ಮುಂಡಗೋಡ: ಟಿಬೇಟಿಯನ್ ಕಾಲೋನಿಯಲ್ಲಿ ಸ್ವಾತಂತ್ರೋತ್ಸವದ 75 ನೇ ಅಮೃತ ಮಹೋತ್ಸವದ ದಿನವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ರು. ಅವತ್ತು ಬರೋಬ್ಬರಿ 84 ಸಾವಿರ ಮೌಲ್ಯದ 6 ಕೆಜಿ ತೂಗುವ ಹಸಿ ಹಸಿ ಗಾಂಜಾ ವಶಕ್ಕೆ ಪಡೆದಿದ್ರು. ಅಸಲು, ಅವತ್ತು ಹಾಗೆ ಗಾಂಜಾದೊಂದಿಗೆ ಪೊಲೀಸರ ಬಲೆಗೆ ಬಿದ್ದಿದ್ದವನು ಟಿಬೇಟಿಗನಾಗಿದ್ದ. ನಶೆಯ ಜಗತ್ತಿನ ಎಜೆಂಟ್ ಆಗಿದ್ದ. ಇದ್ರೊಂದಿಗೆ, ಮುಂಡಗೋಡಿನ ಟಿಬೇಟಿಯನ್ ಕಾಲೋನಿಯಲ್ಲಿ ನಶೆಯ ಗುಂಗು ಹಿಡಿಸುವವನಾಗಿದ್ದ. ನಿಜ ಅಂದ್ರೆ…. ಟಿಬೇಟಿಯನ್ ಕಾಲೋನಿಯ ಗಲ್ಲಿಗಳಲ್ಲಿ ಕಾಲಿಟ್ರೆ ಆಮ್ಲಜನಕ ಅದೇಷ್ಟು ಸಿಗತ್ತೋ ಗೊತ್ತಿಲ್ಲ. ಆದ್ರೆ, ಸಿಗರೇಟಿನ ಘಮ್ಮು ವಾಸನೆ ಗಬ್ಬೆಬ್ಬಿಸಿರತ್ತೆ. ಇಲ್ಲಿ ಹೈಸ್ಕೂಲಿಗೆ ಹೋಗುವ ಕೆಲವು ವಿದ್ಯಾರ್ಥಿಗಳೂ ಕೂಡ ಮಾದಕ ಜಗತ್ತಿನ ದಾಸರಾಗಿರ್ತಾರೆ ಅನ್ನೋದು ದುರಂತ. ಅಸಲಿಗೆ, ಟಿಬೇಟಿಗರಲ್ಲಿ ಹಿರಿಯರು ಶ್ರಮ ಜೀವಿಗಳಾಗಿರ್ತಾರೆ. ಬೆಳಗಾಯಿತೆಂದ್ರೆ ಕೆಲಸ ಕೆಲಸ ಅಂತಾ ಬೆವರು ಹರಿಸೋರೂ ಇರ್ತಾರೆ. ಆದ್ರೆ, ಇಲ್ಲಿನ ಕೆಲ ಯುವ ಪಡೆ ಮಾತ್ರ ನಶೆಯ ಗುಂಗಿನಲ್ಲೇ ತೇಲಾಡುವ ಚಟ ಹಚ್ಚಿಕೊಂಡಿದೆ ಎನ್ನುವ ಮಾತುಗಳಿವೆ. ಈ ಕಾರಣಕ್ಕಾಗೇ,...
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಕಲಘಟಗಿ ದಾಸ್ತಿಕೊಪ್ಪ ಬಳಿ ಭೀಕರ ಸರಣಿ ಅಪಘಾತ ಸ್ಥಳದಲ್ಲೇ ಇಬ್ಬರ ಸಾವು..!
ಕಲಘಟಗಿ: ಇಲ್ಲಿನ ದಾಸ್ತಿಕೊಪ್ಪ ಬಳಿ ಬೆಳ್ಳಂ ಬೆಳಿಗ್ಗೆ ಭೀಕರ ಸರಣಿ ಅಪಘಾತವಾಗಿದೆ. ಕ್ರೂಸರ್, ಖಾಸಗಿ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ನಡೆದಿರೊ ಅಪಘಾತದ ಇದಾಗಿದ್ದು ಸೀಬರ್ಡ್ ಬಸ್ ಲಾರಿ ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತವಾಗಿದೆ. ಅಪಘಾತದ ಭೀಕರತೆಗೆ ಕ್ರೂಸರ್ ವಾಹನ ಎರಡು ಹೋಳಾಗಿದೆ. ಹೀಗಾಗಿ ಕ್ರೂಸರ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ. ಕಲಘಟಗಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ದುಂಢಸಿ, ಅ.ಮ. ಕೊಪ್ಪದಿಂದ ಹೊಂಬುಜ ಕ್ಷೇತ್ರಕ್ಕೆ ಪಾದಯಾತ್ರೆ, ಅರಟಾಳದಲ್ಲಿ ಮುನಿಶ್ರೀ ಚಾಲನೆ..!
ಶಿಗ್ಗಾವಿ: ತಾಲೂಕಿನ ಅ. ಮ.ಕೊಪ್ಪ ಹಾಗೂ ದುಂಡಶಿ ಗ್ರಾಮದ ಜೈನ ಶ್ರಾವಕರು ಶ್ರೀ ಕ್ಷೇತ್ರ ಹೊಂಬುಜ ಪದ್ಮಾವತಿದೇವಿಯ ದರ್ಶನಕ್ಕಾಗಿ ಪಾದಯಾತ್ರೆ ಹೊರಟಿದ್ದಾರೆ. ನೂರಾರು ಶ್ರಾವಕರ ತಂಡ ಇಂದಿನಿಂದ ಪಾದಯಾತ್ರೆ ಪ್ರಾರಂಭಿಸಿದೆ. ಜೈನರ ಅತಿಶಯ ಕ್ಷೇತ್ರ ಅರಟಾಳದಲ್ಲಿ ಮುನಿಶ್ರೀ ಪುಣ್ಯಸಾಗರ ಮಹಾರಾಜರು ಹಾಗೂ ಬಾ.ಬ್ರ. ಸೋಮದೇವ ಬೈಯಾಜಿಯವವರ ನೇತೃತ್ವದಲ್ಲಿ ಹೊಂಬುಜ ಪಾದಯಾತ್ರೆಗೆ ಚಾಲನೆ ನೀಡಿದ್ರು. ಈ ವೇಳೆ ರವಿ ಪಾಸರ, ಪ್ರಕಾಶ್ ಧರಣೆಪ್ಪನವರ್, ಸುನೀಲ್ ಆರೆಗೊಪ್ಪ, ಸುಧೀರ್ ಛಬ್ಬಿ, ಮಹಾವೀರ ಧಾರವಾಡ, ಪ್ರಶಾಂತ ಬಿಶೆಟ್ಟಿ, ಪಾಯಪ್ಪ ಬ್ಯಾಹಟ್ಟಿ ಹಾಗೂ ಗ್ರಾಮದ ಶ್ರಾವಕ ಶ್ರಾವಕಿಯರು ಹಾಜರಿದ್ದರು.
ಮುಂಡಗೋಡ APMC ಸಮೀಪ, ಎಮ್ಮೆ ಅಡ್ಡ ಬಂದುಮರಕ್ಕೆ ಡಿಕ್ಕಿ ಹೊಡೆದ ಕಾರ್, ಓರ್ವ ಮಹಿಳೆ ಸ್ಥಳದಲ್ಲೇ ಸಾವು, ಐವರಿಗೆ ಗಾಯ..!
ಮುಂಡಗೋಡ: ಪಟ್ಟಣದ APMC ಬಳಿ ಭೀಕರ ಅಪಘಾತವಾಗಿದೆ. ಕಾರಿಗೆ ಎಮ್ಮೆ ಅಡ್ಡ ಬಂದ ಪರಿಣಾಮ, ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಐವರಿಗೆ ಗಂಭೀರ ಗಾಯವಾಗಿದೆ. ಮಹಾರಾಷ್ಟ್ರ ಕೊಲ್ಲಾಪುರ ಮೂಲದ ರೂಪಾಲಿ ಗೋಂದಳಿ (42) ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಇನ್ನು ಕಾರಲ್ಲಿ ಇನ್ನುಳಿದ ಐವರಿಗೆ ಗಾಯವಾಗಿದ್ದು ಸದ್ಯ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿ ಕಡೆಯಿಂದ ಬರುತ್ತಿದ್ದ ಕಾರಿಗೆ ಎಮ್ಮೆ ಅಡ್ಡ ಬಂದಿದೆ. ಹೀಗಾಗಿ ನಿಯಂತ್ರಿಸಲು ಹೋದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನುಜ್ಜು ಗುಜ್ಜಾಗಿದೆ. ಸ್ಥಳಕ್ಕೆ ಮುಂಡಗೋಡ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದೇನಿದು ಲೋಯೊಲಾ ಶಿಕ್ಷಣ ಸಂಸ್ಥೆಯ ದುರಹಂಕಾರ..? ವಿದ್ಯಾರ್ಥಿಗಳ ರಕ್ಷಾಬಂಧನ ಕಿತ್ತೊಗೆದದ್ದು ಸರಿನಾ..? ಹಿಂದುಪರ ಸಂಘಟನೆಗಳ ಪ್ರೊಟೆಸ್ಟ್..!
ಮುಂಡಗೋಡಿನ ಲೋಯೊಲಾ ಶಿಕ್ಷಣ ಸಂಸ್ಥೆ ವಿರುದ್ಧ ಹಿಂದು ಸಂಘಟನೆಗಳು ಆಕ್ರೋಶ ವ್ಯಕ್ತ ಪಡಿಸಿವೆ. ಹಿಂದು ವಿದ್ಯಾರ್ಥಿಗಳು ಕೈಗೆ ಕಟ್ಟಿಸಿಕೊಂಡಿದ್ದ ರಕ್ಷಾಬಂಧನದ ರಾಖಿಗಳನ್ನು ಈ ಶಾಲೆಯಲ್ಲಿ ಕಿತ್ತೊಗೆಯಲಾಗ್ತಿದೆಯಂತೆ, ಹಿಂದು ವಿದ್ಯಾರ್ಥಿಗಳು ಹಣೆಗೆ ಕುಂಕುಮ ಹಚ್ಚಿಕೊಳ್ಳುವ ಹಾಗಿಲ್ಲವಂತೆ, ಅಲ್ಲದೇ ಕೈಯಲ್ಲಿ ಯಾವುದೇ ತರಹದ ಧಾರ್ಮಿಕ ಭಾವನೆ ಸಾರುವ ದಾರಗಳನ್ನು ಕಟ್ಟಿಕೊಳ್ಳುವ ಹಾಗಿಲ್ಲವಂತೆ, ಹೀಗಾಗಿ ಇದ್ಯಾವ ನ್ಯಾಯ ಅಂತಾ ಪೋಷಕರು ಹಾಗು ಹಿಂದು ಸಂಘಟನೆ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ರಾಖಿಗಿಲ್ಲ “ರಕ್ಷೆ” ಇತ್ತೀಚೆಗೆ ನಡೆದ ರಕ್ಷಾಬಂಧನದಲ್ಲಿ ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ವಿದ್ಯಾರ್ಥಿಗಳು ತಮ್ಮ ಕೈಗಳಿಗೆ ರಾಖಿ ಕಟ್ಟಿಕೊಂಡು ಬಂದಿದ್ರು. ಆದ್ರೆ, ಹಾಗೆ ರಾಖಿ ಕಟ್ಟಿಕೊಳ್ಳಬೇಡಿ ಅಂತ ಇಲ್ಲಿನ ಆಡಳಿತ ಮಂಡಳಿ ವಿದ್ಯಾರ್ಥಿಗಳ ಕೈಯಲ್ಲಿದ್ದ ರಾಖಿಗಳನ್ನು ಕಿತ್ತೆಸೆದಿದೆ ಅನ್ನೊ ಆರೋಪ ಕೇಳಿಬಂದಿದೆ. ಹೀಗಾಗಿ, ಈ ಶಾಲೆಯಲ್ಲಿ ಯಾಕೆ ಅಂತಹ ರೂಲ್ಸ್..? ಅಂತಾ ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡಿದ್ದಾರೆ. ಅವ್ಯವಸ್ಥೆ ಇದೆಯಾ.? ಇನ್ನು ಈ ಶಾಲೆಯಲ್ಲಿ ವ್ಯಾಸಂಗ ಮಾಡ್ತಿರೋ ಮಕ್ಕಳಿಗೆ ತುಂಬಾ ಕೀಳು ಮಟ್ಟದಲ್ಲಿ...
ಮೂಡಸಾಲಿಯಲ್ಲಿ ಕುಸಿದು ಬಿದ್ದ ಶಾಲಾ ಕಟ್ಟಡ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ, ಛೇ..ಬಿಇಓ ಸಾಹೇಬನ ನಿರ್ಲಕ್ಷಕ್ಕೆ ಏನೇನ್ನಬೇಕು..?
ಮುಂಡಗೋಡ: ತಾಲೂಕಿನ ಮೂಡಸಾಲಿಯಲ್ಲಿ ಭಾರೀ ಅನಾಹುತವೊಂದು ಜಸ್ಟ್ ಮಿಸ್ ಆಗಿದೆ. ನಿರಂತರ ಮಳೆಯಿಂದ ನೆನೆದಿದ್ದ ಶಾಲಾ ಕೊಠಡಿ ಕುಸಿದು ಬಿದ್ದಿದೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಹೀಗಾಗಿನೇ ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ. ಮೊದಲೇ ಸಂಶಯವಿತ್ತು..! ಅಂದಹಾಗೆ, ಮೂಡಸಾಲಿಯ ಸರ್ಕಾರಿ ಶಾಲೆಯ ಕಟ್ಟಡದ ದುಸ್ಥಿತಿ ಮೊದಲೇ ಅರಿವಿತ್ತು, ಸಂಶಯವಿತ್ತು. ಯಾಕಂದ್ರೆ ಕೊಠಡಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತ್ತು. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಆದ್ರೆ, ಅಂತಹ ಆತಂಕದ ನಡುವೆಯೇ ಅದೇ ಕೊಠಡಿಯಲ್ಲೇ ವಿದ್ಯಾರ್ಥಿಗಳು ನಿತ್ಯ ಪಾಠ ಕೇಳುತ್ತಿದ್ದರು. ಹಾಗೊಂದು ವೇಳೆ ರಾತ್ರಿ ನಡೆದಿರೋ ಘಟನೆ ಹಗಲಲ್ಲಿ ನಡೆದಿದ್ದರೇ ಅದೇಂತಹ ದುರಂತ ಸಂಭವಿಸುತ್ತಿತ್ತು..? ನೀವೇ ಯೋಚಿಸಿ. ಕೊಠಡಿ ಸಮಸ್ಯೆ..! ಅಂದಹಾಗೆ, ಮೂಡಸಾಲಿ ಶಾಲೆಯಲ್ಲಿ ಒಟ್ಟೂ 103 ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದಾರೆ. ಅದ್ರಲ್ಲಿ 4 ಮತ್ತು 5 ನೇ ತರಗತಿಯ ಸುಮಾರು 30 ವಿದ್ಯಾರ್ಥಿಗಳು ಇದೇ ಶಿಥಿಲವಾದ ಕೊಠಡಿಯಲ್ಲೇ ಕುಳಿತು ಪಾಠ ಕೇಳುತ್ತಿದ್ದರು. ಅಸಲಿಗೆ, ಕೊಠಡಿ ತುಂಬ ಬಿರುಕು ಬಿಟ್ಟು ಇನ್ನೇನು ಬೀಳುವ...
ಗಾಂಜಾ ಬೆಳೆದಿದ್ದ ಚಾಲಾಕಿ ಟಿಬೇಟಿಗನ ಬಂಧನ, ಹಸಿ ಹಸಿ ಗಾಂಜಾ ವಶಕ್ಕೆ ಪಡೆದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಪೊಲೀಸರು ಸ್ವಾತಂತ್ರೋತ್ಸವದ ದಿನವೇ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಟಿಬೇಟಿಯನ್ ಕಾಲೋನಿಯಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಸಮೇತ ಆರೋಪಿಯನ್ನು ಎಳೆದು ತಂದಿದ್ದಾರೆ. ಅಂದಹಾಗೆ, ಟಿಬೇಟಿಯನ್ ಕಾಲೋನಿಯ ಕ್ಯಾಂಪ್ ನಂಬರ್ 4 ರ ನ್ಯಾಮಗೆಲ್ ಚೋಟೆನ್ ಎಂಬುವ ವ್ಯಕ್ತಿಯೇ ಆರೋಪಿಯಾಗಿದ್ದು ಸದ್ಯ ಅಂದರ್ ಆಗಿದ್ದಾನೆ. ಹಸಿ ಹಸಿಯಾದ ಗಾಂಜಾ ವಶಕ್ಕೆ ಪಡೆದುಕೊಂಡಿದ್ದು ಬರೋಬ್ಬರಿ 6 ಕೆಜಿ 900 ಗ್ರಾಂ ತೂಕ ತೂಗಿದೆ. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ, ಪಿಎಸ್ಐ ಬಸವರಾಜ್ ಮಬನೂರು, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಕೃಷಿ ಇಲಾಖೆ ಕಛೇರಿ ಎದುರು ಧ್ವಜಾರೋಹಣ ಮಾಡೇ ಇಲ್ಲ..! ಏನ್ರಿ ಕುಲಕರ್ಣಿ ಸಾಹೇಬಾ ಇದೇನಾ ನಿಮ್ಮ ಜವಾಬ್ದಾರಿ..?
ಮುಂಡಗೋಡ: ಇಲ್ಲಿನ ಕೃಷಿ ಅಧಿಕಾರಿಗಳು ಅದೆಲ್ಲಿಗೆ ಹೋಗಿ ನಿದ್ದೆ ಮಾಡುತ್ತಿದ್ದಾರೋ ಗೊತ್ತಿಲ್ಲ. ಅಸಲು “ಹರ್ ಘರ್ ತಿರಂಗಾ” ಕಾರ್ಯಕ್ರಮ ಇವ್ರಿಗೆ ಅರ್ಥವೇ ಆಗಿಲ್ಲವೆನೋ. ಯಾಕಂದ್ರೆ ಈ ಬೇಜವಾಬ್ದಾರಿ ಅಪರಾವತಾರಿ ಅಧಿಕಾರಿಗಳು ಕೃಷಿ ಇಲಾಖೆ ಎದುರು ಧ್ವಜಾರೋಹಣವನ್ನೇ ಮಾಡಿಲ್ಲ. ಹೀಗಾಗಿ, ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮಕ್ಕೆ ಕ್ಯಾರೇ ಅಂದಿಲ್ಲ. ಎಲ್ಲಿದ್ದಿರಾ ಕುಲಕರ್ಣಿ ಸಾಹೇಬ್ರೆ..? ಅಸಲು, ಮುಂಡಗೋಡಿನ ಕೃಷಿ ಇಲಾಖೆಯ ಅಂಗಳಕ್ಕೆ ಬಂದ್ರೆ ಬರೀ ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವ ಪರಿಸರವಿದೆ. ಕುಲಕರ್ಣಿ ಅನ್ನೋ ಆ ಯಪ್ಪಾ ಬರೀ ಮಾತಾಡುವುದಕ್ಕಷ್ಟೇ ಸೀಮಿತ ಅನ್ನುವಂತಾಗಿದೆ. ಹೀಗಾಗಿ, ತಾಲೂಕಿನ ಅದೇಷ್ಟೋ ರೈತರು ನಿತ್ಯವೂ “ಅಡಿಕೆ ಎಲೆ” ತಿಂದು ನೇರವಾಗಿ ಕೃಷಿ ಇಲಾಖೆ ಆಫೀಸಿನೆಡೆಗೇ ಬರುವಂತಾಗಿದೆ ಅನ್ನೋದು ಬೇರೆ ಮಾತು. ಆದ್ರೆ ಈ ಅಧಿಕಾರಿಗೆ ಸರ್ಕಾರದ ಮಹತ್ವಪೂರ್ಣ ಕಾರ್ಯಕ್ರಮದ ಅರಿವೂ ಇಲ್ಲದೇ ಹೊಯ್ತಲ್ಲ ಅನ್ನೋದೇ ಈಗಿರೋ ಮೂಲ ಆಕ್ರೋಶ. ಬಣ ಬಣಗುಡುತ್ತಿದೆ ಧ್ವಜ ಸ್ತಂಭ..! ಅಸಲು, ನಿನ್ನೆಯಿಂದ ಅಂದ್ರೆ ಆಗಷ್ಟ 13 ರಿಂದ ಪ್ರತಿದಿನ ಬೆಳಿಗ್ಗೆ ಎಂಟು ಗಂಟೆಗೆ...
ಶೂ ಧರಿಸಿಯೆ ಧ್ವಜ ಸ್ತಂಭ ಏರಿದ ಗುಂಜಾವತಿ ಅರಣ್ಯಾಧಿಕಾರಿ, ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಅಲ್ವಾ ಸಾಹೇಬ್ರೆ..?
ಮುಂಡಗೋಡ: ಸದ್ಯ, ರಾಷ್ಟ್ರಾಧ್ಯಂತ 75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮ ಜೋರಾಗಿದೆ. ಅಗಷ್ಟ 13 ರಿಂದಲೇ “ಹರ್ ಘರ್ ತಿರಂಗಾ” ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ದೇಶಾಧ್ಯಂತ ಅಮೃತ ಮಹೋತ್ಸವದ ಸಂಭ್ರಮ ಮನೆ, ಮನೆ ಮಾತಾಗಿದೆ. ಈ ಹೊತ್ತಲ್ಲೇ ಅವರೊಬ್ಬ ಅಧಿಕಾರಿ ಹೀಗೆ ಮಾಡಿದ್ದು ಸರಿನಾ ಅನ್ನೋ ಪ್ರಶ್ನೆ ಕೂಡ ತಾಲೂಕಿನಾಧ್ಯಂತ ಚರ್ಚೆಯಾಗ್ತಿದೆ. ತಾಲೂಕಿನ ಗುಂಜಾವತಿ ಭಾಗದ ಉಪ ವಲಯ ಅರಣ್ಯಾಧಿಕಾರಿಯೊಬ್ಬರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ರಾ..? ಈ ಪೋಟೋ ನೋಡಿದ್ರೆ ಎಂಥವರಿಗೂ ಹಾಗೆ ಅನ್ನಿಸದೇ ಇರಲ್ಲ. ಶ್ರೀಶೈಲ್ ಐನಾಪುರ..! ಅವ್ರ ಹೆಸ್ರು ಶ್ರೀಶೈಲ್ ಐನಾಪುರ ಸದ್ಯ ಗುಂಜಾವತಿ ಅರಣ್ಯ ಭಾಗದ ಉಪ ವಲಯ ಅರಣ್ಯಾಧಿಕಾರಿ. “ಹರ್ ಘರ್ ತಿರಂಗಾ” ಕಾರ್ಯಕ್ರಮಕ್ಕೆ ಪೂರಕವಾಗಿ ಇವತ್ತು ಗುಂಜಾವತಿಯ ತಮ್ಮ ಕಚೇರಿಯ ಎದುರು ಈ ಫಾರೆಸ್ಟರ್ ಕೂಡ ಧ್ವಜಾರೋಹಣ ಮಾಡಿದ್ದಾರೆ. ಆದ್ರೆ, ದ್ವಜಾರೋಹಣ ಮಾಡುವಾಗ ಶೂ ಧರಿಸಿಯೇ ಧ್ವಜಸ್ತಂಭದ ಮೇಲೆ ನಿಂತಿದ್ದಾರೆ. ಹೀಗಾಗಿ, ಇವರ ಈ ರೀತಿಯ ವರ್ತನೆ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಅಪಮಾನ...
ಹಿರಿಯ ಸಹಕಾರಿ ಧುರೀಣ ಎಂ.ಬಿ.ಕುಟ್ರಿ ವಿಧಿವಶ..!
ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಮುಖಂಡ, ಹಿರಿಯ ರಾಜಕಾರಣಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ್ ಕುಟ್ರಿ ವಿಧಿವಶರಾಗಿದ್ದಾರೆ. ಹುಬ್ಬಳ್ಳಿಯ SDM ನಲ್ಲಿ ಎಂ.ಬಿ.ಕುಟ್ರಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೀಡಾಗಿದ್ದ ಎಂ.ಬಿ.ಕುಟ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಅಂತಾ ತಿಳಿದು ಬಂದಿದೆ. APMC ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಂ.ಬಿ.ಕುಟ್ರಿ ಜನಾನುರಾಗಿಯಾಗಿದ್ದರು. ಶ್ರೀಯುತರ ನಿಧನಕ್ಕೆ ಹಲವು ನಾಯಕರು ಕಂಬನಿ ಮಿಡಿದಿದ್ದಾರೆ.