ಮುದ್ದೇಬಿಹಾಳ: ಆಕೆಯ ವಯಸ್ಸು ಈಗಿನ್ನೂ 36, ಮದುವೆಯಾಗಿ 3 ಮಕ್ಕಳಿದ್ದಾರೆ, ಮತ್ತವನಿಗೆ 40 ವರ್ಷ ವಯಸ್ಸು ಆತನಿಗೂ ಮದುವೆಯಾಗಿ ಬರೋಬ್ಬರಿ 6 ಮಕ್ಕಳಿಗೆ ತಂದೆಯಾಗಿದ್ದಾನೆ. ಹೀಗಿದ್ರೂ ಇವರ ಕಳ್ಳಾಟ ಮಾತ್ರ ಕಡಿಮೆಯಾಗಿರಲಿಲ್ಲ. ಆದ್ರೆ ಅವ್ರ ಕಳ್ಳಾಟ ಅನ್ನೋದು ಇವತ್ತು ನಡೆಯಬಾರದ ಘಟನೆಗೆ ಸಾಕ್ಷಿಯಾಗಿದೆ. ಎಂದೂ ಕೇಳರಿಯದ ಅಮಾನವೀಯ, ಮನಕಲುಕುವ ಘಟನೆ ನಡೆದುಹೋಗಿದೆ.

ಆಕೆಯ ಹೆಸ್ರು ರೇಣುಕಾ..
ಅಂದಹಾಗೆ ಆಕೆಯ ಹೆಸ್ರು ರೇಣುಕಾ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರು ಗ್ರಾಮದವಳು. ಮೂರು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ ಆಕೆಯ ಪತಿ ಹೊಟ್ಟೆ ಪಾಡಿಗಾಗಿ ಕೇರಳಕ್ಕೆ ದುಡಿಯಲು ಹೋಗಿದ್ದಾನೆ. ಆ ಹೊತ್ತಲ್ಲೇ ರೇಣುಕಾಗೆ ಪರಿಚಯವಾಗಿದ್ದು ಪಕ್ಕದ ಊರಿನ ಕುಡುಕ ಬಸವರಾಜ್.. ಬಸವರಾಜನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ರೇಣುಕಾ ಇವತ್ತು ಮಾಡಬಾರದ ಕೆಲಸ ಮಾಡಿ ಹೆಣವಾಗಿದ್ದಾಳೆ.

ಅಯ್ಯೋ ಅದು ಭೀಕರ ದೃಷ್ಯ..!
ನಡೆದ ಘಟನೆ ಇಷ್ಟೆ, ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ ಇವತ್ತು ಇಬ್ಬರು ಪ್ರೇಮಿಗಳು ಭೇಟಿಯಾಗಿದ್ದಾರೆ. ಕೆಲ ಹೊತ್ತು ಇಬ್ಬರೂ ಅಲ್ಲಿಯೇ ಪ್ರಣಯದಾಟವನ್ನೂ ಆಡಿದ್ದಾರೆ. ಆದ್ರೆ ಅದ್ಯಾವ ಕಾರಣಕ್ಕೋ ಗೊತ್ತಿಲ್ಲ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ. ಏಕಾಏಕಿ ವಿಷ ಕುಡಿದು ಸಾಯಲು ಡಿಸೈಡ್ ಮಾಡಿದ್ದಾರೆ.

ವಿಷ ಕುಡಿದರು..
ಕುಡಿದ ನಶೆಯಲ್ಲಿದ್ದ ಬಸವರಾಜ ತನ್ನ ಪ್ರಿಯತಮೆ ರೇಣುಕಾಗೆ ವಿಷ ಕುಡಿಸಿದ್ದಾನೆ. ತಾನೂ ಒಂದಿಷ್ಟು ವಿಷ ಕುಡಿದಿದ್ದಾನೆ. ಆದ್ರೆ ಅಕ್ಷರಶಃ ನಶೆಯಲ್ಲಿದ್ದ ಬಸವರಾಜ, ವಿಷವನ್ನು ತಾನು ಕಡಿಮೆ ಕುಡಿದು ರೇಣುಕಾಗೆ ಒಂದಿಷ್ಟು ಜಾಸ್ತಿಯೇ ಕುಡಿಸಿದ್ದಾನೆ. ರೇಣುಕಾ ವಿಷಕುಡಿದು ಒದ್ದಾಟ ಶುರುವಿಟ್ಟಿದ್ದಾಳೆ.

ಸಾಯುವಾಗ ಸಂತೈಸುತ್ತಿದ್ದ ಕುಡುಕ..
ವಿಷ ಸಂಪೂರ್ಣ ಹೊಟ್ಟೆ ಸೇರಿ ರೇಣುಕಾ ವಿಲ ವಿಲ ಒದ್ದಾಡುತ್ತಿದ್ದಾಳೆ. ಹಾಗೆ ಒದ್ದಾಡುತ್ತಿದ್ದ ರೇಣುಕಾಳನ್ನು ತನ್ನ ತೊಡೆಯ ಮೇಲೆ ಹಾಕಿಕೊಂಡ ಕುಡುಕ ಪ್ರೇಮಿ, ಆಕೆಯನ್ನ ಸಂತೈಸುತ್ತಿದ್ದಾನೆ. ಈ ವೇಳೆ ಅಲ್ಲೇ ಪಕ್ಕದಲ್ಲೇ ಕುರಿಕಾಯುತ್ತಿದ್ದ ಕುರಿಗಾಹಿಗಳು ಬಂದಿದ್ದಾರೆ. ದೃಷ್ಯ ಕಂಡಿದ್ದಾರೆ. ದುರಂತ ಅಂದ್ರೆ ಆ ಹೊತ್ತಲ್ಲಿ ತೀವ್ರ ವಿಲ ವಿಲ‌ ಒದ್ದಾಡುತ್ತಿದ್ದ ರೇಣುಕಾಳನ್ನು ಆಸ್ಪತ್ರೆಗೆ ಸಾಗಿಸುವ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಬದಲಾಗಿ ಮೊಬೈಲ್ ನಲ್ಲಿ ವಿಡಿಯೊ ಚಿತ್ರೀಕರಣ ಮಾಡಿಕೊಂಡು ಮಜಾ ತಕೊಂಡಿದ್ದಾರೆ.

ಪ್ರಿಯಕರನ ತೊಡೆ ಮೇಲೆ ಪ್ರಾಣಬಿಟ್ಟ ಪ್ರೇಯಸಿ..!
ಅಷ್ಟೊತ್ತಿಗಾಗಲೇ ಬಾಯಲ್ಲಿ ರಕ್ತ ಕಾರಿ, ವಿಷದ ಸಂಕಟದಲ್ಲಿ ಪ್ರೇಯಸಿ ರೇಣುಕಾ, ಪ್ರಿಯಕರನ ತೊಡೆ ಮೇಲೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ. ನಂತರ ಬಸವರಾಜನಿಗೆ ಮುದ್ದೆಬಿಹಾಳ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದ್ರೆ ಸಧ್ಯ ತಾಯಿಯ ದುರಾಸೆಗಾಗಿ ಆಕೆಯ ಮೂರು ಕಂದಮ್ಮಗಳು ಅನಾಥವಾಗಿವೆ. ಏನೂ ಮಾಡದ ತಪ್ಪಿಗೆ ಆಕೆಯ ಪತಿ ಅಶೋಕ ಮಮ್ಮಲ ಮರಗುವಂತಾಗಿದೆ.

error: Content is protected !!