ಮುಂಡಗೋಡ: ತಾಲೂಕಿನ ಇಂದಿರಾನಗರದ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಓರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡಿನಿಂದ ಕಲಘಟಗಿ ಕಡೆಗೆ ಹೋಗುತ್ತಿರುವಾಗ, ಇಂದಿರಾ ನಗರ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬೈಕ್ ನಲ್ಲಿದ್ದ ಕುಂದಗೋಳ ತಾಲೂಕಿನ ಸುರೇಶ ಶಿವಪ್ಪ ಗುಡಿಯಾಳ್(33) ಎಂಬುವವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಮತ್ತೊರ್ವನಿಗೆ ಯಾವುದೇ ಗಾಯವಾಗದೆ ಸುರಕ್ಷಿತವಾಗಿದ್ದಾನೆ. ಇನ್ನು ಅಪಘಾತ ನಡೆದ ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Top Stories
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ
ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ಪರವಾಗಿ ಸಾಧಕ ಸಹದೇವಪ್ಪ ನಡಗೇರಿಯವರಿಗೆ ಅಭಿನಂದನೆಗಳು
ಕೊಪ್ಪ ಇಂದಿರಾನಗರದಲ್ಲಿ ಹಾಡಹಗಲೇ ಮನೆ ಕಳ್ಳತನ, ಅಪ್ರಾಪ್ತ ಬಾಲಕರ ಕೃತ್ಯವಾ..?
ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದಲ್ಲಿ ಹಾಡಹಗಲೇ ಮನೆ ಕಳ್ಳತನವಾಗಿದೆ. ಮನೆಯ ಹೆಂಚು ತೆರೆದು ಮನೇಲಿದ್ದ ಹಣ ಎಗರಿಸಿಕೊಂಡು ಹೋಗಿದ್ದಾರೆ. ರೇಣುಕಾ ಬಸವರಾಜ್ ಕುಕ್ಕಾಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಅಂದಹಾಗೆ, ದೀಪಾವಳಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಹೊಳೆಯಮ್ಮ ದೇವಿಯ ದರ್ಶನಕ್ಕಾಗಿ ಹೋಗಿದ್ದರು ರೇಣುಕಾ. ಹೀಗಾಗಿ, ಕಳೆದ ಎರಡು ದಿನದಿಂದಲೂ ಮನೆಲಿ ಯಾರೂ ಇಲ್ಲದ್ದನ್ನು ಗಮನಿಸಿ ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇಂದು ಮದ್ಯಾಹ್ನವೇ ಹೆಂಚು ತೆಗೆದು ಮನೆಯೊಳಗೆ ಹೊಕ್ಕಿದ್ದಾರೆ. ನಂತರ ಮನೆಯೊಳಗೆ ಟ್ರೆಂಕ್ ನಲ್ಲಿ ಇಟ್ಟಿದ್ದ ಸುಮಾರು 30 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿನ ಪಾತ್ರೆಗಳ ಶಬ್ಧವಾಗಿದೆ. ಹೀಗಾಗಿ, ಅಕ್ಕಪಕ್ಕದ ಜನ ಈ ಮನೆಲಿ ಯಾರೋ ಒಳನುಗ್ಗಿದ್ದಾರೆ ಅಂತ ಅನುಮಾನಿಸಿ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಅಲ್ಲದೇ ಮನೆಯ ಬಾಗಿಲು ತೆರೆದು ನೋಡಿದಾಗ ಇಬ್ಬರು ಬಾಲಕರು ಕೃತ್ಯದಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಅವ್ರನ್ನ ಹಿಡಿಯಲು ಗ್ರಾಮಸ್ಥರು ಬೆನ್ನತ್ತಿದ್ದಾರೆ. ಆದ್ರೆ ತಕ್ಷಣವೇ ಆ ಇಬ್ಬರು ಬಾಲಕರು...
ವಿಧಾನಸಭೆ ಚುನಾವಣೆ: ಕಾಂಗ್ರೆಸ್ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ, ನವೆಂಬರ್ ಅಂತ್ಯಕ್ಕೆ ಬಿಡುಗಡೆ..!
ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ ನವೆಂಬರ್ ಅಂತ್ಯದ ವೇಳೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಚಿಂತನೆ ನಡೆಸಿದೆ. ಬುಧವಾರ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಜೊತೆಗೆ ಸಭೆ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಸಿಎಲ್ಪಿ ನಾಯಕ ಸಿದ್ದರಾಮಯ್ಯ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. “ಎ” ಕೆಟೆಗರಿ ಸಭೆಯಲ್ಲಿ ನವೆಂಬರ್ ಅಂತ್ಯದ ವೇಳೆಗೆ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕಾಂಗ್ರೆಸ್ ಚುನಾವಣಾ ತಂತ್ರಗಾರ ಸುನೀಲ್ ಕುನುಗೋಲು ನೀಡಿರುವ ವರದಿ ಆಧರಿಸಿ ಚರ್ಚೆ ಮಾಡಿದ ನಾಯಕರು ಸುಲಭವಾಗಿ ಗೆಲುವು ಸಾಧಿಸಬಹುದಾದ ಕ್ಷೇತ್ರಗಳನ್ನು ಎ ಕೆಟಗೆರಿಗೆ ಸೇರಿಸಿ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲು ಪ್ಲ್ಯಾನ್ ಮಾಡಲಾಗಿದೆ. “ಬಿ” ಕೆಟೆಗರಿ ಗೆಲ್ಲುವ ಅವಕಾಶಗಳು ಹೆಚ್ಚಿರುವ ಕ್ಷೇತ್ರಗಳನ್ನು ಬಿ ಕೆಟಗೆರಿಯಲ್ಲಿ ಸೇರಿಸಿದ್ದು, ಎರಡನೇ ಹಂತದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಮತ್ತು ಗೆಲುವು ಕಷ್ಟ ಎನಿಸಿಕೊಳ್ಳುವ ಕ್ಷೇತ್ರಗಳನ್ನು ಸಿ ವರ್ಗಕ್ಕೆ ಸೇರಿಸಲಾಗಿದೆ....
ವಿಷಕಾರಿ ಹಾವು ಕಚ್ಚಿ ಗರ್ಭಿಣಿ ಮಹಿಳೆ ದಾರುಣ ಸಾವು..!
ವಿಜಯಪುರ: ವಿಷಕಾರಿ ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು ಕಂಡ ದಾರುಣ ಘಟನೆ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಟೋಜಿಯಲ್ಲಿ ನಡೆದಿದೆ. ನಾಲ್ಕು ತಿಂಗಳ ಗರ್ಭಿಣಿ ನಿರ್ಮಲಾ ಯಲ್ಲಪ್ಪ ಚಲವಾದಿ(25) ಹಾವು ಕಚ್ಚಿ ಸಾವು ಕಂಡಿದ್ದಾಳೆ. ಹಾವು ಕಚ್ಚಿದ ವೇಳೆಯಲ್ಲಿ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಮುದ್ದೇಬಿಹಾಳ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ವಿಧಿವಶ, ಸವದತ್ತಿಯಲ್ಲಿ ಮಡುಗಟ್ಟಿದ ಮೌನ
ಬೆಳಗಾವಿ: ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ(56) ವಿಧಿವಶರಾಗಿದ್ದಾರೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿರುವ ಆನಂದ ಮಾಮನಿ ನಿವಾಸದಲ್ಲಿ ಮೌನ ಮಡುಗಟ್ಟಿದೆ. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಸವದತ್ತಿಯ ನಿವಾಸಕ್ಕೆ ಆಗಮಿಸಲಿರುವ ಆನಂದ ಮಾಮನಿ ಪಾರ್ಥಿವ ಶರೀರ, ಮನೆಯಲ್ಲಿ ಒಂದು ಗಂಟೆ ಕಾಲ ಪೂಜೆ ಹಾಗೂ ಕುಟುಂಬಸ್ಥರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ತಾಲೂಕು ಕ್ರೀಡಾಂಗಣದಲ್ಲಿ ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಬಳಿಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಿ, ಮಧ್ಯಾಹ್ನ 3 ಗಂಟೆಗೆ ಯಡ್ರಾವಿ ರಸ್ತೆಯ ಚಂದ್ರಮಾ ಫಾರ್ಮ್ಹೌಸ್ನಲ್ಲಿ ಲಿಂಗಾಯತ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನಡೆಯಲಿದೆ.
ಚಿಗಳ್ಳಿ ಪ್ರೌಢಶಾಲೆಯ ಕಂಪೌಂಡ್ ರಾತ್ರೋ ರಾತ್ರಿ ಕೆಡವಿ ಹಾಕಿದ ದುಷ್ಟರು, ಅಯ್ಯೋ, ಜ್ಞಾನದೇಗುಲದ ಮೇಲೆ ಇದೇಂಥಾ ವಿಕೃತಿ..?
ಮುಂಡಗೋಡ ತಾಲೂಕಿನಲ್ಲಿ ಕಾನೂನಿನ ಭಯವೇ ಹೊರಟು ಹೋಯ್ತಾ..? ಅಥವಾ ಆನೆ ನಡೆದದ್ದೇ ದಾರಿ ಅನ್ನುವ ಹುಂಬತನವಾ..? ಅಥವಾ ಬಂಢತನವಾ..? ಅರ್ಥವೇ ಆಗ್ತಿಲ್ಲ. ಯಾಕಂದ್ರೆ, ರಾತ್ರೋ ರಾತ್ರಿ ಸಾರ್ಕಾರದ ಆಸ್ತಿಯೊಂದನ್ನ ಅನಾಮತ್ತಾಗಿ ಕೆಡವಿ ಹಾಕಲಾಗಿದೆ. ಚಿಗಳ್ಳಿಯ ದಿ. ದೇವಕಿ ಚಾಯಪ್ಪ ಕಲಾಲ್ ಸರ್ಕಾರಿ ಪ್ರೌಢಶಾಲೆಯ ಕಂಪೌಂಡ್ ನೆಲಸಮ ಮಾಡಿದ್ದಾರೆ ಕಿಡಿಗೇಡಿಗಳು..! ಆದ್ರೆ, ಯಾರು ಅಂದ್ರೆ ಯಾರೂ ಈ ಬಗ್ಗೆ ಮಾತಾಡ್ತಿಲ್ಲ.. ಇಡೀ ತಾಲೂಕಾಡಳಿತವೇ ಮೌನವಹಿಸಿದೆ.. ಈ ಕ್ಷಣದವರೆಗೂ ಯಾವೊಬ್ಬ ಅಧಿಕಾರಿಗಳೂ ತುಟಿ ಬಿಚ್ಚಿಲ್ಲ. ಇತಿಹಾಸವಿದೆ..! ಅಂದಹಾಗೆ, ಚಿಗಳ್ಳಿಯ ಸರ್ಕಾರಿ ಪ್ರೌಢಶಾಲೆ ದಶಕಗಳ ಇತಿಹಾಸ ಹೊಂದಿರೋ ಪ್ರೌಢಶಾಲೆ. ಇದೇ ಶಾಲೆಯಲ್ಲಿ ಕಲಿತು ಇವತ್ತು ಅದೇಷ್ಟೋ ಪ್ರತಿಭಾನ್ವಿತರು ಉನ್ನತ ಹುದ್ದೆಗಳಲ್ಲಿದ್ದಾರೆ. ಈ ಕಾರಣಕ್ಕಾಗಿಯೇ ಎಂ.ಸಿ.ಕಲಾಲರು ಈ ಪ್ರೌಢಶಾಲೆಯ ಕಟ್ಟಡ ನಿರ್ಮಾಣಕ್ಕೆ ಬೇಕಾಗಿದ್ದ ಜಾಗವನ್ನು ದಾನ ನೀಡಿ ಉಧಾರತೆ ತೋರಿದ್ದರು. ಹೀಗಾಗಿನೇ ಕಳೆದ ಕೆಲ ದಿನಗಳ ಹಿಂದೆ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ದಾನಿಗಳು ಸೇರಿದಂತೆ ಹಲವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಈಗ ಅದೇ ಪ್ರೌಢಶಾಲೆಯ ಅಂಗಳದಲ್ಲಿ...
ಮುಂಡಗೋಡ ಪಿಎಸ್ಐ ಬಸಣ್ಣನ ಎತ್ತಂಗಡಿಗೆ ಪ್ಲ್ಯಾನ್ ರೆಡಿ, ಠಾಣೆಯ ಅಂಗಳದಲ್ಲಿ ಬ್ರೋಕರುಗಳ ಮಸಲತ್ತು ನಿಜಾನಾ..?
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರ ಎತ್ತಂಗಡಿಗೆ ಅದೊಂದು ಪಡೆ ಸನ್ನದ್ಧವಾಗಿದೆಯಂತೆ. ಅಂತಹದ್ದೊಂದು ರೂಮರ್ರು ತಾಲೂಕಿನ ತುಂಬ ಎದ್ದಿದೆ. ತಮ್ಮ ಮೂಗಿನ ನೇರಕ್ಕೆ ಕಾರ್ಯನಿರ್ವಹಿಸ್ತಿಲ್ಲ, ನಮಗೆ ಕಿಮ್ಮತ್ತು ಕೊಡ್ತಿಲ್ಲ ಅಂತಾ ಅದೊಂದು ಟೀಂ ಅದ್ಯಾರ್ಯಾರದ್ದೋ ಕಿವಿ ಕಚ್ಚಿ ಹೆಂಗಾದ್ರೂ ಸರಿ ಪಿಎಸ್ಐರನ್ನ ಇಲ್ಲಿಂದ ಎತ್ತಂಗಡಿ ಮಾಡಿಸಬೇಕು ಅನ್ನೋ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ದಕ್ಷ ಯುವ ಪಡೆ..! ಅಂದಹಾಗೆ, ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಇವತ್ತಿಗೂ ದಕ್ಷ ಯುವ ಪಡೆ ಇದೆ. ಅದ್ಯಾವನೇ ನಾಗರಿಕ ತನ್ನ ಅಳಲು ತೋಡಿಕೊಳ್ಳಲು ಠಾಣೆಯ ಮೆಟ್ಟಿಲು ಹತ್ತಿದ್ರೆ ಸಾಕು ಸಾಂತ್ವನ ನೀಡುವ ಸ್ನೇಹಮಯ ಮನಸ್ಸುಗಳು ಇವೆ. ಮೊದಲಿನ ಹಾಗೆ, ವಿನಾಕಾರಣ ಪೊಲೀಸುಗಿರಿ ತೋರಿಸಿ ರಾತ್ರಿಯಾದ್ರೆ ಕ್ಚಾಟರ್ ಗಾಗಿ ಕಾಯುವ ವಸೂಲಿವೀರ ಖಾಕಿಗಳು ಬಹುಶಃ ಯಾರೂ ಉಳಿದಿಲ್ಲ. ಹೀಗಾಗಿ, ಅದೇನೇ ಸಮಸ್ಯೆ ಹೊತ್ತೊಯ್ದರು ಕುಳಿತು ಬಗೆಹರಿಸುವ ಹೃದಯವಂತ ಹುಡುಗ್ರು ಠಾಣೆಯಲ್ಲಿದ್ದಾರೆ. ಆದ್ರೆ, ಅವ್ರಿಗೇಲ್ಲ ಅದೊಂದೇ ಪಿಡುಗು ಜೀವ ಹಿಂಡ್ತಿದೆ. ಬ್ರೋಕರ್ ಗಳ ಹಾವಳಿ ಹೆಜ್ಜೆ ಹೆಜ್ಜೆಗೂ ಕಟ್ಟಿ ಹಾಕ್ತಿದೆ. ಬ್ರೋಕರ್ ಗಳ ಅಡ್ಡ...
ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ವಾಪಸ್..!
ಬೆಳಗಾವಿ: ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಳಗಾವಿ ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ವಾಪಸ್ ಪಡೆದಿದ್ದಾರೆ ರೈತರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿನ್ನೆ ತಡರಾತ್ರಿ ವಾಪಸ್ ಪಡೆದಿದ್ದಾರೆ. ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ರೈತರು, ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮನವೊಲಿಸಿದ ಬಳಿಕ ವಾಪಸ್ಬ ಪಡೆದಿದ್ದಾರೆ. ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಇದೇ ತಿಂಗಳು 15 ರಂದು ಕಬ್ಬಿನ ದರ ನಿಗದಿಗಾಗಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಬೆಳಗಾವಿಯಿಂದ ಚೂನಪ್ಪ ಪೂಜಾರಿ ಸೇರಿ 10 ಜನರು ರೈತ ಮುಖಂಡರು ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳ ಸಭೆಯಲ್ಲಿ ತಮ್ಮ ಬೇಡಿಕೆ ಗಮನಕ್ಕೆ ತರುವಂತೆ ಡಿಸಿ ನಿತೇಶ್ ಪಾಟೀಲ್ ರೈತರಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ನಿನ್ನೆ ತಡರಾತ್ರಿ ಹೋರಾಟವನ್ನು ರೈತರು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ. ಅಂದಹಾಗೆ, ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ದರ ನಿಗದಿ ಪಡಿಸಲು ರೈತರು ಹೋರಾಟ ಆರಂಭಿಸಿದ್ರು. ಹೀಗಾಗಿ,...
ರಾತ್ರಿಯ ಭಯಂಕರ ಮಳೆಗೆ ಯುವತಿ ಬಲಿ, ಮನೆಯಲ್ಲಿದ್ದ ಯುವತಿಗೆ ಸಿಡಿಲು ಬಡಿದು ಸಾವು..!
ಕಲಘಟಗಿ: ತಾಲೂಕಿನ ಅಸ್ತಕಟ್ಟಿ ಗ್ರಾಮದಲ್ಲಿ ಸಿಡಿಲಿಗೆ ಓರ್ವ ಯುವತಿ ಬಲಿಯಾಗಿದ್ದಾಳೆ. ಕು.ಲಕ್ಷ್ಮೀ ವಿರೂಪಾಕ್ಷಪ್ಪ ಪಾಟೀಲ್(18) ಸಿಡಿಲಿಗೆ ಬಲಿಯಾದವಳಾಗಿದ್ದಾಳೆ. ನಿನ್ನೆ ರಾತ್ರಿ ಸುರಿದ ಗುಡುಗು, ಸಿಡಿಲು, ಮಿಂಚು ಸಹಿತ ಭಾರೀ ಮಳೆಗೆ ಯುವತಿ ಬಲಿಯಾಗಿದ್ದು ದುರಂತ ಸಾವು ಕಂಡಿದ್ದಾಳೆ. ಅಂದಹಾಗೆ, ಮೃತ ಲಕ್ಷ್ಮೀ ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತಿದ್ದಳು. ನಿನ್ನೆ ರಾತ್ರಿ 10 ಗಂಟೆಯ ಸುಮಾರಿಗೆ ಮನೆಯ ಒಳಗೆ ಇದ್ದಾಗ, ಏಕಾಏಕಿ ಲಕ್ಷ್ಮೀಯ ಎದೆಗೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಹೀಗಾಗಿ, ಸ್ಥಳದಲ್ಲೇ ಯುವತಿ ಸಾವನ್ನಪ್ಪಿದ್ದಾಳೆ. ಕಳೆದ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ಈಕೆಯ ತಾಯಿ ಸಾವನ್ನಪ್ಪಿದ್ದಳು. ಈಗ ವಿಧಿಯು ಸಿಡಿಲಿನ ರೂಪದಲ್ಲಿ ಯುವತಿಯನ್ನು ಬಲಿ ಪಡೆದಿದೆ. ಹೀಗಾಗಿ, ಮೊದಲೇ ತೀರ್ವ ಆರ್ಥಿಕ ಸಂಕಷ್ಟದಲ್ಲಿರೋ ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.