ಮುಂಡಗೋಡ: ದೇಶಪಾಂಡೆ ರುಡ್ ಸೆಟಿ ಸಂಸ್ಥೆಯ ಮುಖಾಂತರ ಇಂದು ತಾಲೂಕಿನ ಇಂದೂರ ಗ್ರಾಮದಲ್ಲಿ ಇಂದೂರು, ನಂದಿಕಟ್ಟಾ ಹಾಗೂ ಹುನಗುಂದ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮರಾಜ ನಡಿಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪ್ರವೈಜರ್ ಫಾತಿಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಇಮ್ರಾನ್ ಖಾನ್ ಬಾಳಿಕಾಯಿ, ರಾಜು ಹರಿಜನ, ಸಂಸ್ಥೆಯ ಸುಪ್ರವೈಜರ್ ಈರಯ್ಯ ಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.