ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ. 9 ತಿಂಗಳ ಹಿಂದೆ.. ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9 ತಿಂಗಳ ಹಿಂದೆ, ಅಂದ್ರೆ, 2021 ರ ಸೆಪ್ಟೆಂಬರ್ ತಿಂಗಳಲ್ಲಿ ಶವ ಸಿಕ್ಕಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸರು ಅವತ್ತೇ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಆದ್ರೆ ಇದುವರೆಗೂ ಆ ಶವ ಯಾರದ್ದು ಅನ್ನೋ ಸಣ್ಣದೊಂದು ಸುಳಿವೂ ಸಿಕ್ಕಿಲ್ಲ. ರಾಜ್ಯ ತಡಕಾಡಿದ್ರು.. ಅಂದಹಾಗೆ, ಹಾಗೆ ನದಿಯ ದಡದಲ್ಲಿ ಶವ ಸಿಕ್ಕ ಗಳಿಗೆಯಿಂದ ಇಲ್ಲಿಯವರೆಗೂ ಪೊಲೀಸರೇನು ಸುಮ್ಮನೆ ಕುಳಿತಿಲ್ಲ....
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!
ಸಚಿವ ಶಿವರಾಂ ಹೆಬ್ಬಾರ್ ಅದ್ಯಾಕೋ ಏನೋ ಕಾರ್ಯಕರ್ತರ ಮನಸಿನಾಳ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗ್ತಿದಾರಾ..? ಇಂತಹದ್ದೊಂದು ಅನುಮಾನ, ಕ್ಷೇತ್ರದ ಸದ್ಯದ ಸ್ಥಿತಿ ನೋಡಿದ್ರೆ ಎಂಥವರಿಗೂ ಅರ್ಥವಾಗ್ತಿದೆ. ಅಸಲು, ಸಚಿವರು ಮಾಡಿರೋ ಸಣ್ಣದೊಂದು ನಿರ್ಲಕ್ಷಕ್ಕೆ ಮುಂಡಗೋಡ ಪಟ್ಟಣ ಪಂಚಾಯತಿ ಸದ್ಯ ಕೊತ ಕೊತ ಕುದಿಯುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ. ಅವಿಶ್ವಾಸ ಮಂಡನೆಗೆ ಅರ್ಜಿ..! ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಅರ್ಜಿ ಸಲ್ಲಿಕೆಯಾಗಿದೆ. ಅದ್ಯಕ್ಷೆ ರೇಣುಕಾ ರವಿ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ್ ಹರ್ಮಲಕರ್ ವಿರುದ್ಧ ಅವಿಶ್ವಾಸಕ್ಕೆ ಅರ್ಜಿ ಸಲ್ಲಿಸಲಾಗಿದೆ. ಗಟ್ಟಿಯಾಗಿತ್ತು ಬಿಜೆಪಿ..! ಒಟ್ಟೂ 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ, ಮೂಲ ಬಿಜೆಪಿಗ 10 ಜನ ಸದಸ್ಯರಿದ್ದರು, ಆ ನಂತರದ ಬೆಳವಣಿಗೆಯಲ್ಲಿ ಶಿವರಾಮ್ ಹೆಬ್ಬಾರ್ ಬಳಗದಿಂದ ಗೆದ್ದು ಬಂದಿದ್ದ ನಾಲ್ವರು ಬಿಜೆಪಿ ಪಾಳಯ ಸೇರಿಕೊಂಡಿದ್ದರು. ಹೀಗಾಗಿ ಈ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಬಲ 14 ಕ್ಕೆ ಏರಿತ್ತು. ಕಮಲ ಪಡೆಗೆ ಗಟ್ಟಿ ನೆಲೆ ಸಿಕ್ಕಿತ್ತು. 15-...
ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!
ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿ ಸಮೀಪ ಕಣಬರಗಿ ಬಳಿ ಭೀಕರ ಅಪಘಾತವಾಗಿದೆ. ಕ್ರೂಸರ್ ನಾಲೆಗೆ ಉರುಳಿ ಬಿದ್ದ ಪರಿಣಾಮ, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎನ್ನಲಾಗಿದೆ. ಕೂಲಿ ಕೆಲಸಕ್ಕಾಗಿ ಕ್ರೂಸರ್ ವಾಹನದಲ್ಲಿ ಬೆಳಗಾವಿಯತ್ತ ಬರುತ್ತಿದ್ರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬಳ್ಳಾರಿ ನಾಲೆಗೆ ಕ್ರೂಸರ್ ವಾಹನ ಪಲ್ಟಿಯಾಗಿ ಬಿದ್ದು 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದಿನಗೂಲಿ ನೌಕರರು ರೈಲ್ವೆ ಬ್ರಿಡ್ಜ್ ಕಾಮಗಾರಿಗಾಗಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಗೋಕಾಕ್ ಹಾಗೂ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಟ್ರಾಫಿಕ್ ಜಾಮ್ ಆಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಗೂಡಂಗಡಿಯ ಮೇಲೆ ಪೊಲೀಸರ ದಾಳಿ, ಕೇಸು ದಾಖಲು..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಪಿಐ ಸಿದ್ದಪ್ಪ ಸಿಮಾನಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ, ಓರ್ವನ ಮೇಲೆ ಕೇಸು ದಾಖಲಿಸಲಾಗಿದೆ. ಅಗಡಿಯ ನಾಗರಾಜ್ ರೇಖಪ್ಪ ಲಮಾಣಿ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದ್ದು, ರಸ್ತೆ ಪಕ್ಕದ ಗೂಡಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಭಾರೀ ಮಳೆ ಗಾಳಿಗೆ, ಚಲಿಸುತ್ತಿದ್ದ ಓಮಿನಿ ಮೇಲೆ ಬಿದ್ದ ಮರ, ವಾಹನ ಜಖಂ..!
ಸಿದ್ದಾಪುರ: ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಗಾಳಿ ಸಮೇತ ಭಾರೀ ಮಳೆಯಾಗುತ್ತಿದೆ. ಪರಿಣಾಮ ಸಿದ್ದಾಪುರ ಪಟ್ಟಣದ ಬಳಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಉರುಳಿ ಬಿದ್ದಿದೆ. ಸಿದ್ದಾಪುರ ಹೊರವಲಯದಲ್ಲಿ ಚಲಿಸುತ್ತಿದ್ದ ಓಮಿನಿ ವಾಹನದ ಮೇಲೆ ಮರ ಬಿದ್ದಿದೆ. ವಿದ್ಯುತ್ ಕಂಬ ಇರೋ ಕಾರಣಕ್ಕೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಓಮಿನಿ ವಾಹನ ನುಜ್ಜುಗುಜ್ಜಾಗಿದ್ದು, ಓಮಿನಿಯಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಿದ್ದಾಪುರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..
ಮುಂಡಗೋಡ ತಾಲೂಕಿನಲ್ಲಿ ಜಿಪಂ, ತಾಪಂ ಕ್ಷೇತ್ರಗಳ ಮರುವಿಂಗಡನೆ, 4 ಜಿಪಂ ಕ್ಷೇತ್ರಗಳು ಚಾಲ್ತಿಗೆ..?
ಮುಂಡಗೋಡ; ತಾಲೂಕಿನಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ. ಬಹುತೇಕ ಕೋರ್ಟ್ ಆದೇಶದಂತೆ ಇನ್ನೇರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡಿಯೋದು ಬಹುತೇಕ ಫಿಕ್ಸ್ ಆದಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡ ತಾಲೂಕಿನಲ್ಲಿ ಮೂರು ಇದ್ದ ಜಿಪಂ ಕ್ಷೇತ್ರಗಳನ್ನ ಮರು ವಿಂಗಡನೆ ಮಾಡಲಾಗಿದೆ. ಮತ್ತೊಂದು ಕ್ಷೇತ್ರವನ್ನು ಹುಟ್ಟು ಹಾಕುವ ಕಾರ್ಯ ಚಾಲ್ತಿ ಪಡೆದುಕೊಂಡಿದೆ. ಹಾಗಂತ, ಬಲ್ಲ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 16 ಗ್ರಾಮ ಪಂಚಾಯತಿಗಳಿವೆ. ಇದುವರೆಗೂ ಚಿಗಳ್ಳಿ, ಪಾಳಾ ಹಾಗೂ ಇಂದೂರು, ಹೀಗೆ ಮೂರು ಜಿಲ್ಲಾ ಪಂಚಾಯತ ಕ್ಷೇತ್ರಗಳಿದ್ದವು, ಜೊತೆಗೆ 11 ತಾಲೂಕು ಪಂಚಾಯತಿ ಕ್ಷೇತ್ರಗಳಿದ್ದವು. ಆದ್ರೆ, ಸದ್ಯ ಈ ಎಲ್ಲಾ ಕ್ಷೇತ್ರಗಳ ಮರುವಿಂಗಡನೆಗೆ ಶಿಫಾರಸ್ಸು ಮಾಡಲಾಗಿದೆ. ಮೂರು ಇದ್ದ ಜಿಪಂ ಕ್ಷೇತ್ರಗಳನ್ನು ಮರುವಿಂಗಡಿಸಿ 4 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಹಾಗೆನೇ 11 ಇದ್ದ ತಾಪಂ ಕ್ಷೇತ್ರಗಳನ್ನು 9 ಕ್ಕೆ ಇಳಿಸಲಾಗಿದೆ. ಹಾಗಂತ, ಶಿಫಾರಸ್ಸು ಮಾಡಿದ್ದು ಇನ್ನೆರಡು ದಿನಗಳಲ್ಲಿ ಸರ್ಕಾರ ಮರುವಿಂಗಡನೆಯ ಆದೇಶ ಹೊರಡಿಸೋ ಸಾಧ್ಯತೆ ಇದೆ...
ಶಂಕರ್ ಗೌಡಿ ಮುಂಡಗೋಡಿನ ನೂತನ ತಹಶೀಲ್ದಾರ್ ಆಗಿ ವರ್ಗಾವಣೆ..!
ಮುಂಡಗೋಡಿಗೆ ನೂತನ ತಹಶೀಲ್ದಾರ್ ಆಗಿ ಶಂಕರ ಗೌಡಿ ವರ್ಗಾವಣೆಯಾಗಿದ್ದಾರೆ. ಸದ್ಯ ಬಾಗಲಕೋಟೆ ಜಿಲ್ಲೆ ಬೀಳಗಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದ ಶಂಕರ್ ಗೌಡಿಯವರನ್ನು ಮುಂಡಗೋಡಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಶ್ರೀಧರ್ ಮುಂದಲಮನಿಯವರನ್ನು ಶಿರಸಿಗೆ ವರ್ಗಾವಣೆಗೊಳಿಸಿದ್ದರಿಂದ ಮುಂಡಗೋಡ ತಹಶೀಲ್ದಾರ್ ಹುದ್ದೆ ಖಾಲಿಯಾಗಿತ್ತು. ನಿನ್ನೆಯಷ್ಟೇ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಬಿಡುಗಡೆಗೊಂಡು ಶಿರಸಿಗೆ ವರ್ಗಾವಣೆಯಾಗಿದ್ದರು. ಹೀಗಾಗಿ, ಇಂದು ನೂತನ ತಹಶಿಲ್ದಾರ್ ಶಂಕರ್ ಗೌಡಿಯವರನ್ನು ಸರ್ಕಾರ ಮುಂಡಗೋಡಿಗೆ ವರ್ಗಾವಣೆಗೊಳಿಸಿ ಆದೇಶಿಸಿದೆ.
ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಇಂದು ಬಿಡುಗಡೆ, ಡೀಸಿ ಆದೇಶ..!
ಮುಂಡಗೋಡ: ಶಿರಸಿಗೆ ವರ್ಗಾವಣೆಗೊಂಡಿರೋ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡದಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲಿನ್ ಆದೇಶ ಹೊರಡಿಸಿದ್ದಾರೆ. ಇವತ್ತೇ ಮುಂಡಗೋಡದಿಂದ ಶಿರಸಿಗೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಿಡುಗಡೆಗೊಂಡಿದ್ದು, ಮುಂದಿನ ತಹಶೀಲ್ದಾರ್ ಹುದ್ದೆ ಭರ್ತಿ ಆಗುವವರೆಗೂ ಮುಂಡಗೋಡಿಗೆ ಹೆಚ್ಚುವರಿ ಪ್ರಭಾರಿಯಾಗಿ ಶ್ರೀಧರ್ ಮುಂದಲಮನಿಯವರೇ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಅಕ್ರಮ ಮದ್ಯಮಾರಾಟ, ಅಬಕಾರಿಗಳ ನೆರಳಲ್ಲೇ ನಡಿತಿದೆಯಾ ದಂಧೆ..?
ಮುಂಡಗೋಡ: ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳು ತಲೆ ಎತ್ತಿವೆ. ಅಧಿಕೃತ ಮದ್ಯದಂಗಡಿಗಳು ಮುಂಡಗೋಡಿಗಷ್ಟೇ ಸೀಮಿತವಾಗಿವೆ. ಆದ್ರೆ ಅದ್ಯಾರ ಕೃಪಾಕಟಾಕ್ಷವೋ ಗೊತ್ತಿಲ್ಲ, ಇಡೀ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ದಂಧೆಕೋರರನ್ನು ಹುಟ್ಟು ಹಾಕಲಾಗಿದೆ. ಹೀಗಾಗಿ, ತಾಲೂಕಿನ ಮಹಿಳೆಯರು, ಪ್ರಜ್ಞಾವಂತರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕ್ತಿದಾರೆ. ಅದ್ರಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಹಾಮಂಗಳಾರತಿ ಮಾಡ್ತಿದಾರೆ. ಅಬಕಾರಿಗಳದ್ದೇ ಆಟ..? ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಈಗ ಕೆಲವು ಕಿರಾಣಿ ಅಂಗಡಿಗಳಲ್ಲೂ ಮದ್ಯ ಹೇರಳವಾಗಿ ಸಿಗುತ್ತಿದೆ. ಇನ್ನು ತಾಲೂಕಿನ ಟಿಬೇಟಿಯನ್ ಕಾಲೋನಿಗಳ ಅಕ್ಕಪಕ್ಕದಲ್ಲೇ ಹತ್ತಾರು ಅಂಗಡಿಗಳು ಬಿಂಧಾಸ್ ಆಗಿ ಸರಾಯಿ ಮಾರಾಟ ಮಾಡ್ತಿವೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ, ಕ್ಯಾಂಪ್ ನಂಬರ್ 8 ಬಳಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಸರಾಯಿ ಮಾರಾಟ ಮಾಡಲಾಗ್ತಿದೆ. ಹೀಗಾಗಿ, ಈ ಭಾಗದ ಹಲವು ಯುವಕರು ಮದ್ಯದ ದಾಸರಾಗ್ತಿದಾರೆ. ಈ ನಶೆಯಲ್ಲೇ ಹಲವು ಬಗೆಯ ಕ್ರೈಂ ಗಳು ನಡೆಯುತ್ತಿವೆ. ಅವ್ರು ಹೇಳಿದ್ದೇ ರೇಟು..!...
ಡೀಸೆಲ್ ಟ್ಯಾಂಕರ್ ಪಲ್ಟಿ, ರಸ್ತೆಗೆ ಹರಿದ ಡೀಸೆಲ್, ತುಂಬಿಕೊಳ್ಳಲು ಮುಗಿಬಿದ್ದ ಜನ..!
ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಡೀಸೆಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾದ ಘಟನೆ, ವಿಜಯಪುರದ ಹೊರವಲಯದಲ್ಲಿ ನಡೆದಿದೆ. ಟ್ಯಾಂಕರ್ ಪಲ್ಟಿಯಾದ ಪರಿಣಾಮ, ಡೀಸೆಲ್ ರಸ್ತೆಗೆ ಹರಿದಿದೆ. ಹೀಗಾಗಿ, ಟ್ಯಾಂಕರ್ ನಿಂದ ಸೋರುತ್ತಿದ್ದ ಡಿಸೈಲ್ ತುಂಬಿಕೊಳ್ಳಲು ಜನರು ಮುಗಿ ಬಿದ್ದಿದ್ದರು. ವಿಜಯಪುರ ನಗರದ ಹೊರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 50 ರಹೈಪರ್ ಮಾರ್ಟ್ ಬಳಿ ಡೀಸೆಲ್ ಟ್ಯಾಂಕರ್ ಉರುಳಿಬಿದ್ದಿದ್ದು, ವಾಟರ್ ಬಾಟಲ್ ಹಾಗೂ ಇತರ ವಸ್ತುಗಳಲ್ಲಿ ಜನರು, ಡೀಸೆಲ್ ತುಂಬಿಕೊಂಡು ಹೋಗ್ತಿದಾರೆ. ಟ್ಯಾಂಕರ್ ನಿಂದ ಅಪಾರ ಪ್ರಮಾಣದ ಡಿಸೈಲ್ ಸೋರಿಕೆಯಾಗಿದೆ. ರಸ್ತೆ ಪಕ್ಕದ ಗುಂಡಿಯಲ್ಲಿ ಹರಿದು ಡೀಸೆಲ್ ತುಂಬಿಕೊಂಡಿದೆ. ಹೀಗಾಗಿ, ಆ ಗುಂಡಿಗಳಿಂದಲೂ ಜನರು ಡೀಸೆಲ್ ತುಂಬಿಕೊಳ್ಳುತ್ತಿದ್ದಾರೆ. ಸ್ಥಳಕ್ಕೆ ಗೋಲಗುಮ್ಮಟ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದಾರೆ. ಜನರನ್ನು ಪೊಲೀಸರು ಚದುರಿಸಿದ್ದಾರೆ. ಗೋಲಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.