ಮುಂಡಗೋಡ ತಾಲೂಕಿನ ಕೊಪ್ಪ ಇಂದಿರಾನಗರದಲ್ಲಿ ಹಾಡಹಗಲೇ ಮನೆ ಕಳ್ಳತನವಾಗಿದೆ. ಮನೆಯ ಹೆಂಚು ತೆರೆದು ಮನೇಲಿದ್ದ ಹಣ ಎಗರಿಸಿಕೊಂಡು ಹೋಗಿದ್ದಾರೆ. ರೇಣುಕಾ ಬಸವರಾಜ್ ಕುಕ್ಕಾಟಿ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
ಅಂದಹಾಗೆ, ದೀಪಾವಳಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಹೊಳೆಯಮ್ಮ ದೇವಿಯ ದರ್ಶನಕ್ಕಾಗಿ ಹೋಗಿದ್ದರು ರೇಣುಕಾ. ಹೀಗಾಗಿ, ಕಳೆದ ಎರಡು ದಿನದಿಂದಲೂ ಮನೆಲಿ ಯಾರೂ ಇಲ್ಲದ್ದನ್ನು ಗಮನಿಸಿ ಹೊಂಚು ಹಾಕಿ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ. ಇಂದು ಮದ್ಯಾಹ್ನವೇ ಹೆಂಚು ತೆಗೆದು ಮನೆಯೊಳಗೆ ಹೊಕ್ಕಿದ್ದಾರೆ. ನಂತರ ಮನೆಯೊಳಗೆ ಟ್ರೆಂಕ್ ನಲ್ಲಿ ಇಟ್ಟಿದ್ದ ಸುಮಾರು 30 ಸಾವಿರ ಹಣವನ್ನು ಕಳ್ಳತನ ಮಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿನ ಪಾತ್ರೆಗಳ ಶಬ್ಧವಾಗಿದೆ.
ಹೀಗಾಗಿ, ಅಕ್ಕಪಕ್ಕದ ಜನ ಈ ಮನೆಲಿ ಯಾರೋ ಒಳನುಗ್ಗಿದ್ದಾರೆ ಅಂತ ಅನುಮಾನಿಸಿ ಮನೆಯ ಮಾಲೀಕರಿಗೆ ತಿಳಿಸಿದ್ದಾರೆ. ಅಲ್ಲದೇ ಮನೆಯ ಬಾಗಿಲು ತೆರೆದು ನೋಡಿದಾಗ ಇಬ್ಬರು ಬಾಲಕರು ಕೃತ್ಯದಲ್ಲಿ ಭಾಗಿಯಾಗಿರೋದು ಗೊತ್ತಾಗಿದೆ. ಹೀಗಾಗಿ, ತಕ್ಷಣವೇ ಅವ್ರನ್ನ ಹಿಡಿಯಲು ಗ್ರಾಮಸ್ಥರು ಬೆನ್ನತ್ತಿದ್ದಾರೆ. ಆದ್ರೆ ತಕ್ಷಣವೇ ಆ ಇಬ್ಬರು ಬಾಲಕರು ಮನೆಯ ಹಿಂದಿನಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ, ತಕ್ಷಣವೇ ಮನೆಯ ಮಾಲೀಕರು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.