ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಪತ್ನಿ ಅಪಘಾತದಲ್ಲಿ ದುರ್ಮರಣ- ಸಚಿವ ಹೆಬ್ಬಾರ್ ಸಂತಾಪ

ಯಲ್ಲಾಪುರ- ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯ್ಕ್ ಅವರ ಧರ್ಮಪತ್ನಿ ವಿಜಯಾ ಶ್ರೀಪಾದ ನಾಯ್ಕ್ ರವರ ದುರ್ಮರಣಕ್ಕೆ ಸಚಿವ ಶಿವರಾಮ್ ಹೆಬ್ಬಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.. ಇಂದು ಮುಂಜಾನೆ ಶ್ರೀಪಾದ ನಾಯ್ಕ ಹಾಗೂ ಅವರ ಧರ್ಮಪತ್ನಿ ವಿಜಯಾ ನಾಯ್ಕ ಅವರನ್ನು ಭೇಟಿಯಾಗಿ ನಮ್ಮೂರಿನ ಕಲೆ, ದೇವಾಲಯಗಳ ವಿಶೇಷತೆಗಳ ಕುರಿತು ಕೆಲ ಕಾಲ ಅವರೊಂದಿಗೆ ಚರ್ಚಿಸಿದ್ದೆ ಖಂಡಿತವಾಗಿಯೂ ಈ ಸಾವನ್ನು ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ ಅಂತಾ ಹೆಬ್ಬಾರ್ ತಮ್ಮ ಸಂತಾಪ ಸೂಚಿಸಿದ್ದಾರೆ. ಭಗವಂತ ಅವರ ಆತ್ಮಕ್ಕೆ ಚಿರಶಾಂತಿ ನೀಡಿ ಕುಟುಂಬ ವರ್ಗದವರಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರೋ ಶಿವರಾಮ್ ಹೆಬ್ಬಾರ್, ಶ್ರಿಪಾದ ನಾಯ್ಕರು ಶೀಘ್ರ ಗಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ..

ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಪತ್ನಿ ವಿಜಯಾ ಹಾಗೂ ಆಪ್ತ ಕಾರ್ಯದರ್ಶಿ ದುರ್ಮರಣ

ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿ, ಸಚಿವರ ಧರ್ಮಪತ್ನಿ ವಿಜಯಾ ಸಾವಿಗೀಡಾಗಿದ್ದಾರೆ.. ಅಲ್ದೆ, ಸಚಿವರ ಆಪ್ತ ಕಾರ್ಯದರ್ಶಿ ಕೂಡ ಮೃತಪಟ್ಟಿದ್ದಾರೆ.. ಇನ್ನು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಸ್ಥಿತಿ ಗಂಭೀರವಾಗಿದೆ ಅಂತಾ ತಿಳಿದು ಬಂದಿದೆ..  

ಅಂಕೋಲಾ ಬಳಿ ಕೇಂದ್ರ ಸಚಿವರ ಕಾರು ಪಲ್ಟಿ- ಸಚಿವರೂ ಸೇರಿ ನಾಲ್ವರಿಗೆ ಗಾಯ

ಅಂಕೋಲ- ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಕಾರು ಅಂಕೋಲಾ ತಾಲೂಕಿನ ಹೊಸಕಂಬಿ ಗ್ರಾಮದ ಬಳಿ ಪಲ್ಟಿಯಾಗಿದೆ.. ಕೇಂದ್ರ ಆಯುಷ್ ಇಲಾಖೆ ಸಚಿವರಾಗಿರೋ ಶ್ರೀಪಾದ್ ನಾಯಕ್, ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಘಟನೆ ನಡೆದಿದೆ..ಕಾರಿನಲ್ಲಿದ್ದ ಸಚಿವರು ಸೇರಿ ನಾಲ್ವರಿಗೆ ಗಾಯವಾಗಿದ್ದು, ಸಚಿವರ ಪತ್ನಿಗೆ ಗಂಭೀರ ಗಾಯವಾಗಿರೋ ಮಾಹಿತಿ ಕೆನರಾ ನ್ಯೂಸ್ ಹಂಟ್ ಗೆ ಲಭ್ಯವಾಗಿದೆ.. ಗಾಯಾಳುಗಳನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ‌ಮಾಡಲಾಗಿದೆ..ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

ಹುನಗುಂದ ಕೈ ಕಾರ್ಯಕರ್ತರನ್ನ ಭೇಟಿ ಮಾಡಿದ ಮಾಜಿ ಸಚಿವ ಸಂತೋಷ ಲಾಡ್

ಮುಂಡಗೋಡ- ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಹುನಗುಂದ ಕಾಂಗ್ರೆಸ್ ಕಾರ್ಯಕರ್ತರನ್ನು ಮಾಜಿ ಸಚಿವ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ಸಂತೋಷ ಲಾಡ್ ಭೇಟಿ ಮಾಡಿದ್ರು.. ತಾಲೂಕಿನ ಹುನಗುಂದ, ಅಗಡಿ, ಇಂದೂರು, ಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂತೋಷ ಲಾಡ್ ಕಾರ್ಯಕರ್ತರನ್ನು ಭೇಟಿ ಮಾಡಿದ್ರು.. ಬೆಳಿಗ್ಗೆ ಹುನಗುಂದದ ನೂತನ ವಿಠ್ಠಲ ಮಂದಿರದಲ್ಲಿ ಕಾರ್ಯಕರ್ತರ ಸಭೆ ನಡೆಸಿದ ಸಚಿವ್ರು ಸಿದ್ದನಗೌಡ ಪಾಟೀಲ್, ತುಕಾರಾಮ್ ಹೊನ್ನಳ್ಳಿ ಸೇರಿ ಎಲ್ಲಾ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನ ಬೆಂಬಲಿಸುವಂತೆ ಮನವಿ ಮಾಡಿದ್ರು.. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಎಚ್.ಎಂ.ನಾಯ್ಕ, ಬಸವರಾಜ್ ಆಸ್ತಕಟ್ಟಿ, ಮರಿಯಪ್ಪ ಬೆನಕನಳ್ಳಿ, ಫಕ್ಕಿರಯ್ಯ ಹಿರೇಮಠ್, ಶೇಖಪ್ಪ ನಡುವಿನಮನಿ ಸೇರಿ ಹಲವರು ಉಪಸ್ಥಿತರಿದ್ದರು.. ಮುಂಡಗೋಡ ತಾಲೂಕಿನಲ್ಲಿ ಇಂದು ಲಾಡ್ ಪ್ರವಾಸ.. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ, ಮಾಜಿ ಸಚಿವ ಸಂತೋಷ್ ಲಾಡ್ ಇಂದು ಮುಂಡಗೋಡ ತಾಲೂಕಿನ ಹಲವು ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ.. ಹುನುಗುಂದ ಗ್ರಾಮದಿಂದ ತಾಲ್ಲೂಕಿನ ವಿವಿಧ ಹಳ್ಳಿಗಳಿಗೆ ಕಾರ್ಯಕರ್ತರನ್ನು ಭೇಟಿಯಾಗಲು...

ಹುನಗುಂದ ಗ್ರಾಮಕ್ಕೆ ಜಿಪಂ ಸಿಇಓ ಪ್ರಿಯಾಂಗಾ ಭೇಟಿ; ನರೇಗಾ ಕಾಮಗಾರಿಗಳ ವೀಕ್ಷಣೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮಕ್ಕೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸಿಇಓ ಪ್ರಿಯಾಂಗಾ ಎಂ. ಭೇಟಿ ನೀಡಿದ್ರು..  ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದ ಸಿಇಓ ಹುನಗುಂದದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಪೌಷ್ಟಿಕ ತೋಟ ಉದ್ಘಾಟಿಸಿದ್ರು.. ಇದಕ್ಕೂ ಮೊದಲು ಅಗಡಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಿಇಓ ಪ್ರಿಯಾಂಗಾ ರವರು ಅಂಗನವಾಡಿಯ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದ್ರು.. ಈ ವೇಳೆ ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಸೇರಿ ಹಲವರು ಸಾಥ್ ನೀಡಿದ್ರು..

2019-20 ರಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ; 7.72 ಕೋಟಿ ರೂ. ಲಾಭ- ಸಚಿವ ಹೆಬ್ಬಾರ್

ಶಿರಸಿ : 2019 – 20 ಸಾಲಿನಲ್ಲಿ ಕೆಡಿಸಿಸಿ ಬ್ಯಾಂಕ್ ಉತ್ತಮ ಪ್ರಗತಿ ಸಾಧಿಸಿದ್ದು ಈ ಬಾರಿ ಬ್ಯಾಂಕ್ ಒಟ್ಟು 7.72 ಕೋಟಿ ರೂಪಾಯಿ ಲಾಭವನ್ನು ಗಳಿಸಿದೆ ಅಂತಾ ಕಾರ್ಮಿಕ ಹಾಗು ಸಕ್ಕರೆ ಖಾತೆ ಸಚಿವ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್ ತಿಳಿಸಿದ್ರು.. ಅವರು ಇಂದು ಕೆ.ಡಿ.ಸಿ.ಸಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ 2019 – 20 ಸಾಲಿನ ಬ್ಯಾಂಕ್ ನ ಪ್ರಗತಿ ಕುರಿತು ಪತ್ರಿಕಾಗೋಷ್ಠಿಯನ್ನು ನಡೆಸಿ ಸಂಕ್ಷಿಪ್ತ ವರದಿಯನ್ನು ನೀಡಿ ಮಾತನಾಡುತ್ತಿದ್ದರು.. ಬ್ಯಾಂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ವಿವಿಧ ಕೃಷಿ ಉದ್ದೇಶಗಳಿಗೆ ಮಾಧ್ಯಮಿಕ ಸಾಲ ನೀಡುತ್ತಿದ್ದು , ನಮ್ಮ ಜಿಲ್ಲೆಯನ್ನು ತೋಟಗಾರಿಕಾ ಜಿಲ್ಲೆಯೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಸಹ ಸಾಲ ನೀಡಲಾಗುವುದು ಅಂತಾ ಘೋಷಿಸಿದ ಸಚಿವ್ರು, ಬ್ಯಾಂಕ್ ನ ಈ ಪ್ರಗತಿಗೆ ಕಾರಣವಾದ ಗ್ರಾಹಕರಿಗೆ ಸಿಬ್ಬಂದಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕ್ ನ ಉಪಾಧ್ಯಕ್ಷರಾದ ಶ್ರೀ ಮೋಹನ ನಾಯಕ ಹಾಗೂ...

ಮುಂಡಗೋಡ ಪೊಲೀಸರ ಮಿಂಚಿನ ಕಾರ್ಯ; ಫೇಸ್ ಬುಕ್ ನಲ್ಲಿ ಅಶ್ಲೀಲ ಪೋಟೊ ಹಾಕಿದ್ದವ ಅಂದರ್

ಮುಂಡಗೋಡ- ತಾಲೂಕಿನ ಯುವತಿಯೋರ್ವಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲವಾಗಿ ಬರೆದು, ಅಶ್ಲೀಲ ವಿಡಿಯೋ, ಪೋಟೋಗಳನ್ನು ಹರಿಬಿಟ್ಟ ಬೆಂಗಳೂರಿನ ಯುವಕನನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ.. ದಿನಾಂಕ 14-12-2020 ರಂದು ಮುಂಡಗೋಡ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದ ಯುವತಿಯೋರ್ವಳು, ಯಾರೋ ಒಬ್ಬ ವ್ಯಕ್ತಿ ತನ್ನ ಬಗ್ಗೆ ಅಶ್ಲೀಲ ವಿಡಿಯೋ ಹಾಗೂ ಪೋಟೊಗಳನ್ನು ಫೇಸ್ ಬುಕ್, ವಾಟ್ಸ್ ಅಪ್, ಇನ್ ಸ್ಟ್ರಾಗ್ರಾಂ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.. ಇದ್ರಿಂದ ನನಗೆ ಹಾಗೂ ನನ್ನ ಕುಟುಂಬದ ತೇಜೋವಧೆಯಾಗುತ್ತಿದೆ.. ಹೀಗಾಗಿ, ಕ್ರಮ ಕೈಗೊಳ್ಳಿ ಅಂತಾ ದೂರಿನಲ್ಲಿ ಮನವಿ ಮಾಡಿಕೊಂಡಿದ್ದಳು.. ಈ ಕುರಿತು ದೂರು ದಾಖಲಿಸಿಕೊಂಡ ಮುಂಡಗೋಡ ಪೊಲೀಸ್ ರು ಆರೋಪಿತನ ಪತ್ತೆಗೆ ಜಾಲ ಬೀಸಿದ್ರು.. ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಯನ್ನ ಬಂಧಿಸಿ ತಂದಿದ್ದಾರೆ.. ಜೀವನಕುಮಾರ ಧನಂಜಯ (21), ಬಂಧಿತ ಯುವಕನಾಗಿದ್ದು, ಬೆಂಗಳೂರಿನ ಭಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.. ಮೂಲತಃ ರಾಮನಗರ ಜಿಲ್ಲೆಯ ಅಂಚೀಪುರ ಕಾಲೋನಿ ಬೈರಮಂಗಲ ಗ್ರಾಮದವನಾಗಿದ್ದು, ಸದ್ಯ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿದ್ದ.. ಹೀಗಾಗಿ, ಬೆಂಗಳೂರಿನಿಂದಲೇ ಬಂಧಿಸಿ ಕರೆ...

ಹುನಗುಂದ ಗ್ರಾಪಂ ಚುನಾವಣೆ; “ಕೈ” ಬೆಂಬಲಿತರಿಂದ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.. ಸಿದ್ದನಗೌಡ ವರ್ಸಸ್ ಚಂದ್ರು ವಾರ್ಡ್ ನಂಬರ್ ಒಂದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ರು.. ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರು ಹಡಪದ ವಿರುದ್ಧ ಅಖಾಡದಲ್ಲಿರೋ ಸಿದ್ದನಗೌಡ ಪಾಟೀಲ್ ಕೈ ಪಡೆಗೆ ಆಕ್ಸಿಜನ್ ಆಗ್ತಾರಾ ಕಾದು ನೋಡಬೇಕಿದೆ.. ವಿನೋದ್ ವರ್ಸಸ್ ತುಕಾರಾಂ ಇನ್ನು ವಾರ್ಡ್ ನಂಬರ್ ಎರಡರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೈತ ತುಕಾರಾಮ್ ಹೊನ್ನಳ್ಳಿ ನಾಮಪತ್ರ ಸಲ್ಲಿಸಿದ್ರು.. ಇಲ್ಲಿ ಬಹುತೇಕ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮದ್ಯೆ ನೇರ ಹಣಾಹಣಿ ನಡಿಯೋ ಸಾಧ್ಯತೆ ಇದ್ದು ತೀವ್ರ ಜಿದ್ದಾ ಜಿದ್ದು ಏರ್ಪಡುವ ಲಕ್ಷಣಗಳಿವೆ.. ಈಗಾಗಲೇ ಬಿಜೆಪಿ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರೋ ವಿನೋದ್ ಬಿಸನಳ್ಳಿ ವಿರುದ್ಧ ತೊಡೆತಟ್ಟಿರೋ ತುಕಾರಾಮ್ ಹೊನ್ನಳ್ಳಿ ಅದ್ಯಾವ ಮಟ್ಟಿಗೆ ಠಕ್ಕರ್ ಕೊಡ್ತಾರೋ ಕಾದು ನೋಡಬೇಕಿದೆ.. ಈಶ್ವರಗೌಡ ವರ್ಸೆಸ್ ಮಹಾವೀರ್ ಇನ್ನು ಹುನಗುಂದ ಗ್ರಾಮ...

ವಿದ್ಯುತ್ ಅವಘಡ; ಭತ್ತದ ಮೇವು ತುಂಬಿದ್ದ ಟ್ರಾಕ್ಟರ್ ಗೆ ಬೆಂಕಿ, ಹಾನಿ

ಮುಂಡಗೋಡ- ಭತ್ತದ ಒಣಮೇವು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ತಾಲೂಕಿನ ಪಾಳಾದಲ್ಲಿ ನಡೆದಿದೆ.. ವಿದ್ಯತ್ ಕಂಬದ ಲೈನ್ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು ಟ್ರಾಕ್ಟರ ನಲ್ಲಿ ಸಾಗಿಸುತ್ತಿದ್ದ 0.5 ಎಕರೆಯ, ಸುಮಾರು 50 ಸಾವಿರ ರೂ. ಮೌಲ್ಯದ ಬತ್ತದ ಮೇವು ಸುಟ್ಟು ಭಸ್ಮವಾಗಿದೆ.. ಅದೃಷ್ಟವಶಾತ್ ಟ್ರಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ.. ಇಕ್ಬಾಲ್ ಬಾರಾಸಾಬ್ ಹೊಂಡದ ಎಂವುವವರಿಗೆ ಸೇರಿದ ಮೇವು ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಆಗಬಹುದಾಗಿದ್ದ ಹೆಚ್ಚಿನ ಹಾನಿ ತಡೆದಿದ್ದಾರೆ..

ಹುನಗುಂದ ಗ್ರಾಪಂ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆಗೆ ಇಂದಿನಿಂದ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈಗಾಗಲೇ ಇಲ್ಲಿನ ಪ್ರಮುಖ ಮೂರು ವಾರ್ಡುಗಳಿಗೆ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನ ಫೈನಲ್ ಮಾಡಿಕೊಂಡಿದೆ, ಬರೋಬ್ಬರಿ 9 ಜನ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದ್ರಂತೆ, ಕಾಂಗ್ರೆಸ್ ಕೂಡ ಮೂರೂ ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಫಿಕ್ಸ್ ಮಾಡಿಕೊಂಡಿದೆ..ವಾರ್ಡ್ ನಂಬರ್ – 1.                                      ವಾರ್ಡ್ ನಂಬರ್ ಒಂದರಲ್ಲಿ ಬಿಜೆಪಿ ಬೆಂಬಲಿತರಾಗಿ ಒಟ್ಟೂ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.. ಅದ್ರಲ್ಲಿ, ಚಂದ್ರು ಹಡಪದ ಈ ವಾರ್ಡಿನಲ್ಲಿ ವರ್ಷಗಳಿಂದಲೇ ಗ್ರೌಂಡ್ ವರ್ಕ್ ನಲ್ಲಿ ತೊಡಗಿದ್ದರು..ಹೀಗಾಗಿ, ಚಂದ್ರು ಈಗ ನಿರೀಕ್ಷೆಯಂತೆ ಅಭ್ಯರ್ಥಿಯಾಗಿದ್ದಾರೆ.. ಇನ್ನು ಈ ವಾರ್ಡಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿದ್ದನಗೌಡ ಪಾಟೀಲ್ ಕಣಕ್ಕಿಳಿಯೋದು ಗ್ಯಾರಂಟಿ ಅನ್ನೊ ಮಾತು ಕೇಳಿ ಬಂದಿದೆ.. ಈ ಮೊದಲು, ತಾಲೂಕಾ...

error: Content is protected !!