ಮುಂಡಗೋಡ: ಇಂದೂರಿನಲ್ಲಿ ಬಿಜೆಪಿಗೆ ಮರ್ಮಾಘಾತವಾಗಿದೆ. ಇಷ್ಟು ದಿನ ಬಲಿಷ್ಟವಾಗಿದ್ದ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಬಿಜೆಪಿಗೆ ಇವತ್ತು ಕಾಂಗ್ರೆಸ್ ಶಾಕ್ ನೀಡಿದೆ. ಸುಮಾರು 250 ಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರು ಕೈ ಹಿಡಿದಿದ್ದಾರೆ. ಇದ್ರೊಂದಿಗೆ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದ ಇಂದೂರು, ಕೊಪ್ಪ, ಇಂದಿರಾನಗರದಲ್ಲಿ ಕಾಂಗ್ರೆಸ್ ಗೆ ಬೂಸ್ಟ್ ಸಿಕ್ಕಂತಾಗಿದೆ. ಇಂದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಹ್ಮದ್ ರಫೀಕ್ ದೇಸಳ್ಳಿ, ಮಾಜಿ ಉಪಾಧ್ಯಕ್ಷ ಬಿಷ್ಟನಗೌಡ ಪಾಟೀಲ್, ಸೊಸೈಟಿ ಮಾಜಿ ಅಧ್ಯಕ್ಷ ರವಿಚಂದ್ರ ದುಗ್ಗಳ್ಳಿ ಸೇರಿದಂತೆ ಇಂದೂರು, ಕೊಪ್ಪ, ಇಂದಿರಾನಗರದ ಹಲವು ಮುಖಂಡರು ಕಾಂಗ್ರೆಸ್ ಸೇರಿದ್ರು. ವಿ.ಎಸ್. ಪಾಟೀಲ್ ಮಾತು..! ಇನ್ನು, ಮಾಜಿ ಶಾಸಕ, ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿ ವಿ.ಎಸ್.ಪಾಟೀಲ್ ಕಾರ್ಯಕ್ರಮದಲ್ಲಿ ಮಾತನಾಡಿದ್ರು, ಜನ ಬಲವೋ..? ಹಣ ಬಲವೋ..? ಎಂಬ ಜಿದ್ದಿನ ಚುನಾವಣೆ ನಮ್ಮ ಮುಂದಿದೆ, ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆಯಾಗಿ ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಅಂತಾ ಮನವಿ ಮಾಡಿದ್ರು. ರೇಶನ್ ಅಕ್ಕಿಯಲ್ಲೂ ಪರ್ಸೆಂಟೇಜ್..! ಬಿಜೆಪಿ...
Top Stories
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
ಉದ್ಯೋಗ ಖಾತರಿಯಲ್ಲಿ ಮಹಿಳಾ ಕಾರ್ಮಿಕರು ಭಾಗವಹಿಸುವಿಕೆ ಹೆಚ್ಚಿಸಲು ಸ್ತ್ರೀ ಚೇತನ ಅಭಿಯಾನ..!
ಯತ್ನಾಳ ಉಚ್ಚಾಟನೆಯ ಪರಿಣಾಮ ಎರಡ್ಮೂರು ದಿನದಲ್ಲಿ ಗೊತ್ತಾಗತ್ತೆ: ಶಿವರಾಮ್ ಹೆಬ್ಬಾರ್
ಮುಂಡಗೋಡ ತಾಲೂಕಿನ ಹಲವು ಕಾರ್ಯಕ್ರಮಗಳಲ್ಲಿ ಶಾಸಕ ಶಿವರಾಮ್ ಹೆಬ್ಬಾರ ಭಾಗಿ..!
ಮಳಗಿ ಬಳಿ KSRTC ಬಸ್ ಮೇಲೆ ಉರುಳಿ ಬಿದ್ದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ, ತಪ್ಪಿದ ಭಾರೀ ಅನಾಹುತ..!
ಜಿಲ್ಲೆಯಲ್ಲಿ ಗೃಹ ಸಚಿವ: ಗೋವಾ ಗಡಿಯಲ್ಲಿ ಎಚ್ಚರಿಕೆ ವಹಿಸಿ: ಡಾ.ಜಿ. ಪರಮೇಶ್ವರ್
ಯತ್ನಾಳ್ ಉಚ್ಚಾಟನೆ, ಇದು ಅನಿವಾರ್ಯವಾಗಿ ತೆಗೆದು ಕೊಂಡಿರೋ ಕ್ರಮ, ವಿಜಯೇಂದ್ರ ಸ್ಪಷ್ಟನೆ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ..! ಕೊನೆಗೂ ಶಾಕ್ ಕೊಟ್ಟ ಹೈಕಮಾಂಡ್..!
ಮುಂಡಗೋಡಲ್ಲಿ SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ನೇಣಿಗೆ ಶರಣು..! ಫೇಲ್ ಆಗೋ ಆತಂಕದಲ್ಲಿ ಸಾವಿಗೆ ಕೊರಳೊಡ್ಡಿದ ಬಾಲಕ..!
ಭಾರೀ ಮಳೆ ಗಾಳಿಗೆ ಹಾರಿಬಿದ್ದ ಸಿಡ್ಲಗುಂಡಿ ಶಾಲೆಯ ಮೇಲ್ಚಾವಣಿ, ಅದೃಷ್ಟವಶಾತ್ ವಿದ್ಯಾರ್ಥಿಗಳು ಬಚಾವ್..!
ಮಾರ್ಚ 26 ರಿಂದ ಎರಡು ದಿನ ಜಿಲ್ಲೆಯಲ್ಲಿ ಗೃಹ ಸಚಿವರ ಪ್ರವಾಸ..! ಏನೇನು ಕಾರ್ಯಕ್ರಮ..?
ಖಾಸಗಿ ಫೈನಾನ್ಸ್ ಉದ್ಘಾಟನೆಗೆ ಹೋಗಿದ್ದ ಮತ್ತೋರ್ವ ಶಿಕ್ಷಕಗೂ ನೋಟೀಸ್ ಜಾರಿ..!
IPL ಬೆಟ್ಟಿಂಗ್ ದಂಧೆಕೋರರು ಜಿಲ್ಲೆಯಲ್ಲಿ ಬಾಲ ಬಿಚ್ಚಂಗಿಲ್ಲ, ಎಸ್ಪಿ ನಾರಾಯಣ್ ಖಡಕ್ ಸಂದೇಶ..! ದಂಧೆ ಮಟ್ಟ ಹಾಕಲು ಗಟ್ಟಿ ಪ್ಲಾನ್ ರೆಡಿ..!
ಇಂದೂರು ಜಿ.ಪಂ ಕ್ಷೇತ್ರದಲ್ಲಿ ಬಿಜೆಪಿಗೆ ಶಾಕ್, 250 ಕ್ಕೂ ಹೆಚ್ಚು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!
ಅಗಡಿ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತ, ನಂದಿಕಟ್ಟಾದ ಇಬ್ಬರು ಸೇರಿ, ನಾಲ್ವರಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಗಡಿಭಾಗ ಅಗಡಿ ಮಿಲ್ ಸಮೀಪದ ನೆಲ್ಲಿಹರವಿ ಕ್ರಾಸ್ ಬಳಿ ಭೀಕರ ಅಪಘಾತವಾಗಿದೆ. ಪರಿಣಾಮ ನಾಲ್ವರಿಗೆ ಗಂಭೀರ ಗಾಯವಾಗಿದೆ. ಬೈಕ್ ಗಳ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಘಟನೆ ನಡೆದಿದೆ. ಅಗಡಿ ಶಾಂತಿನಗರದ ಸುರೇಶ್ ಎಂಬುವ ಯುವಕ, ನಂದಿಕಟ್ಟಾ ಗ್ರಾಮದ ಮಹಮದ್ ದುಂಡಸಿ (37), ಈಸಾಕ್ ಯಲ್ಲಾಪುರ (35) ಇಬ್ಬರು ಯುವಕರಿಗೆ ಹಾಗೂ ಕಲಘಟಗಿ ತಾಲೂಕಿನ ಓರ್ವ ಯುವಕನಿಗೆ ಗಂಭೀರ ಗಾಯವಾಗಿದೆ. ನೆಲ್ಲಿಹರವಿ ಕ್ರಾಸ್ ಬಳಿ ಘಟನೆ ನಡೆದಿದ್ದು, ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಗಡಿ ಮಿಲ್ ಬಳಿ ಬೈಕ್ ಅಪಘಾತ, ಓರ್ವ ಯುವಕನಿಗೆ ಗಾಯ, ಆಸ್ಪತ್ರೆಗೆ ರವಾನೆ..!
ಮುಂಡಗೋಡ ತಾಲೂಕಿನ ಅಗಡಿ ಮಿಲ್ ಬಳಿ ಮತ್ತೊಂದು ಬೈಕ್ ಅಪಘಾತವಾಗಿದೆ. ಪರಿಣಾಮ ಓರ್ವ ಯುವಕನಿಗೆ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿವೆ. ಕಲಘಟಗಿ ತಾಲೂಕಿನ ನೆಲ್ಲಿಹರವಿ ಗ್ರಾಮದ ಮಲ್ಲಿಕಜಾನ್ ವಾಲೀಕಾರ್ ಎಂಬುವವನೇ ಬೈಕ್ಅಪಘಾತದಲ್ಲಿ ಗಾಯಗೊಂಡ ಯುವಕನಾಗಿದ್ದಾನೆ. ಈತ ಅಗಡಿ ಸಮೀಪದ ಪೆಟ್ರೊಲ್ ಬಂಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇಂದು ಕೆಲಸ ಮುಗಿಸಿ ಹೊರಟಿದ್ದಾಗ ಘಟನೆ ನಡೆದಿದೆ. ಇನ್ನು ಗಾಯಾಳುವನ್ನು ಅಂಬುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾವಿನಲ್ಲೂ ಸಾರ್ಥಕತೆ ಮೆರೆದ ಅಗಡಿಯ ಯುವಕ ಸಂಜು ಸಿದ್ದಪ್ಪ ಗಳಗಿ, ನೇತ್ರದಾನ, ಅಂಗಾಂಗ ದಾನ ಮಾಡಿ ಮಾದರಿಯಾದ ಕುಟುಂಬ..!
ಶಿವರಾತ್ರಿಯ ದಿನವೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ ಅಗಡಿಯ ಯುವಕ ಸಾವು ಕಂಡಿದ್ದಾನೆ. ಆದ್ರೆ ಈ ಯುವಕನ ಕುಟುಂಬಸ್ಥರು ನಿಜಕ್ಕೂ ತನ್ನ ಕರುಳಿನ ಕುಡಿಯ ಸಾವಿಗೂ ಒಂದು ಸಾರ್ಥಕತೆಯ ಮೆರಗು ಕೊಟ್ಟಿದ್ದಾರೆ. ಮಣ್ಣಿನಲ್ಲಿ ಮಣ್ಣಾಗ ಹೊರಟಿದ್ದ ಅಮೂಲ್ಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆಯ ಆದರ್ಶ ಮೆರೆದಿದ್ದಾರೆ. ನೋವಿನಲ್ಲೂ ಕುಟುಂಬಸ್ಥರ ಕಳಕಳಿ..! ಅಗಡಿ ಗ್ರಾಮದ ಸಂಜು ಸಿದ್ದಪ್ಪ ಗಳಗಿ (23) ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ. ಸಂಜುವಿನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸಂಪೂರ್ಣ ನಿಸ್ತೇಜ ಸ್ಥಿತಿಗೆ ತಲುಪಿದ್ದ. ಮೆದುಳು ನಿಶ್ಕ್ರೀಯವಾಗಿತ್ತು. ಹೀಗಾಗಿ, ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಮಲಗಿದ್ದ ಯುವಕ ಸಂಜು, ಬದುಕಿಳಿಯುವುದು ಅಸಾಧ್ಯದ ಮಾತು ಎಂದು ಅರಿತ ಕುಟುಂಬಸ್ಥರು, ಆ ನೋವಿನಲ್ಲೂ ಸಮಾಜದ ಕಾಳಜಿ ತೋರಿದ್ದಾರೆ. ಹೀಗಾಗಿ, ಸಂಜು ಗಳಗಿ ಕುಟುಂಬಸ್ಥರ ಕಳಕಳಿ ಮಾದರಿಯಾಗಿದೆ. ನೇತ್ರದಾನ..! ಇನ್ನು, ಮಂಗಳವಾರ ತಡರಾತ್ರಿ ಮೃತಪಟ್ಟ ಯುವಕ ಸಂಜು ಗಳಗಿಯ ನೇತ್ರದಾನ ಕೂಡ...
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಅಗಡಿಯ ಯುವಕ ಸಾವು..!
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯ ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡಿದ್ದ ಅಗಡಿಯ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಮೃತಪಟ್ಟ ಯುವಕನಾಗಿದ್ದಾನೆ. ಈತ ಮೊನ್ನೆ ಶಿವರಾತ್ರಿಯ ದಿನ ಗದ್ದೆಗೆ ಹೋಗಿ ವಾಪಸ್ ಅಗಡಿ ಕಡೆಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗಿದೆ ಕಿಮ್ಸ್ ನಲ್ಲಿ ತಡರಾತ್ರಿ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಛತ್ರಪತಿ ಶಿವಾಜಿ ಮಹಾರಾಜರು ಇಡೀ ಹಿಂದೂ ಕುಲದವರ ಆದರ್ಶ-ಸಚಿವ ಹೆಬ್ಬಾರ್
ಮುಂಡಗೋಡ: ಶಿವಾಜಿ ಮಹಾರಾಜರು ಒಂದು ಜಾತಿಗೆ ಸೀಮಿತರಾದವರಲ್ಲ, ಸಕಲ ಹಿಂದೂ ಧರ್ಮದ ಜನರ ಆರಾಧಕರು, ಅವರ ಆದರ್ಶಗಳನ್ನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕು, ತಾಯಂದಿರು ತಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಆದರ್ಶಗಳನ್ನ ತಿಳಿಸಿ ಶಿವಾಜಿ ಮಹಾರಾಜರಂತೆ ಬೆಳೆಸಬೇಕು ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಕರೆ ನೀಡಿದ್ರು. ಅವರು ತಾಲೂಕಿನ ಚಿಗಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶಿವಾಜಿ ಮಹಾರಾಜರ ಪುತ್ತಳಿಯನ್ನ ಅನಾವರಣಗೊಳಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಶುಭದಿನದಂದು ಶಿವಾಜಿ ಮಹಾರಾಜರ ಪುತ್ತಳಿಯನ್ನ ಅನಾವರಣಗೊಳಿಸಿರುವುದು ಬಹಳ ಪುಣ್ಯದ ಕೆಲಸ ಅಂತ ಸಚಿವ್ರು ಹೆಮ್ಮೆ ವ್ಯಕ್ತ ಪಡಿಸಿದ್ರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಜಿಲ್ಲಾ ಪಂಚಾಯತ ಮಾಜಿ ಸದಸ್ಯ, ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ತಾಲೂಕಾ ಮರಾಠ ಸಮುದಾಯದ ಅಧ್ಯಕ್ಷ ಡಿ.ಎಫ್.ಮಡ್ಲಿ, ಪ್ರಮುಖರಾದ ಗುಡ್ಡಪ್ಪ ಕಾತೂರ, ಗ್ರಾಮ ಪಂಚಾಯತ ಸದಸ್ಯ ಮಂಜುನಾಥ ಹೋತ್ನಳ್ಳಿ, ಸಿದ್ದು ಹಡಪದ ಎಮ್.ಪಿ.ಕುಸೂರ, ಪಕ್ಕಿರೇಶ ಓಲಿ, ಪರಶುರಾಮ ತಹಶಿಲ್ದಾರ್, ಶಿವಪುತ್ರಪ್ಪ ಹಾನಗಲ್,...
ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್, ಅಗಡಿಯ ಯುವಕನಿಗೆ ಗಂಭೀರ ಗಾಯ..!
ಮುಂಡಗೋಡ ತಾಲೂಕಿನ ಕಲಘಟಗಿ ರಸ್ತೆಯಲ್ಲಿ ಅಪಘಾತವಾಗಿದೆ. ಟಿಬೇಟಿಯನ್ ಕ್ಯಾಂಪ್ ನಂ.6 ರ ಕ್ರಾಸ್ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದು ಅಗಡಿಯ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಂಜು ಸಿದ್ದಪ್ಪ ಗಳಗಿ (23) ಗಂಭೀರ ಗಾಯಗೊಂಡ ಯುವಕನಾಗಿದ್ದಾನೆ. ಈತ ಗದ್ದೆಗೆ ಹೋಗಿ ವಾಪಸ್ ಅಗಡಿಗೆ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದಿದ್ದಾನೆ. ಪರಿಣಾಮ ಯುವಕನ ತಲೆಗೆ ಪೆಟ್ಟಾಗಿದ್ದು, ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡಗೋಡ ಹೊಸ ಓಣಿಯಲ್ಲಿ ಮನೆಗೆ ಆಕಸ್ಮಿಕ ಬೆಂಕಿ, ಅಪಾರ ಹಾನಿ..!
ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೆಂಕಿ ಅವಘಡವಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳ ಮುಂಜಾಗ್ರತೆಯಿಂದ ಆಗಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಹೊಸ ಓಣಿಯ ರಾಜು ಹಿರೇಮಠ ಎಂಬುವವರಿಗೆ ಸೇರಿದ ಮನೆಯಲ್ಲಿ, ವೀಣಾ ಬಾಳಂಬೀಡ ಎನ್ಹುವವರು ಬಾಡಿಗೆ ಇದ್ದರು. ಇಂದು ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋದ ನಂತರ ಕೆಲವೇ ಹೊತ್ತಲ್ಲಿ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಹೀಗಾಗಿ, ಸ್ಥಳೀಯರು ತಕ್ಷಣವೇ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಪೊಲೀಸರೂ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ನಂದಿಸಿದ್ದಾರೆ.
ಸವಣೂರು ಜಿಪಂ AEE ಲೋಕಾಯುಕ್ತ ಬಲೆಗೆ, 30 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಅಧಿಕಾರಿ..!
ಸವಣೂರು: ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಉಪವಿಭಾಗದ ಎಇಇ ನಿಂಬಣ್ಣ ಹೊಸಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟು ಅಧಿಕಾರಿ ತಗಲಾಕ್ಕೊಂಡಿದ್ದಾರೆ. ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಎಂಬುವವರಿಂದ ಅವರಿಂದ ರೂ 40, ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ರೂ 30 ಸಾವಿರ ಹಣವನ್ನು ಸ್ವೀಕರಿಸುವಾಗ, ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.. ಅಂದಹಾಗೆ, ಲಚ್ಚಪ್ಪ ದುರ್ಗಪ್ಪ ಕನವಳ್ಳಿ RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 2 ಕಾಮಗಾರಿಗಳನ್ನು ಮಾಡಿದ್ದರು, ಸದರಿ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ AEE ರವರನ್ನು ಕೋರಿಕೊಂಡಾಗ, ಆರೋಪಿತ ಅಧಿಕಾರಿ AEE ನಿಂಬಣ್ಣ ಹೊಸಮನಿ ಅವರು ಕಾಮಗಾರಿ ಹಣ ಬಿಡುಗಡೆ ಮಾಡಲು 40 ಸಾವಿರ ರೂ.ಗೆ ಬೇಡಿಕೆಯೊಟ್ಟಿದ್ದರು. ನಂತರ ಮುಂಗಡವಾಗಿ 30 ಸಾವಿರ ರೂ. ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸವಣೂರಿನ ಲಚ್ಚಪ್ಪ ಕನವಳ್ಳಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ...
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ “ಮುಚ್ಚಿ” ಉಂಡವನದ್ದೇ ಕಾರುಬಾರು, ಹಾಗಿದ್ರೆ, ಗಾಂಧಿನಗರ ನಿವಾಸಿಗಳ ಗೋಳು ಕೇಳೋರ್ಯಾರು..?
ಮುಂಡಗೋಡ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೆ ಅದೇನಾಗಿದೆಯೊ ಒಂದೂ ಅರ್ಥ ಆಗ್ತಿಲ್ಲ. ಇಡೀ ಪಟ್ಟಣದ ಜನ ಒಂದರ್ಥದಲ್ಲಿ ಇಲ್ಲಿನ ಬ್ರಷ್ಟಾಚಾರ ಕಂಡು ಎಲೆ ಎಡಿಕೆ ಸೇವೆ ಮಾಡೋದಷ್ಟೇ ಬಾಕಿ ಉಳಿದಿದೆ. ಯಾಕಂದ್ರೆ, ಈ ಕಚೇರಿಯಲ್ಲಿನ ಕೆಲವು ನುಂಗಣ್ಣರುಗಳ ಕರಾಮತ್ತು ಹಲವರ ಬದುಕಿನ ಜೊತೆ ಚೆಲ್ಲಾಟಕ್ಕಿಳಿದಂತಾಗಿದೆ. ಬ್ರಷ್ಟರ ಬಂಡವಾಳವಾಯ್ತಾ..? ಫಾರ್ಮ್ ನಂ.3 ಅನ್ನೋ “ಬಂಡವಾಳ” ಇಟ್ಕೊಂಡು ಅಕ್ಷರಶಃ ವ್ಯವಹಾರಕ್ಕಿಳಿದಿರೋ ಪಟ್ಟಣ ಪಂಚಾಯತಿಯ ಕೆಲವು ನುಂಗಣ್ಣರುಗಳಿಗೆ ಇದೊಂದು ರೊಕ್ಕ ಗಳಿಸುವ ಅಡ್ಡ ದಂಧೆಯಾಯ್ತಾ ಅನ್ನೋ ಅನುಮಾನ ಶುರುವಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅದೊಂದು ಏರಿಯಾದ ಹಿರಿಯ ನಾಗರೀಕರು ಹಿಡಿಶಾಪ ಹಾಕ್ತಿದಾರೆ. ನಿತ್ಯವೂ ಈ ಪಟ್ಟಣ ಪಂಚಾಯತಿಗೆ ಅಲೆದಾಡಿ, ಅಲೆದಾಡಿ ಸುಸ್ತಾಗಿದ್ದಾರೆ. ಇಲ್ಲಿನ ಅಧಿಕಾರಿಗಳಿಗೆ ಕ್ಯಾಕರಿಸಿ ಉಗಿತಿದಾರೆ. ಆದ್ರೂ ನುಂಗಣ್ಣರುಗಳಿಗೆ ಬುದ್ದಿ ಬರುತ್ತಿಲ್ಲವಂತೆ. ಹಾಗಂತ, ಗಾಂಧಿನಗರದ ಹಿರಿಯ ಜೀವಗಳು ನೊಂದು ನುಡಿಯುತ್ತಿದ್ದಾರೆ. ಗಾಂಧಿನಗರ ನಿವಾಸಿಗಳ ಗೋಳು..! ಅಸಲು, ಫಾರ್ಮ ನಂ 3 ನ್ನು ಪಡೆಯುವ ಸಲುವಾಗಿ, ವರ್ಷಗಟ್ಟಲೇ ಅಲೆದಾಡಿರೋ ಮುಂಡಗೋಡಿನ ಗಾಂಧಿನಗರ ಅಭಿವೃದ್ಧಿ ಸಮಿತಿಯ...