ಮುಂಡಗೋಡ ಪೊಲೀಸ್ ಪೇದೆ ಅಣ್ಣಪ್ಪ ಬುಡಗೇರಗೆ “ತಿಂಗಳ ಅತ್ಯುತ್ತಮ ಸಾಧಕ” ಗೌರವ

ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಅಣ್ಣಪ್ಪಾ ಬುಡಗೇರ್ ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಬಳಗದಿಂದ ಗೌರವ ದೊರೆತಿದೆ. ಶಿರಸಿ ವಿಭಾಗದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದ ಕಾರಣ “ತಿಂಗಳ ಅತ್ಯುತ್ತಮ ಸಾಧಕ” ಪ್ರಮಾಣಪತ್ರ ಲಭಿಸಿದೆ.

ಶಿರಸಿಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಉತ್ತರ ಕನ್ನಡ ಎಸ್ಪಿ ವಿಷ್ಣುವರ್ಧನ್, ಪೇದೆ ಅಣ್ಣಪ್ಪ ಬುಡಗೇರ್ ಗೆ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ. ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ನಿರ್ವಹಿಸಿದ ಅತ್ಯುತ್ತಮ‌ ಸೇವೆ ಪರಿಗಣಿಸಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಈ ಗೌರವ ಪ್ರಮಾಣ ಪತ್ರ ನೀಡಿದೆ.

error: Content is protected !!