ಕಬ್ಬಿಗೆ 5,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆದಿದ್ದ ಅಹೋರಾತ್ರಿ ಧರಣಿ ವಾಪಸ್..!

ಬೆಳಗಾವಿ: ಕಬ್ಬಿಗೆ ಸಮರ್ಪಕ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಬೆಳಗಾವಿ ಡಿಸಿ ಕಚೇರಿ ಎದುರು ನಡೆಯುತ್ತಿದ್ದ ಧರಣಿ ವಾಪಸ್ ಪಡೆದಿದ್ದಾರೆ ರೈತರು. ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಅಹೋರಾತ್ರಿ ಧರಣಿಯನ್ನು ನಿನ್ನೆ ತಡರಾತ್ರಿ ವಾಪಸ್ ಪಡೆದಿದ್ದಾರೆ.

ಬೆಳಗಾವಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದ ರೈತರು, ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಮನವೊಲಿಸಿದ ಬಳಿಕ ವಾಪಸ್ಬ ಪಡೆದಿದ್ದಾರೆ. ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಇದೇ ತಿಂಗಳು 15 ರಂದು ಕಬ್ಬಿನ ದರ ನಿಗದಿಗಾಗಿ ಸಭೆ ನಿಗದಿಯಾಗಿದೆ. ಈ ಸಭೆಯಲ್ಲಿ ಬೆಳಗಾವಿಯಿಂದ ಚೂನಪ್ಪ ಪೂಜಾರಿ ಸೇರಿ 10 ಜನರು ರೈತ ಮುಖಂಡರು ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿಗಳ ಸಭೆಯಲ್ಲಿ ತಮ್ಮ ಬೇಡಿಕೆ ಗಮನಕ್ಕೆ ತರುವಂತೆ ಡಿಸಿ ನಿತೇಶ್ ಪಾಟೀಲ್ ರೈತರಿಗೆ ಸಲಹೆ ನೀಡಿದ್ದಾರೆ. ಹೀಗಾಗಿ ನಿನ್ನೆ ತಡರಾತ್ರಿ ಹೋರಾಟವನ್ನು ರೈತರು ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.

ಅಂದಹಾಗೆ, ಪ್ರತಿ ಟನ್ ಕಬ್ಬಿಗೆ 5500 ರೂಪಾಯಿ ದರ ನಿಗದಿ ಪಡಿಸಲು ರೈತರು ಹೋರಾಟ ಆರಂಭಿಸಿದ್ರು. ಹೀಗಾಗಿ, ಬೆಳಗಾವಿ ಡಿಸಿ ನಿತೇಶ್ ಕುಮಾರ್ ಬೆಂಗಳೂರಿಗೆ ತೆರಳಿದಾಗ ಈ ಕುರಿತು ಸರ್ಕಾರದ ಗಮನಕ್ಕೆ ತಂದಿದ್ರು. ನಿನ್ನೆ ಬೆಂಗಳೂರಿನಿಂದ ವಾಪಸ್ ಆದ ಬಳಿಕ ಜಿಲ್ಲಾಧಿಕಾರಿ ರೈತರೊಂದಿಗೆ ಸುಧೀರ್ಘ ಸಮಾಲೋಚನೆ ನಡೆಸಿ ಮಾತುಕತೆ ಮಾಡಿದ್ರಿ. ಹೀಗಾಗಿ ರೈತರು ನಿತೇಶ್ ಕುಮಾರ್ ರವರ ಮಾತಿಗೆ ಗೌರವ ಕೊಟ್ಟು ಧರಣಿ ತಾತ್ಕಾಲಿಕವಾಗಿ ವಾಪಸ್ ಪಡೆದಿದ್ದಾರೆ.

error: Content is protected !!