಳ್ಳಿ ಮೂಲದ ಪ್ರಭಾಕರ್ (45)ಎಂಬ ವ್ಯಕ್ತಿಯೇ ನೇಣಿಗೆ ಶರಣಾದವನು ಎನ್ನಲಾಗಿದೆ. ಈತ ಕಳೆದ ಕೆಲ ತಿಂಗಳ ಹಿಂದಷ್ಟೇ ನಂದಿಗಟ್ಟಾ ಗ್ರಾಮದಲ್ಲಿ ಬಂದು ಅಂಗಡಿ ನಡೆಸುತ್ತಿದ್ದ. ಆದ್ರೆ ಅದೇನು ಕಾರಣವೋ ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಾರೆ....

Post
ನಂದಿಗಟ್ಟಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಹೆಣವಾಗಿ ಪತ್ತೆ..!

ನಂದಿಗಟ್ಟಾದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಕೆರೆಯಲ್ಲಿ ಹೆಣವಾಗಿ ಪತ್ತೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಗ್ರಾಮದ ಹೊರವಲಯದ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು ದುರ್ನಾತ ಬೀರುತ್ತಿದೆ. ಅಂದಹಾಗೆ, ಕಳೆದ ಎರಡು ದಿನಗಳಿಂದ ನಂದಿಗಟ್ಟಾ ಗ್ರಾಮದ ಮಾಬುಸಾಬ್ ಅತ್ತಿವೇರಿ (47) ಎಂಬುವ ವ್ಯಕ್ತಿ ನಾಪತ್ತೆಯಾಗಿದ್ದ. ಅನಾರೋಗ್ಯದಿಂದ ಬಳಲುತ್ತಿದ್ದ ಮಾಬುಸಾಬ್ ಯಾವಾಗಲೂ ಮನೆಯಲ್ಲಿಯೇ ಇರುತ್ತಿದ್ದ, ಆದ್ರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಏಕಾಏಕಿ ನಾಪತ್ತೆಯಾದವನು ಈಗ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ಮುಂಡಗೋಡ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ರವಾನಿಸಿದ್ದು ಶವ ಹೊರ ತೆಗೆಯುವ ಕಾರ್ಯ...

error: Content is protected !!