ಭೀಕರ ರಸ್ತೆ ಅಪಘಾತ, ಕ್ರೂಸರ್ ನಾಲೆಗೆ ಬಿದ್ದು 9 ಜನರ ದಾರುಣ ಸಾವು, 8 ಜನರಿಗೆ ಗಾಯ..!


ಬೆಳಗಾವಿ: ಬೆಳ್ಳಂ ಬೆಳಿಗ್ಗೆ ಬೆಳಗಾವಿ ಸಮೀಪ ಕಣಬರಗಿ ಬಳಿ ಭೀಕರ ಅಪಘಾತವಾಗಿದೆ. ಕ್ರೂಸರ್ ನಾಲೆಗೆ ಉರುಳಿ ಬಿದ್ದ ಪರಿಣಾಮ, 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 8 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಮೃತರು ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದವರು ಎನ್ನಲಾಗಿದೆ. ಕೂಲಿ ಕೆಲಸಕ್ಕಾಗಿ ಕ್ರೂಸರ್ ವಾಹನದಲ್ಲಿ ಬೆಳಗಾವಿಯತ್ತ ಬರುತ್ತಿದ್ರು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬಳ್ಳಾರಿ ನಾಲೆಗೆ ಕ್ರೂಸರ್ ವಾಹನ ಪಲ್ಟಿಯಾಗಿ ಬಿದ್ದು 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ದಿನಗೂಲಿ ನೌಕರರು ರೈಲ್ವೆ ಬ್ರಿಡ್ಜ್ ಕಾಮಗಾರಿಗಾಗಿ ಕೆಲಸಕ್ಕೆ ಹೋಗುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬೆನ್ನಲ್ಲೇ ಗೋಕಾಕ್ ಹಾಗೂ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಟ್ರಾಫಿಕ್ ಜಾಮ್ ಆಗಿದೆ. ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

error: Content is protected !!