ಮುಂಡಗೋಡ: ತಾಲೂಕಿನಲ್ಲಿ ಈಗ ಎಲ್ಲೆಂದರಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳು ತಲೆ ಎತ್ತಿವೆ. ಅಧಿಕೃತ ಮದ್ಯದಂಗಡಿಗಳು ಮುಂಡಗೋಡಿಗಷ್ಟೇ ಸೀಮಿತವಾಗಿವೆ. ಆದ್ರೆ ಅದ್ಯಾರ ಕೃಪಾಕಟಾಕ್ಷವೋ ಗೊತ್ತಿಲ್ಲ, ಇಡೀ ತಾಲೂಕಿನ ಗಲ್ಲಿ ಗಲ್ಲಿಗಳಲ್ಲಿ ಅಕ್ರಮ ದಂಧೆಕೋರರನ್ನು ಹುಟ್ಟು ಹಾಕಲಾಗಿದೆ. ಹೀಗಾಗಿ, ತಾಲೂಕಿನ ಮಹಿಳೆಯರು, ಪ್ರಜ್ಞಾವಂತರು ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕ್ತಿದಾರೆ. ಅದ್ರಲ್ಲೂ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಮಹಾಮಂಗಳಾರತಿ ಮಾಡ್ತಿದಾರೆ.

ಅಬಕಾರಿಗಳದ್ದೇ ಆಟ..?
ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ ಈಗ ಕೆಲವು ಕಿರಾಣಿ ಅಂಗಡಿಗಳಲ್ಲೂ ಮದ್ಯ ಹೇರಳವಾಗಿ ಸಿಗುತ್ತಿದೆ. ಇನ್ನು ತಾಲೂಕಿನ ಟಿಬೇಟಿಯನ್ ಕಾಲೋನಿಗಳ ಅಕ್ಕಪಕ್ಕದಲ್ಲೇ ಹತ್ತಾರು ಅಂಗಡಿಗಳು ಬಿಂಧಾಸ್ ಆಗಿ ಸರಾಯಿ ಮಾರಾಟ ಮಾಡ್ತಿವೆ. ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 6 ರ ಕ್ರಾಸ್ ಬಳಿ, ಕ್ಯಾಂಪ್ ನಂಬರ್ 8 ಬಳಿ ಅಕ್ರಮವಾಗಿ ಯಾವುದೇ ಪರ್ಮಿಟ್ ಇಲ್ಲದೇ ಸರಾಯಿ ಮಾರಾಟ ಮಾಡಲಾಗ್ತಿದೆ. ಹೀಗಾಗಿ, ಈ ಭಾಗದ ಹಲವು ಯುವಕರು ಮದ್ಯದ ದಾಸರಾಗ್ತಿದಾರೆ. ಈ ನಶೆಯಲ್ಲೇ ಹಲವು ಬಗೆಯ ಕ್ರೈಂ ಗಳು ನಡೆಯುತ್ತಿವೆ.

ಅವ್ರು ಹೇಳಿದ್ದೇ ರೇಟು..!
ನಿಜ ಅಂದ್ರೆ, ಅಕ್ರಮವಾಗಿ‌ ಮದ್ಯ ಮಾರಾಟ ಮಾಡುವ ಅಂಗಡಿಗಳಲ್ಲಿ ಮದ್ಯದ ದರ ಅನ್ನೋದು, ಅವ್ರ ಇಚ್ಚೆಯಲ್ಲೇ ನಿರ್ಧಾರವಾಗಿರತ್ತೆ. ಸಹಜವಾಗಿ, MRP ದರಕ್ಕಿಂತ ಅರ್ಧ ಪಟ್ಟು ಹೆಚ್ಚು ಹಣ ಪೀಕಲಾಗ್ತಿದೆ. ಅಸಲು, 70 ರೂ. ಇದ್ದ ಒಂದು ಪೌಚ್ ಈ ಅಕ್ರಮ ಮಾರಾಟಗಾರರ ಬಳಿ 100 ರೂ ಮೇಲೆ ಬಿಕರಿಯಾಗತ್ತೆ. ಇದೇಲ್ಲ ಅಬಕಾರಿಗಳಿಗೂ ಗೊತ್ತಿದೆ. ಇಷ್ಟೇಲ್ಲ ಗೊತ್ತಿದ್ರೂ ಮುಂಡಗೋಡ ತಾಲೂಕಿನಲ್ಲಿ ಅಬಕಾರಿ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಬಂದು ಇದುವರೆಗೂ ಒಂದೇ ಒಂದು ಕೇಸು ಮಾಡುವ ಗೋಜಿಗೆ ಹೋಗಿಲ್ಲ ಅಂತಿದಾರೆ ಜನ. ಹಾಗೆ ಬಂದು ಹೀಗೆ ಹೋಗುವ ಮೂಲಕ ತಮ್ಮ “ಮಾರ್ಕೆಟ್ ವ್ಯಾಲ್ಯೂ” ಹೆಚ್ಚು ಮಾಡಿಕೊಳ್ತಾರೆ ಬಿಟ್ರೆ ಬೇರೆ ಏನೂ ಇಲ್ಲವಂತೆ. ಇದು ನಾಚಿಗ್ಗೇಡು ಅಲ್ವಾ ಅಬಕಾರಿಗಳೇ..?

ಮದ್ಯದೋಕುಳಿ..!
ಇನ್ನು ತಾಲೂಕಿನ ಹಲವು ರಸ್ತೆ ಬದಿಗಳಲ್ಲಿ ಯಾರ ಭಯವಿಲ್ಲದೇ ಸರಾಯಿ ದಂಧೆ ನಡೆಸಲಾಗ್ತಿದೆ. ಈ ಅಂಗಡಿಯ ಎದುರು ದಿನ ಬೆಳಗಾಯಿತೆಂದ್ರೆ ನೂರಾರು ಬೈಕ್ ಗಳು ಬಂದು ನಿಲ್ಲುತ್ತವೆ. ಮದ್ಯರಾತ್ರಿ ಅಷ್ಟೇ ಅಲ್ಲ, ರಾತ್ರಿಯಿಡೀ ಮದ್ಯಾರಾಧನೆ ನಡೆಯುತ್ತಿದೆ.
ನಿಜ ಅಂದ್ರೆ ಈ ಎಲ್ಲಾ ಅಕ್ರಮ ದಂಧೆಗಳಿಗೆ ಬೆನ್ನೆಲುಬಾಗಿ ನಿಂತವರೇ ಅಬಕಾರಿಗಳಂತೆ. ಯಾಕಂದ್ರೆ, ಅವ್ರಿಗೇಲ್ಲ ತಿಂಗಳಿಗೊಮ್ಮೆ ಬರುವ ಬಾಬತ್ತು ಬಂದು ಬಿಡವೇಕು ಅಷ್ಟೆ. ಮುಂದೆ ಅದೇನೇ ಆದ್ರೂ, ಅವ್ರಿಗೂ ಅದಕ್ಕೂ ಸಂಬಂಧವಿಲ್ಲವಂತೆ, ಹೀಗಾಗಿ, ಅಬಕಾರಿಗಳ ಅಮಲಿನ ಪರಿಣಾಮ, ಮುಂಡಗೋಡ ತಾಲೂಕಿನ ಗಲ್ಲಿಗಳಲ್ಲಿ ಈಗ ಮದ್ಯದ ಘಮಲೇ ಘಮಲು.

ಪೊಲೀಸರ ಕಡೆ ಬೆರಳ್ಯಾಕೆ..?
ನಿಜಾ ಅಂದ್ರೆ ಇಲ್ಲಿನ ಪೊಲೀಸರಿಗೆ ಇದೇಲ್ಲ ಗೊತ್ತಿದೆ. ಅವ್ರೂ ಕೂಡ ತಮ್ಮ ಗಮನಕ್ಕೆ ಬಂದ ಅದೇಷ್ಟೋ ಕಡೆ ದಾಳಿ ಮಾಡಿ ಕೇಸು ಜಡಿಯುತ್ತಾರೆ. ಆದ್ರೆ, ಇಡೀ ತಾಲೂಕಿನ ಕಾನೂನು ಸುವ್ಯವಸ್ಥೆ ನೋಡಿಕೊಳ್ಳಬೇಕಾದ ಪೊಲೀಸರಿಗೆ, ಅಕ್ರಮ ಮದ್ಯದಂಗಡಿಗಳ ಉಸಾಬರಿಯ ಹರಕತ್ತು ಏನಿದೆ ಹೇಳಿ. ಮಾಡಲು ಅವ್ರಿಗೂ ಸಾಕಷ್ಟು ಕೆಲಸಗಳಿವೆ. ಅಷ್ಟಕ್ಕೂ, ಸರ್ಕಾರ ಇಂತಹ ಅಕ್ರಮ ತಡೆಯಲೆಂದೇ ಅಬಕಾರಿ ಇಲಾಖೆಯಲ್ಲಿ ಡಜನ್ನುಗಟ್ಟಲೇ ಅಧಿಕಾರಿಗಳ ಪಡೆ ರಚಿಸಿದೆ.
ಆದ್ರೆ, ಅಂತಹ ಅಬಕಾರಿಗಳ ಪಡೆ ಅನ್ನೋದು ತಿಂಗಳಿಗೊಮ್ಮೆ ದಿಢೀರನೇ ಪ್ರತ್ಯಕ್ಷವಾಗಿ, ಉಳಿದ ದಿನಗಳಲ್ಲಿ ಗಡದ್ದು ನಿದ್ದೆಗೆ ಜಾರಿಬಿಡತ್ತೆ. ಹೀಗಿದ್ದಾಗ ಪಾಪ ಪೊಲೀಸರೇನು ಮಾಡಬೇಕು..?

ಅಬಕಾರಿಗಳು ತಿಂಗಳಿಗೊಮ್ಮೆ..!
ನಿಜ ಅಂದ್ರೆ ಮುಂಡಗೋಡ ತಾಲೂಕಿನಲ್ಲಿ
ಇಷ್ಟೇಲ್ಲ ಸರಾಯಿ ಮಾರಾಟದ ಅಕ್ರಮ ಜಾಲ ಗಲ್ಲಿ ಗಲ್ಲಿಗಳಲ್ಲಿ ಅಟ್ಟಹಾಸ ತೋರುತ್ತಿದ್ರೂ, ಅಬಕಾರಿ ಇಲಾಖೆ ಮಾತ್ರ ಈ ಕಡೆ ಸುಳಿಯೋದೇ ಇಲ್ಲ. ಆದ್ರೆ ಪ್ರತೀ ತಿಂಗಳ ಮೊದಲ ವಾರ ಅಥವಾ ಕೊನೆಯ ವಾರ, ಚಾಚೂ ತಪ್ಪದೇ ತಾಲೂಕಿಗೆ ಬಂದು ಹೋಗ್ತಾರೆ. ಆದ್ರೆ ಹಾಗೆ ಬರುವ ಅಬಕಾರಿಗಳು “ಬರೋವಾಗ ಖಾಲಿ, ಹೋಗುವಾಗ ಭರ್ತಿ” ಅನ್ನೊದು ಖಾಯಂ ಮಾತಾಗಿದೆ ಅನ್ನೋ ಆರೋಪಗಳಿವೆ.

ಇವತ್ತೂ ಬಂದಿದಾರೆ ಅಬಕಾರಿಗಳು..!
ಇವತ್ತೂ ಕೂಡ ಅಂತಹ ಅಕ್ರಮ ಮದ್ಯ ಮಾರಾಟ ಮಾಡುವ ಅನಧೀಕೃತ ಅಂಗಡಿಗಳಿಗೇಲ್ಲ ಭೇಟಿ ನೀಡಿ ಹೋಗಿದ್ದಾರೆ ಅಬಕಾರಿಗಳು. ದುರಂತ ಅಂದ್ರೆ ಆ ಅಧಿಕಾರಿಗಳೇಲ್ಲ ಅಂತಹ ಅಂಗಡಿಗಳಿಗೆ ಭೇಟಿ ನೀಡಿದ್ದು ಅಕ್ರಮ ತಡೆಯಲು ಅಲ್ಲವೇ ಅಲ್ಲ. ಬದಲಾಗಿ “ವಿಷಯ ಬ್ಯಾರೇನ್ ಐತಿ” ಅಂತಿದಾರೆ ಜನ. ಝಣ ಝಣ ಕಾಂಚಾಣದ ಕರಾಮತ್ತು ಅಧಿಕಾರಿಗಳನ್ನೇಲ್ಲ ಅಡ ಇರಿಸಿಕೊಂಡಿದೆಯಾ ಅನ್ನೊ ಅನುಮಾನ ಶುರುವಾಗಿದೆ‌.

ಗಮನಿಸಿ ಎಸ್ಪಿ ಮೇಡಂ..!
ತಾಲೂಕಿನಲ್ಲಿ ಅಕ್ರಮವಾಗಿ ಸರಾಯಿ ಮಾರಾಟದ ಅಡ್ಡೆಗಳು ನಾಯಿ ಕೊಡೆಗಳಂತೆ ಹುಟ್ಟಿಕೊಂಡಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ಗಮನಿಸುತ್ತಿಲ್ಲ. ಹೀಗಾಗಿ, ಅಡ್ಡೆಗಳ ಅಕ್ರಮಿಗಳಿಗೆ ಒಂದಿಷ್ಟು ಬಿಸಿ ಮುಟ್ಟಿಸಬೇಕಿದೆ. ಅಂದಾಗ ಮಾತ್ರ ತಾಲೂಕಿನ ನಶೆಯ ಜಗತ್ತಿನಲ್ಲಿ ತೇಲಾಡುವವರ ಬಣ್ಣ ಬದಲಿಸಬಹುದು. ಖಡಕ್ ಎಸ್ಪಿ ಸುಮನಾ ಪೆನ್ನೇಕರ್ ಮೇಡಂ ಅಬಕಾರಿಗಳ ಕಿವಿ ಹಿಂಡಬೇಕಿದೆ.

error: Content is protected !!