ಮುಂಡಗೋಡ; ತಾಲೂಕಿನಲ್ಲಿ ಈಗ ಬದಲಾವಣೆ ಗಾಳಿ ಬೀಸಿದೆ. ಬಹುತೇಕ ಕೋರ್ಟ್ ಆದೇಶದಂತೆ ಇನ್ನೇರಡು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡಿಯೋದು ಬಹುತೇಕ ಫಿಕ್ಸ್ ಆದಂತಾಗಿದೆ.
ಈ ಕಾರಣಕ್ಕಾಗೇ ಮುಂಡಗೋಡ ತಾಲೂಕಿನಲ್ಲಿ ಮೂರು ಇದ್ದ ಜಿಪಂ ಕ್ಷೇತ್ರಗಳನ್ನ ಮರು ವಿಂಗಡನೆ ಮಾಡಲಾಗಿದೆ. ಮತ್ತೊಂದು ಕ್ಷೇತ್ರವನ್ನು ಹುಟ್ಟು ಹಾಕುವ ಕಾರ್ಯ ಚಾಲ್ತಿ ಪಡೆದುಕೊಂಡಿದೆ. ಹಾಗಂತ, ಬಲ್ಲ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಸಿಕ್ಕಿದೆ.
ಮುಂಡಗೋಡ ತಾಲೂಕಿನಲ್ಲಿ ಒಟ್ಟೂ 16 ಗ್ರಾಮ ಪಂಚಾಯತಿಗಳಿವೆ. ಇದುವರೆಗೂ ಚಿಗಳ್ಳಿ, ಪಾಳಾ ಹಾಗೂ ಇಂದೂರು, ಹೀಗೆ ಮೂರು ಜಿಲ್ಲಾ ಪಂಚಾಯತ ಕ್ಷೇತ್ರಗಳಿದ್ದವು, ಜೊತೆಗೆ 11 ತಾಲೂಕು ಪಂಚಾಯತಿ ಕ್ಷೇತ್ರಗಳಿದ್ದವು. ಆದ್ರೆ, ಸದ್ಯ ಈ ಎಲ್ಲಾ ಕ್ಷೇತ್ರಗಳ ಮರುವಿಂಗಡನೆಗೆ ಶಿಫಾರಸ್ಸು ಮಾಡಲಾಗಿದೆ. ಮೂರು ಇದ್ದ ಜಿಪಂ ಕ್ಷೇತ್ರಗಳನ್ನು ಮರುವಿಂಗಡಿಸಿ 4 ಕ್ಷೇತ್ರಗಳನ್ನಾಗಿ ಮಾಡಲಾಗಿದೆ. ಹಾಗೆನೇ 11 ಇದ್ದ ತಾಪಂ ಕ್ಷೇತ್ರಗಳನ್ನು 9 ಕ್ಕೆ ಇಳಿಸಲಾಗಿದೆ. ಹಾಗಂತ, ಶಿಫಾರಸ್ಸು ಮಾಡಿದ್ದು ಇನ್ನೆರಡು ದಿನಗಳಲ್ಲಿ ಸರ್ಕಾರ ಮರುವಿಂಗಡನೆಯ ಆದೇಶ ಹೊರಡಿಸೋ ಸಾಧ್ಯತೆ ಇದೆ ಎನ್ನಲಾಗಿದೆ.
ಇವು ಮರುವಿಂಗಡೆನೆಗೊಂಡ ಕ್ಷೇತ್ರಗಳು..!
ಸಾಲಗಾಂವ್ ಜಿಪಂ ಕ್ಷೇತ್ರ
ಸಾಲಗಾಂವ್, ಚಿಗಳ್ಳಿ, ಕಾತೂರು, ಪಾಳಾ, ಓಣಿಕೇರಿ ಗ್ರಾಮ ಪಂಚಾಯತಿ ಸೇರಿ ಸಾಲಗಾಂವ್ ಜಿಲ್ಲಾ ಪಂಚಾಯತ್ ಕ್ಷೇತ್ರ ಮರು ವಿಂಗಡನೆಗೊಂಡಿದೆ.
ಮೈನಳ್ಳಿ ಜಿಪಂ ಕ್ಷೇತ್ರ
ಗುಂಜಾವತಿ, ಮೈನಳ್ಳಿ, ಚೌಡಳ್ಳಿ, ನಾಗನೂರು
ಗ್ರಾಮ ಪಂಚಾಯತಿಗಳನ್ನು ಸೇರಿಸಿ ನೂತನವಾಗಿ ಮೈನಳ್ಳಿ ಜಿಪಂ ಕ್ಷೇತ್ರ ಮರುವಿಂಗಡನೆಗೊಂಡಿದೆ.
ಮಳಗಿ ಜಿಪಂ ಕ್ಷೇತ್ರ
ಕೋಡಂಬಿ, ಮಳಗಿ, ಬೆಡಸಗಾಂವ್ ಗ್ರಾಮ ಪಂಚಾಯತಿ ಸೇರಿ ಮಳಗಿ ಜಿಲ್ಲಾ ಪಂಚಾಯತ ಕ್ಷೇತ್ರ ಅಸ್ತಿತ್ವಕ್ಕೆ ಬರಲಿದೆ.
ಇಂದೂರು ಜಿಪಂ ಕ್ಷೇತ್ರ
ಇಂದೂರು, ಹುನಗುಂದ, ಬಾಚಣಕಿ, ನಂದಿಕಟ್ಟಾ ಗ್ರಾಮ ಪಂಚಾಯತಿಗಳು ಸೇರಿ ಇಂದೂರು ಕ್ಷೇತ್ರ ಮೊದಲಿನಂತೆ ಖಾಯಂ ಆಗಿದೆ.
ಇನ್ನು, ತಾಲೂಕಿನಲ್ಲಿ 11 ತಾಲೂಕಾ ಪಂಚಾಯತಿ ಕ್ಷೇತ್ರಗಳಿದ್ದವು, ಅದ್ರಲ್ಲಿ ಸದ್ಯ ನಾಲ್ಕೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೇ ಆಯಾ ಕ್ಷೇತ್ರದ ವ್ಯಾಪ್ತಿಗೇ ಸರಿಹೊಂದುವಂತೆ 9 ತಾಪಂ ಕ್ಷೇತ್ರಗಳಾಗಿ ಮರುವಿಂಗಡನೆ ಮಾಡಲಾಗಿದೆ. ಹೀಗಾಗಿ, 11 ಇದ್ದ ತಾಪಂ ಕ್ಷೇತ್ರಗಳ ಸಂಖ್ಯೆ ಈಗ 9 ಕ್ಕೆ ಇಳಿದಿದೆ.
ಒಟ್ನಲ್ಲಿ, ಕ್ಷೇತ್ರ ಮರುವಿಂಗಡನೆಯ ಕಾರ್ಯ ಪೂರ್ಣಗೊಂಡಿದ್ದು, ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೇನು ಎರಡು ದಿನಗಳಲ್ಲಿ ನೂತನ ಜಿಪಂ ಹಾಗೂ ತಾಪಂ ಕ್ಷೇತ್ರಗಳ ಕುರಿತು ಸರ್ಕಾರದಿಂದ ಅಧಿಸೂಚನೆ ಹೊರಡಿಸೋ ಸಾಧ್ಯತೆ ಇದೆ ಎನ್ನಲಾಗಿದೆ.