ಸವಣೂರು: ತಾಲೂಕಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಉಪವಿಭಾಗದ ಎಇಇ ನಿಂಬಣ್ಣ ಹೊಸಮನಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾಮಗಾರಿಯ ಹಣ ಬಿಡುಗಡೆಗಾಗಿ ಲಂಚಕ್ಕೆ ಬೇಡಿಕೆಯಿಟ್ಟು ಅಧಿಕಾರಿ ತಗಲಾಕ್ಕೊಂಡಿದ್ದಾರೆ.
ಲಚ್ಚಪ್ಪ ದುರ್ಗಪ್ಪ ಕನವಳ್ಳಿ ಎಂಬುವವರಿಂದ ಅವರಿಂದ ರೂ 40, ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟು, ರೂ 30 ಸಾವಿರ ಹಣವನ್ನು ಸ್ವೀಕರಿಸುವಾಗ, ಹಾವೇರಿ ಜಿಲ್ಲೆಯ ಲೋಕಾಯುಕ್ತ ಅಧಿಕಾರಿ ಹಾಗೂ ಸಿಬ್ಬಂದಿಗಳು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ..
ಅಂದಹಾಗೆ, ಲಚ್ಚಪ್ಪ ದುರ್ಗಪ್ಪ ಕನವಳ್ಳಿ
RDPR ಸವಣೂರು ಉಪವಿಭಾಗ ವ್ಯಾಪ್ತಿಯಲ್ಲಿ 2 ಕಾಮಗಾರಿಗಳನ್ನು ಮಾಡಿದ್ದರು, ಸದರಿ ಕಾಮಗಾರಿಗಳ ಹಣ ಬಿಡುಗಡೆ ಮಾಡುವಂತೆ AEE ರವರನ್ನು ಕೋರಿಕೊಂಡಾಗ, ಆರೋಪಿತ ಅಧಿಕಾರಿ AEE ನಿಂಬಣ್ಣ ಹೊಸಮನಿ ಅವರು ಕಾಮಗಾರಿ ಹಣ ಬಿಡುಗಡೆ ಮಾಡಲು 40 ಸಾವಿರ ರೂ.ಗೆ ಬೇಡಿಕೆಯೊಟ್ಟಿದ್ದರು. ನಂತರ ಮುಂಗಡವಾಗಿ 30 ಸಾವಿರ ರೂ. ಹಣ ಪಡೆಯುತ್ತಿರುವಾಗಲೇ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸವಣೂರಿನ ಲಚ್ಚಪ್ಪ ಕನವಳ್ಳಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.