ಶಿವರಾತ್ರಿಯ ದಿನವೇ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ ಅಗಡಿಯ ಯುವಕ ಸಾವು ಕಂಡಿದ್ದಾನೆ. ಆದ್ರೆ ಈ ಯುವಕನ ಕುಟುಂಬಸ್ಥರು ನಿಜಕ್ಕೂ ತನ್ನ ಕರುಳಿನ ಕುಡಿಯ ಸಾವಿಗೂ ಒಂದು ಸಾರ್ಥಕತೆಯ ಮೆರಗು ಕೊಟ್ಟಿದ್ದಾರೆ. ಮಣ್ಣಿನಲ್ಲಿ ಮಣ್ಣಾಗ ಹೊರಟಿದ್ದ ಅಮೂಲ್ಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಾನವೀಯತೆಯ ಆದರ್ಶ ಮೆರೆದಿದ್ದಾರೆ.
ನೋವಿನಲ್ಲೂ ಕುಟುಂಬಸ್ಥರ ಕಳಕಳಿ..!
ಅಗಡಿ ಗ್ರಾಮದ ಸಂಜು ಸಿದ್ದಪ್ಪ ಗಳಗಿ (23)
ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಕಿಮ್ಸ್ ಗೆ ದಾಖಲಾಗಿದ್ದ. ಸಂಜುವಿನ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಸಂಪೂರ್ಣ ನಿಸ್ತೇಜ ಸ್ಥಿತಿಗೆ ತಲುಪಿದ್ದ. ಮೆದುಳು ನಿಶ್ಕ್ರೀಯವಾಗಿತ್ತು. ಹೀಗಾಗಿ, ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಮಲಗಿದ್ದ ಯುವಕ ಸಂಜು, ಬದುಕಿಳಿಯುವುದು ಅಸಾಧ್ಯದ ಮಾತು ಎಂದು ಅರಿತ ಕುಟುಂಬಸ್ಥರು, ಆ ನೋವಿನಲ್ಲೂ ಸಮಾಜದ ಕಾಳಜಿ ತೋರಿದ್ದಾರೆ. ಹೀಗಾಗಿ, ಸಂಜು ಗಳಗಿ ಕುಟುಂಬಸ್ಥರ ಕಳಕಳಿ ಮಾದರಿಯಾಗಿದೆ.
ನೇತ್ರದಾನ..!
ಇನ್ನು, ಮಂಗಳವಾರ ತಡರಾತ್ರಿ ಮೃತಪಟ್ಟ ಯುವಕ ಸಂಜು ಗಳಗಿಯ ನೇತ್ರದಾನ ಕೂಡ ಮಾಡಲಾಗಿದೆ. ಹೀಗಾಗಿ, ನೇತ್ರಾಲಯದ ಸಿಬ್ಬಂದಿಗಳು ನೇತ್ರವನ್ನು ಸುರಕ್ಷಿತವಾಗಿ ಪಡೆದಿದ್ದಾರೆ. ಈ ಮೂಲಕ ಹಲವು ಅಂಧರ ಬಾಳಿಕೆ ಬೆಳಕು ನೀಡಿದ್ದಾರೆ. ಹೀಗಾಗಿ, ಇಡೀ ತಾಲೂಕಿನಲ್ಲಿ ಸಿದ್ದಪ್ಪ ಗಳಗಿ ಕುಟುಂಬಸ್ಥರ ಸಮಾಜಪರ ಕಾಳಜಿಗೆ ಮೆಚ್ಚುಗೆ ವ್ಯಕ್ತವಾಗಿದೆ.