ಮುಂಡಗೋಡ: ತಾಲೂಕಿನ ಮೂಡಸಾಲಿ ಕ್ರಾಸ್ ಬಳಿ ಬಾರೀ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದಂತಾಗಿದೆ. ಎತ್ತಿನ ಚಕ್ಕಡಿಗೆ KSRTC ಬಸ್ ಹಿಂದಿನಿಂದ ಡಿಕ್ಕಿಯಾದ ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಕಾತೂರು ಕಡೆ ಹೊರಟಿದ್ದ ಚಕ್ಕಡಿಗೆ ಹುಬ್ಬಳ್ಳಿ ಕಡೆಯಿಂದ ಹೊರಟಿದ್ದ ಸಾರಿಗೆ ಬಸ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರಿಗೆ ಗಾಯವಾಗಿದೆ. ಕಾತೂರು ಗ್ರಾಮದ ಸಂತೋಷ ತಿಪ್ಪಣ್ಣ ಹರಿಜನ (30), ಮಂಜುನಾಥ್ ಬಸಪ್ಪ ಡೊಳ್ಳೇಶ್ವರ್ (38) ಎಂಬುವರಿಗೆ ಗಾಯವಾಗಿದೆ. KSRTC ಚಾಲಕನ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರೀ ಅವಘಡ ತಪ್ಪಿದಂತಾಗಿದೆ. ತಡರಾತ್ರಿಯಲ್ಲಿ ಘಟನೆ ನಡೆದಿದ್ದು ತಕ್ಷಣವೇ 108 ಅಂಬ್ಯುಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ತಾಲೂಕಾಸ್ಪತ್ರೆಗೆ ಸಾಗಿಸಲಾಗಿದೆ. 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಸಿ.ಬಳೂರ್ ಹಾಗೂ ಚಾಲಕ ಕೆಂಚೇಶ್ ಇ.ಎನ್. ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಮುಡಸಾಲಿ ಬಳಿ ಎತ್ತಿನ ಚಕ್ಕಡಿಗೆ ಹಿಂದಿನಿಂದ ಗುದ್ದಿದ KSRTC ಬಸ್, ಇಬ್ಬರಿಗೆ ಗಾಯ..! ತಪ್ಪಿದ ಭಾರೀ ಅನಾಹುತ
ಬಡ್ಡಿಗೇರಿ ಅಪಘಾತ ಪ್ರಕರಣ: ಚಾಲಕನ ವಿರುದ್ಧ ಕೇಸ್, ಟಾಟಾ ಎಸ್ ನಲ್ಲಿ ಜನರನ್ನ ಸಾಗಿಸುವಂತಿಲ್ಲ, ಪೊಲೀಸರ ಖಡಕ್ ಕ್ರಮ..!
ಮುಂಡಗೊಡ: ತಾಲೂಕಿನ ಬಡ್ಡಿಗೇರಿ ಕ್ರಾಸ್ ಬಳಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಟಾ ಎಸ್ ವಾಹನ ಚಾಲಕನ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಟಾ ಏಸ್ ವಾಹನ ನಂ-ಕೆಎ-25/ಸಿ-5779 ನೇದರ ಚಾಲಕ ಮುಂಡಗೋಡ ವಡ್ಡರ ಓಣಿಯ ಮಂಜುನಾಥ ಈರಪ್ಪ ಬೋವಿ ಎಂಬುವನ ಮೇಲೆ ಪ್ರಕರಣ ದಾಖಲಾಗಿದ್ದು, ಈತನು ತನ್ನ ಟಾಟಾ ಏಸ್ ವಾಹನವನ್ನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿ, ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದು, ಅಲ್ಲದೆ ಒಟ್ಟೂ 21 ಜನರಿಗೆ ಭಾರಿ ಗಾಯ ಪಡಿಸಿರುತ್ತಾನೆ ಅಂತಾ ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ. ಮುಂಡಗೋಡ ಪೊಲೀಸರ ಖಡಕ್ ಕ್ರಮ..! ಇನ್ನು ಟಾಟಾ ಎಸ್ ವಾಹನವು ಗೂಡ್ಸ್ ವಾಹನವಾಗಿದ್ದು, ಇದರಲ್ಲಿ ಸರಕನ್ನು ಮಾತ್ರ ಸಾಗಿಸಲು ಪರವಾನಿಗೆ ಇರುತ್ತದೆ. ಇದರಲ್ಲಿ ಸಾರ್ವಜನಿಕರನ್ನು ಕೂಡಿಸಿಕೊಂಡು ವಾಹನ ಚಲಾಯಿಸಿ ಅಪಘಾತ ಉಂಟಾದಲ್ಲಿ ಮೃತರ ಕುಟುಂಬಕ್ಕೆ ಹಾಗೂ ಗಾಯಾಳು ಕುಟುಂಬಕ್ಕೆ ವಿಮೆ ಇಲಾಖೆಯಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಮತ್ತು ಚಾಲಕನ ಚಾಲನಾ ಪ್ರಮಾಣ ಪತ್ರ ಹಾಗೂ ವಾಹನ ನೊಂದಣಿ ಪ್ರಮಾಣ...
ಬಡ್ಡಿಗೇರಿ ಕ್ರಾಸ್ ಬಳಿ ಟಾಟಾ ಎಸ್ ಭೀಕರ ಅಪಘಾತ, ಓರ್ವ ಸ್ಥಳದಲ್ಲೇ ಸಾವು,15 ಜನರಿಗೆ ಗಾಯ, ಹಲವರ ಸ್ಥಿತಿ ಗಂಭೀರ..!
ಮುಂಡಗೋಡ: ತಾಲೂಕಿನ ಯಲ್ಲಾಪುರ ರಸ್ತೆಯ ಬಡ್ಡಿಗೇರಿ ಕ್ರಾಸ್ ಬಳಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟಾಟಾ ಎಸ್ ವಾಹನ ಸ್ಟೆರಿಂಗ್ ಕಟ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು ಸುಮಾರು 15 ಕ್ಕೂ ಹೆಚ್ಚು ಜನರಿಗೆ ಗಾಯವಾದ ದಾರುಣ ಘಟನೆ ನಡೆದಿದೆ. ಮಾಂಬು ಗಾವಡೆ (24) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಗಾಯಾಳುಗಳನ್ನು ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಅದ್ರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದ್ದು, ಅವ್ರನ್ನು ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಅಂದಹಾಗೆ, ಬಡ್ಡಿಗೇರಿಯಿಂದ ಕುಸೂರಿಗೆ ಕಾರ್ಮಿಕರನ್ನು ಕರೆತರುತ್ತಿದ್ದ ಟಾಟಾ ಎಸ್ ವಾಹನ ಚಲಿಸುತ್ತಿದ್ದಾಗಲೇ ಸ್ಟೇರಿಂಗ್ ಕಟ್ ಆಗಿತ್ತು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ವಾಹನ ಪಲ್ಟಿಯಾಗಿ ಅವಘಡ ಸಂಭವಿಸಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇನ್ನು ತಾಲೂಕಾಸ್ಪತ್ರೆಗೆ ಪಿಎಸ್ಐ ಬಸವರಾಜ್ ಮಬನೂರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮಳಗಿ ಡ್ಯಾಂನಲ್ಲಿ ಕೊಲೆಯಾದ್ನಾ ಭಟ್ಕಳದ ವಿನಾಯಕ..? ಆ ಸಾವಿನ ಸುತ್ತ ಕುಟುಂಬಸ್ಥರ ಅನುಮಾನಗಳೇನು..?
ಮುಂಡಗೋಡ: ಮಳಗಿ ಧರ್ಮಾ ಜಲಾಶಯದ ಒಡಲಿನಲ್ಲಿ ಕ್ರೌರ್ಯಗಳೂ ನಡಿತಿವೆಯಾ..? ನಿಜಕ್ಕೂ ಆ ಒಂದು ಸಾವು, ಸಾವಿನಾಚೆಗಿನ ಬಿಡಿಸಲಾಗದ ಸತ್ಯಗಳು ಎಂತವರನ್ನೂ ಒಂದುಕ್ಷಣ ತಲ್ಲಣಗೊಳಿಸ್ತಿವೆ. ಭಟ್ಕಳದಿಂದ ಶಿರಸಿ ಮಾರಿ ಜಾತ್ರೆಗೆ ಬಂದಿದ್ದ ಯುವಕ ನೀರುಪಾಲಾಗಿದ್ದರ ಹಿಂದೆ, ಬರೀ ಅನುಮಾನಗಳೇ ಹಾಸು ಹೊಕ್ಕಾಗಿವೆ. ಮಗನನ್ನ ಕಳೆದುಕೊಂಡ ಕುಟುಂಬವೀಗ ಅಕ್ಷರಶಃ ಅನಾಥವಾಗಿದೆ. ಅವತ್ತು ಮಾ.22 ಭಟ್ಕಳದ ಶಿರಾಲಿ ಮೂಲದ ವಿನಾಯಕ ಜನ್ನು ಎನ್ನುವ ಯುವಕ ಮಾರ್ಚ್ 22ರಂದು ಇದೇ ಮಳಗಿಯ ಧರ್ಮಾ ಜಲಾಶಯದಲ್ಲಿ ಹೆಣವಾಗಿ ಸಿಕ್ಕಿದ್ದ. ತನ್ನ ಗೆಳೆಯರೊಂದಿಗೆ ಶಿರಸಿ ಜಾತ್ರೆಗೆ ಅಂತಾ ಬಂದಿದ್ದವನು ಧರ್ಮಾ ಜಲಾಶಯದಲ್ಲಿ ಸ್ನಾನ ಮಾಡಲು ಇಳಿದು, ಅನಾಮತ್ತಾಗಿ ನೀರಲ್ಲಿ ಮುಳುಗಿ ಹೆಣವಾಗಿದ್ದ. ಹೀಗಾಗಿ, ಮುಂಡಗೋಡ ಪೊಲೀಸರು ಆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನೂ ಶುರು ಮಾಡಿದ್ರು. ಸಾಲು ಸಾಲು ಅನುಮಾನ..! ಹಾಗೆ, ಶಿರಸಿ ಜಾತ್ರೆಗೆ ಬಂದವನು ಮಳಗಿ ಧರ್ಮಾ ಜಲಾಶಯದಲ್ಲಿ ಶವವಾಗಿ ಸಿಕ್ಕ ಗಳಿಗೆಯಿಂದಲೇ, ಆತನ ಕುಟುಂಬ ವಿಲ ವಿಲ ಒದ್ದಾಡುತ್ತಿದೆ. ನೀರನ್ನು ಕಂಡ್ರೇ ಮಾರುದ್ದ ಹಾಯುವ ವ್ಯಕ್ತಿ ಅದು...
ಅಗಡಿಯಲ್ಲಿ ವಿದ್ಯುತ್ ತಂತಿ ತುಳಿದು ಬಾಲಕ ದಾರುಣ ಸಾವು, ಅದೃಷ್ಟವಶಾತ್ ಬಚಾವಾದ ಮತ್ತೋರ್ವ ಬಾಲಕ..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಭಾರೀ ಮನಕಲುಕುವ ಘಟನೆ ನಡೆದಿದೆ. ಹರಿದು ಬಿದ್ದಿದ್ದ ವಿದ್ಯುತ್ ತಂತಿ ಹಿಡಿದ ಪರಿಣಾಮ 13 ವರ್ಷದ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮತ್ತೊರ್ವ ಸಹೋದರ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಷ್ಪಕ್ ಮೊಹ್ಮದ್ ಷರೀಪ್ ಚಪಾತಿ (13) ಎಂಬ ಬಾಲಕನೇ ಸಾವನ್ನಪ್ಪಿದ ದುರ್ದೈವಿಯಾಗಿದ್ದಾನೆ. ಬೇಲಿಯ ಮೇಲೆ ವಿದ್ಯುತ್ ಲೈನ್ ಹರಿದು ಬಿದ್ದಿದೆ. ಇದೇ ವೇಳೆ ಅಷ್ಪಕ್ ಹಾಗೂ ಆತನ ಮತ್ತೊರ್ವ ಸಹೋದರ ಮಹ್ಮದ್ ಜಾಫರ್ ಚಪಾತಿ ಎನ್ನುವ ಬಾಲಕ ಅದೇ ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಬಾಲಕ ಅಷ್ಪಕ್ ಬೇಲಿಯನ್ನು ಮುಟ್ಟಿದ್ದಾನೆ. ಈ ವೇಳೆ ತಕ್ಷಣವೇ ಆತನಿಗೆ ವಿದ್ಯುತ್ ಪ್ರವಹಿಸಿ ವಿಲ ವಿಲ ಒದ್ದಾಡಿದ್ದಾನೆ. ಅದನ್ನ ಕಂಡು ಅವನ ಜೊತೆಗೆ ಇದ್ದ ಮತ್ತೊಬ್ಬ ಬಾಲಕ ಆತನನ್ನು ಮುಟ್ಟಿದ್ದಾನೆ. ಹೀಗಾಗಿ ಆತನಿಗೂ ವಿದ್ಯುತ್ ಪ್ರವಹಿಸಿದೆ. ಅಷ್ಟೊತ್ತಿಗಾಗಲೇ ಇದನ್ನೇಲ್ಲ ಗಮನಿಸಿದ ಜನ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೀಗಾಗಿ, ಮತ್ತೊರ್ವ ಬಾಲಕ ಬಚಾವ್ ಆಗಿದ್ದಾನೆ. ಅಷ್ಟೊತ್ತಿಗಾಗಲೇ ಅಷ್ಪಕ್ ಎನ್ನುವ ಬಾಲಕನಿಗೆ ವಿದ್ಯುತ್ ಪ್ರವಹಿಸಿ ಸಂಪೂರ್ಣ...
ಸನವಳ್ಳಿಯಲ್ಲಿ ಗದ್ದೆಯ ಬೇಲಿಗೆ ಕೊಂಬು ಸಿಲುಕಿಸಿಕೊಂಡು ಅಪಾಯದಲ್ಲಿದ್ದ ಜಿಂಕೆಯ ರಕ್ಷಣೆ..!
ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೇಲಿಗೆ ಸಿಲುಕಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಗಂಡು ಜಿಂಕೆಯನ್ನು ರಕ್ಷಣೆ ಮಾಡಲಾಗಿದೆ. ಸನವಳ್ಳಿ ಗ್ರಾಮದ ರೈತ ಕೃಷ್ಣಪ್ಪ ಎಲಿವಾಳ ಎಂಬುವವರ ಜಮೀನಿನ ಬೇಲಿಗೆ ಜಿಂಕೆ ತನ್ನ ಕೊಂಬು ಸಿಲುಕಿಸಿಕೊಂಡು ಜೀವ ಕಳೆದುಕೊಳ್ಳುವ ಅಪಾಯದಲ್ಲಿತ್ತು. ಹೀಗಾಗಿ, ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ ಸ್ಥಳಕ್ಕೆ ಆಗಮಿಸಿ ಅಪಾಯದಲ್ಲಿದ್ದ ಗಂಡು ಜಿಂಕೆಯ ರಕ್ಷಣೆ ಮಾಡಿದ್ದಾರೆ. ಬೇಲಿಯಿಂದ ಕೊಂಬು ಬಿಡಿಸಿದ ತಕ್ಷಣವೇ ಬದುಕಿದೆಯಾ ಬಡಜೀವ ಅಂತಾ ಜಿಂಕೆ ಅಲ್ಲಿಂದ ಕಾಡಿನೊಳಕ್ಕೆ ಕಾಲ್ಕಿತ್ತಿದೆ. ಜಿಂಕೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿಯವರಿಗೆ, ಅರಣ್ಯ ರಕ್ಷಕರುಗಳಾದ ರಾಜು ಪರೀಟ, ಸಾಗರ ಕೊಣ್ಣೂರ, ಅರಣ್ಯ ವೀಕ್ಷಕ ರುದ್ರಪ್ಪ ಸಹಾಯ ಮಾಡಿದ್ದಾರೆ.
ಮುಂಡಗೋಡ ತಹಶೀಲ್ದಾರ್ ವಿರುದ್ಧ ದಲಿತರ ಅನಿರ್ಧಿಷ್ಟ ಧರಣಿ, ಸಾಹೇಬ್ರೇ ಇನ್ನೂ ಎಷ್ಟು ದಿನ..?
ನಿಜ, ಮುಂಡಗೋಡಿನ ಇತಿಹಾಸದಲ್ಲೇ ಇದು ಬಹುದೊಡ್ಡ ನಾಚಿಗ್ಗೇಡಿನ ಸಂಗತಿ ಅಂದ್ರೂ ತಪ್ಪಿಲ್ಲ ಅನಿಸತ್ತೆ. ತಾಲೂಕಿನ ದಂಡಾಧಿಕಾರಿಯೊಬ್ಬರ ವಿರುದ್ಧ ಈ ಪರಿಯ ಹೋರಾಟ ಬಹುಶಃ ಹಿಂದೆ ಎಂದೂ ನಡೆದಿರಲಿಲ್ಲವೆನೋ..? ಇಷ್ಟಾದ್ರೂ ಆ ಅಧಿಕಾರಿಯನ್ನ ಬಚಾವ್ ಮಾಡುವಲ್ಲಿ ತೆರೆಮರೆಯ ಕಸರತ್ತು ನಡೆಸ್ತಿರೋ “ದೊಡ್ಡ”ವರಿಗೆ ಏನೂ ಅನಿಸ್ತಾನೇ ಇಲ್ವಾ..? ಅದೂ ಹೋಗಲಿ, ತಮ್ಮ ಮೇಲೆ ಅಂತಹದ್ದೊಂದು ಭಯಂಕರ ಆರೋಪ ಬಂದು, ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಗಜ್ಜಾಹೀರಾದಾಗಲೂ ಆ ಅಧಿಕಾರಿಗೆ ಮುಂಡಗೋಡಿಗರ ತಾಳ್ಮೆ ಅರ್ಥ ಆಗ್ತಿಲ್ವಾ..? ಇದು ಬಹುತೇಕ ಮುಂಡಗೋಡಿನ ಪ್ರಜ್ಞಾವಂತರ ಪ್ರಶ್ನೆ..! ಹೀಗಾಗಿನೇ, ನಿನ್ನೆಯಿಂದ ದಲಿತ ಸಂಘಟನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯ ಎದುರು ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಮಾಡಬೇಕಾಯ್ತಾ..? ಸಹಜ ತಾನೇ..? ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಹುದ್ದೆ ಪಡೆದಿರೋ ಆರೋಪ ಕೇಳಿ ಬಂದ ಹಿನ್ನೆಲೆ, ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ಅವ್ರನ್ನ ಬಂಧಿಸಲು ಬಂದಿದ್ರು. ಆ ಹೊತ್ತಲ್ಲಿ ಇಡೀ ತಾಲೂಕಿನ...
ಈಶ್ವರಪ್ಪ ತಲೆದಂಡ ಬಹುತೇಕ ಫಿಕ್ಸ್..? ಚುನಾವಣೆ ವರ್ಷವೇ ಬಿಜೆಪಿಗೆ ಭಾರೀ ಮುಜುಗರ..!
ಬೆಂಗಳೂರು: ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 40% ಕಮೀಷನ್ ಆರೋಪ ಹೊತ್ತಿರೋ ಸಚಿವ ಈಶ್ವರಪ್ಪ ಬಹುತೇಕ ಸಚಿವ ಸ್ಥಾನ ಕಳೆದುಕೊಳ್ಳೊ ಹಂತಕ್ಕೆ ಬಂದು ನಿಂತ್ರಾ..? ಇಂತಹದ್ದೊಂದು ಪ್ರಶ್ನೆ ನಿನ್ನೆ ರಾತ್ರಿಯಿಂದಲೂ ಬಿಜೆಪಿಯೊಳಗಿನ ಬೆಳವಣಿಗೆ ನೋಡಿದ್ರೆ ಸ್ಪಷ್ಟವಾಗುತ್ತಿದೆ. ಚುನಾವಣೆ ವರ್ಷದಲ್ಲಿ ಹಿರಿಯ ಸಚಿವರೊಬ್ಬರ ತಲೆದಂಡ ಆಗೋದು ಬಹುತೇಕ ಖಚಿತ ಅನ್ನೊ ಸ್ಪಷ್ಟ ಸೂಚನೆಗಳು ಸಿಗ್ತಿವೆ. ಹೈಕಮಾಂಡ್ ಗೆ ವರದಿ..! ಇನ್ನು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿನ್ ಟೂ ಪಿನ್ ಮಾಹಿತಿ ಕೇಳಿದ್ದ ಜೆ.ಪಿ. ನಡ್ಡಾ ಕಚೇರಿಗೆ ರಾಜ್ಯ ಬಿಜೆಪಿ ಸಂಪೂರ್ಣ ವರದಿ ರವಾನಿಸಿದೆ. ಹೀಗಾಗಿ, ಇಂದು ಸಂಜೆಯಷ್ಟೊತ್ತಿಗೆ ಸಚಿವ ಈಶ್ವರಪ್ಪರ ತಲೆದಂಡವಾಗೋದು ಬಹುತೇಕ ಖಚಿತ ಅನ್ನೋ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮೈಸೂರಿನಲ್ಲಿರೋ ಸಚಿವ ಈಶ್ವರಪ್ಪಗೆ ಸಿಎಂ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬರಲು ತಿಳಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಪ್ರವಾಸದಲ್ಲಿರೋ ಸಿಎಂ ಬಸವರಾಜ್ ಬೊಮ್ಮಾಯಿ ಮದ್ಯಾಹ್ನದ ಹೊತ್ತಿಗೆ ಬೆಂಗಳೂರು ತಲುಪೊ ಸಾಧ್ಯತೆಯಿದ್ದು, ಈಶ್ವರಪ್ಪ ಜೊತೆ...
ಹನುಮಾಪುರದಲ್ಲಿ ಜಲಮಿಷನ್ ಕಾಮಗಾರಿ ಪೈಪು ಮೈಮೇಲೆ ಬಿದ್ದು ಕಾರ್ಮಿಕನ ದಾರುಣ ಸಾವು..!
ಮುಂಡಗೋಡ: ತಾಲೂಕಿನ ಹನುಮಾಪುರದ ಬಳಿ ಭಾರೀ ದುರಂತವೊಂದು ಸಂಭವಿಸಿದೆ. ಜಲಮಿಷನ್ ಯೋಜನೆಯ ಕಾಮಗಾರಿ ವೇಳೆ ಬೃಹತ್ ಪೈಪು ಮೈಮೇಲೆ ಬಿದ್ದು ಬಿಹಾರ ಮೂಲದ ಕಾರ್ಮಿಕ ಮೃತಪಟ್ಟಿದ್ದಾನೆ. ಮೂಲತಃ ಬಿಹಾರದವನಾದ ರಾಜು ಯಾದವ್ (35) ಮೃತಪಟ್ಟ ದುರ್ಧೈವಿಯಾಗಿದ್ದು, ಇಂದು ಕಾರ್ಯನಿರ್ವಹಿಸುವ ವೇಳೆ ಆಕಸ್ಮಿಕವಾಗಿ ಬೃಹತ್ ಪೈಪ್ ಆಯತಪ್ಪಿ ಕಾರ್ಮಿಕನ ಮೈಮೇಲೆ ಬಿದ್ದಿದೆ. ಹೀಗಾಗಿ, ಕಾರ್ಮಿಕನ ದೇಹ ಚಿದ್ರಗೊಂಡಿದೆ. ಸದ್ಯ ಮುಂಡಗೋಡ ಪಿಎಸ್ ಐ ಬಸವರಾಜ್ ಮಬನೂರು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮುಂಡಗೋಡ ತಾಲೂಕಿನ ಹಲವೆಡೆ ಆಲಿಕಲ್ಲು, ಗಾಳಿ ಸಮೇತ ಭಾರೀ ಮಳೆ..!
ಮುಂಡಗೋಡ: ತಾಲೂಕಿನಲ್ಲಿ ಭಾರೀ ಮಳೆಯಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ ಹಲವು ಕಡೆ ಗಾಳಿ, ಗುಡುಗು, ಮಿಂಚು ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಮಳೆಯ ಕಾರಣಕ್ಕೆ ಬಿಸಿಲ ಬೇಗೆಯಿಂದ ಬಸವಳಿದಿದ್ದ ತಾಲೂಕಿನ ಮಂದಿಗೆ ಮಳೆರಾಯ ಮತ್ತೆ ತಂಪೆರೆದಿದ್ದಾನೆ. ಮಳೆಯ ದೃಷ್ಯ ಕ್ಯಾಮೆರಾ ಕಣ್ಣಲ್ಲಿ.. ಅಲಿಕಲ್ಲು ಮಳೆ..! ಅಂದಹಾಗೆ, ಭರ್ಜರಿ ಮಳೆಗೂ ಮೊದಲು ಭಾರೀ ಗಾಳಿ ಬೀಸಿದೆ. ನಂತರ ಧಾರಾಕಾರ ಆಲಿಕಲ್ಲು ಬಿದ್ದಿವೆ. ಪರಿಣಾಮ ತಾಲೂಕಿನ ಮಾವು ಬೆಳೆಗಾರರಿಗೆ ತೀವ್ರ ಸಂಕಷ್ಟ ಎದುರಾದಂತೆ ಆಗಿದೆ. ಇನ್ನು ಭಾರೀ ಗಾಳಿ, ಮಳೆಯ ಕಾರಣಕ್ಕೆ ತಾಲೂಕಿನಾಧ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಎಲ್ಲೆಲ್ಲಿ ಮಳೆ ಅರ್ಭಟ..? ಮುಂಡಗೋಡ ಪಟ್ಟಣ, ಬಾಚಣಕಿ, ಅರಶಿಣಗೇರಿ, ಕೊಪ್ಪ ಇಂದೂರು, ನಂದಿಕಟ್ಟಾ, ಟಿಬೇಟಿಯನ್ ಕಾಲೋನಿ ಸೇರಿದಂತೆ ಹಲವೆಡೆ ಆಲಿಕಲ್ಲು ಸಮೇತ ಮಳೆಯಾಗಿದೆ.