ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡಿನಿಂದ ಇಂದು ಬಿಡುಗಡೆ, ಡೀಸಿ ಆದೇಶ..!

ಮುಂಡಗೋಡ: ಶಿರಸಿಗೆ ವರ್ಗಾವಣೆಗೊಂಡಿರೋ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಮುಂಡಗೋಡದಿಂದ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲಿನ್ ಆದೇಶ ಹೊರಡಿಸಿದ್ದಾರೆ.

ಡೀಸಿ ಆದೇಶ ಪ್ರತಿ

ಇವತ್ತೇ ಮುಂಡಗೋಡದಿಂದ ಶಿರಸಿಗೆ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಬಿಡುಗಡೆಗೊಂಡಿದ್ದು, ಮುಂದಿನ ತಹಶೀಲ್ದಾರ್ ಹುದ್ದೆ ಭರ್ತಿ ಆಗುವವರೆಗೂ ಮುಂಡಗೋಡಿಗೆ ಹೆಚ್ಚುವರಿ ಪ್ರಭಾರಿಯಾಗಿ ಶ್ರೀಧರ್ ಮುಂದಲಮನಿಯವರೇ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಜಿಲ್ಲಾಧಿಕಾರಿಗಳು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

error: Content is protected !!